ಶಿಕಾರಿಪುರ ಛಾಯಾಗ್ರಾಹಕರ ಸಂಘ
ಅಧಿಕಾರ ಹಸ್ತಾಂತರ ಕಾರ್ಯಕ್ರಮ
ಶಿಕಾರಿಪುರ.
ಛಾಯಾಗ್ರಹಣ ಒಂದು ಅಧ್ಬುತವಾದಂತಹ ಕಲೆ, ಹತ್ತು ಪೇಜು ಹೇಳುವದನ್ನು ಕೇವಲ ಒಂದು ಫೋಟೋ ಹೇಳುತ್ತದೆ, ನಮ್ಮ ತಾಲೂಕಿನಲ್ಲಿ ಅತ್ಯಂತ ಪ್ರತಿಭಾವಂತ
ಛಾಯಾಗ್ರಾಹಕರಿದ್ದಾರೆ. ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು.
ಶಿಕಾರಿಪುರ ಛಾಯಾಗ್ರಾಹಕರ ಸಂಘ ಆಯೋಜಿಸಿದ್ದ
ಅಧಿಕಾರ ಹಸ್ತಾಂತರ ಕಾರ್ಯಕ್ರಮ ದಲ್ಲಿ ಮಾತನಾಡಿದ
ಅವರುಛಾಯಾಗ್ರಹಣದ ಮೂಲಕ. ಮದುವೆಯ ಸಿಹಿ ನೆನಪುಗಳು ಸದಾ ಜೀವಂತವಾಗಿರುವಂತೆ ಮಾಡುವ
ಕುಶಲಕರ್ಮಿಗಳು ನೀವು. ಇತ್ತೀಚಿನ ವರ್ಷಗಳಲ್ಲಿ
ನಡೆಯುತ್ತಿರುವ ಫ್ರೀ ವೆಡ್ಡಿಂಗ್ ಛಾಯಾಗ್ರಾಹಕರಿಗೆ
ಅನುಕೂಲವಾಗಿದೆ, ಛಾಯಾಗ್ರಹಣದಿಂದ ಬದುಕು
ಆರಂಭಿಸಿ ಇ ಹೆಚ್ ಬಸವರಾಜ್ ಚಿತ್ರರಂಗಕ್ಕೂ ಜಾಲಿಟ್ಟಿದ್ದಾರೆ. ಛಾಯಾಗ್ರಾಹಕರು ಅತ್ಯಂತ ಸೂಕ್ಷ್ಮ ಸಂವೇದನೆ ಯುಳ್ಳವರು ಮತ್ತು ಅತ್ಯಂತ ತಾಳ್ಮೆಯುಳ್ಳವರಾ ಗಿರುತ್ತಾರೆ, ನಿಮ್ಮ ಸಂಘಟನೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬೆಳೆಯಲಿ ಛಾಯಾಗ್ರಾಹಕರ ಸಂಘಕ್ಕೆ ನಿವೇಶನ ಒದಗಿಸುವ ಭರವಸೆ ನೀಡಿದರು.
ಎಂದು ಹೇಳಿದರು.

ನಮ್ಮ ತಾಲೂಕು ಶರಣರು ನಡೆದಾಡಿದ ತಾಲೂಕು ಆಗಿದ್ದು ಇಲ್ಲಿಜನಿಸಿದ ಶರಣರ ಜನ್ಮಸ್ಥಳ ಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಶಿವಶರಣೆ ಅಕ್ಕಮಹಾದೇವಿ ಜನ್ಮಸ್ಥಳ ಉಡುಗಣಿಯನ್ನು ಕೂಡಲಸಂಗಮದ ರೀತಿಯಲ್ಲಿ ಪ್ರವಾಸೋದ್ಯಮವನ್ನಾಗಿಸುವ ನಿಟ್ಟಿನಲ್ಲಿ ಸುಮಾರು 60 ಕೋಟಿ ರೂಪಾಯಿ ವೆಚ್ಚದಲ್ಲಿ ದೆಹಲಿಯ ಅಕ್ಷರಧಾಮ ಮಾದರಿಯಲ್ಲಿ ಅಭಿವೃದ್ಧಿಯಾಗುತ್ತಿದೆ..
ಎಂದರು
ಅನುಭವಮಂಟಪದ ಸ್ಪೀಕರ್ ಶೂನ್ಯ ಸಿಂಹಾಸನಾಧೀ ಶ್ವರ ಅಲ್ಲಮಪ್ರಭುಗಳ ಜನ್ಮಸ್ಥಾನವನ್ನು ಅಭಿವೃದ್ಧಿ ಮಾಡಲಾಗುತ್ತದೆ, ಶಿಕಾರಿಪುರ ಪಟ್ಟಣದಲ್ಲಿ ಡಿಗ್ರಿ ಕಾಲೇಜ್ ವರೆಗೆ ಫುಟ್ ಪಾತ್ ನಿರ್ಮಾಣ ಮಾಡಲಾಗಿದೆ.
ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ನಮ್ಮ ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ಬೇರೆ ಬೇರೆ ತಾಲೂಕಿನಿಂದ ರೋಗಿಗಳು ಬರುತ್ತಾರೆ ,ಮಹಿಳೆಯರು ಮತ್ತು ಮಕ್ಕಳ
ಚಿಕಿತ್ಸೆಗಾಗಿ ಪೌರವಿಹಾರದ ಎದುರು ಹೈಟೆಕ್ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಪಟ್ಟಣದ ಸ್ವಚ್ಚತೆಗೆ ಪೂರಕವಾಗಿ ಡ್ರೈನೇಜ್ ನಿರ್ಮಾಣ ಮಾಡಲಾಗಿದೆ ಎಂದರು.

ನಮ್ಮದು ಕೃಷಿ ಪ್ರಧಾನವಾದ ದೇಶ ರೈತರ ಮುಖದಲ್ಲಿ
ಮಂದಹಾಸ ಮೂಡಿದರೆ ಮಾತ್ರ ನಾಡು ಸಮೃಧ್ದಿ ಯಾಗುತ್ತದೆ,ಈ ನಿಟ್ಟಿನಲ್ಲಿ ಯಡಿಯೂರಪ್ಪ ನವರು ಮುಖ್ಯಮಂತ್ರಿ ಯಾದ ಸಂದರ್ಭದಲ್ಲಿ ಸಾವಿರಾರು ಕೋಟಿ ಅನುದಾನ ನೀಡಿದ ಪರಿಣಾಮಶಾಶ್ವತ ನೀರಾವರಿ ಯೋಜನೆಯಡಿಯಲ್ಕಿ ತಾಲೂಕಿನ ಕೆರೆಗಳನ್ನು ತುಂಬಿಸುವ ಕೆಲಸವಾಗಿದೆ.,ಇದರಿಂದ ರೈತರ ಬೋರ್ ವೆಲ್ ಗಳು ರೀಚಾರ್ಜ್ ಆಗಿ ರೈತರಿಗೆ ಅನುಕೂಲವಾಗುತ್ತದೆ.
ಬರಗಾಲ ಮತ್ತು ಬೇಸಿಗೆಯಲ್ಲಿ ಜಾನುವಾರುಗಳಿಗೆ
ಕುಡಿಯುವ ನೀರಿಗೆ ಅನುಕೂಲವಾಗುತ್ತದೆ ಎಂದರು. ನೂತನ ಅಧ್ಯಕ್ಷ ಪಾರು ಸ್ವಾಮಿ ಮಾತನಾಡಿ ನೂತನ ಅಧ್ಯಕ್ಷನಾಗಿ ನನಗೆ ವಹಿಸಿರುವ ಜವಾಬ್ದಾರಿಯನ್ನು ಎಲ್ಲಾ ಸಂಘದ ಸದಸ್ಯರ ವಿಶ್ವಾಸವನ್ನು ಜೊತೆಗೆ ತೆಗೆದುಕೊಂಡು ಹೋಗಿ ಸಂಘವನ್ನು ಅಭಿವೃದ್ಧಿ ಪಥದಲ್ಲಿ ನಡೆಸುತ್ತೇನೆ ಎಂದರು.
ಛಾಯಾಗ್ರಾಹಕರ ಸಂಘದ ಗೌರವಾಧ್ಯಕ್ಷ ಇ ಹೆಚ್ ಬಸವರಾಜ್, ಜಿಲ್ಲಾ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ , ಉಪಾಧ್ಯಕ್ಷ ಸಂತೋಷ್ ಮಡ್ಡಿ ,ನಿಕಟಪೂರ್ವ ಅಧ್ಯಕ್ಷ ಉಮೇಶ್, ಶಿರಳಕೊಪ್ಪ ಸಂಘದ ಅಧ್ಯಕ್ಷರಾದ ವೀರೇಶ್, ಉಪಾಧ್ಯಕ್ಷರಾದ ಕಿರಣ್, ಕಿಟ್ಟಿ, ಶಂಭು,ರಾಜಕುಮಾರ, ಸೊರಬ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ಈಶ್ವರ್, ವಿಠಲ್ ಮಹೇಂದ್ರಕರ್, ಪ್ರಶಾಂತ್ ಮತ್ತು
ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಚನ್ನವೀರಪ್ಪ. ರುದ್ರೇಶ್ ಹೊಸೂರು ಹಾಗೂ ಶಿಕಾರಿಪುರ ಮತ್ತು ಶಿರಾಳಕೊಪ್ಪ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ವಿಟ್ಟಲ್ ಮಹೇಂದ್ರಕರ್ ಸ್ವಾಗತಿಸಿ,ಅರುಣ್ ಕುಮಾರ್ ಪ್ರಾರ್ಥಿಸಿ, ಪ್ರವೀಣ್ ನಿರೂಪಿಸಿ, ಕಣಿವಿ ಮನೆ ಮಂಜು, ವಂದನಾರ್ಪಣೆ ಮಾಡಿದರು.