ಶಿವಮೊಗ್ಗ, ನ.12:
ಶಿವಮೊಗ್ಗ ಹೊರವಲಯದ ಸೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಯಾತಿನಕೊಪ್ಪದಲ್ಲಿ ಹಸುಗಳ ಕೊಟ್ಟಿಗೆಗೆ ಬೆಳಗಿನ ಜಾವ ಬೆಂಕಿ ಬಿದ್ದಿದ್ದು, ಸದ್ಯದಲ್ಲೇ ಕರು ಹಾಕುವ ಸ್ಥಿತಿಯಲ್ಲಿದ್ದ ಎರಡು ಹಸುಗಳು ಜೀವಂತ ಸಜೀವದಹನವಾಗಿವೆ. ನಿಜಕ್ಕೂ ಆ ಸನ್ನಿವೇಶವನ್ನು ನೋಡಿದರೆ ಅತಿ ಹೆಚ್ಚು ನೋವಾಗುತ್ತದೆ.
ಸಂತೋಷ್ ಎಂಬುವವರ ಮನೆಯ ಹಿಂಭಾಗದಲ್ಲಿದ್ದ ಅಡಿಕೆ ದಬ್ಬೆ ಕಟ್ಟಿದ್ದ ಕೊಟ್ಟಿಗೆಗೆ ಹೇಗೆ ಬೆಂಕಿ ಬಿತ್ತು ಎಂಬುದು ಇಲ್ಲಿಯವರೆಗೆ ತಿಳಿದುಬಂದಿಲ್ಲ
ಬೆಳಗಿನ ಜಾವ 3ರ ಹೊತ್ತಿಗೆ ಬೆಂಕಿ ಬಿದ್ದಿತ್ತು ಎನ್ನಲಾಗಿದ್ದು, ಆ ಸಂದರ್ಭಗಳಲ್ಲಿ ಕೊಟ್ಟಿಗೆಯಲ್ಲಿದ್ದ ಎರಡು ಹಸುಗಳು ಸಾವು ಕಂಡಿವೆ. ಇಡೀ ದೇಹ ಸುಟ್ಟು ಹೋಗಿದೆ.

ಆ ಹಸುಗಳು ಎಷ್ಟು ಒದ್ದಾಡಿರಬೇಕು. ಕರೆಂಟ್ ಶಾರ್ಟ್ ಸರ್ಕ್ಯೂಟ್ ನಿಂದ ಈ ಘಟನೆ ನಡೆದಿದೆಯಾ? ಅಥವಾ ಯಾರಾದರೂ ವೈಯಕ್ತಿಕ ದುರುದ್ದೇಶದಿಂದ ಇಂತಹ ಕೃತ್ಯವನ್ನು ಮಾಡಿದರೆ ಗೊತ್ತಿಲ್ಲ.

ಅದು ಸಹ ಗೋವುಗಳ ಮೇಲೆ ಏಕೆ ತಾನೇ ಇಂತಹ ಕೃತ್ಯ ಮಾಡಲು ಸಾಧ್ಯ ಎಂಬುದು ಆ ಭಾಗದ ಜನರ ಇಂಗಿತ.
ಶಿವಮೊಗ್ಗ ಗ್ರಾಮಾಂತರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು ತನಿಖೆ ನಡೆಸುತ್ತಿದ್ದಾರೆ.