ಶಿವಮೊಗ್ಗ, ಅ.18:
ಶಿವಮೊಗ್ಗ ಹೊರವಲಯದ ಶಾಲೆಯೊಂದಕ್ಕೆ ಮಾಡಿದ್ದ ಒಂದೂವರೆ ಕೋಟಿ ಖರ್ಚಿನ ಹಣದ ವಿಚಾರದಲ್ಲಿ ಮಹಿಳೆಯೋರ್ವರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದನೆ, ಜಾತಿ ನಿಂದನೆ ಮತ್ತು ಪೆಟ್ರೋಲ್ ಸುರಿದು ಬೆಂಕಿಹಚ್ಚುವ ಬೆದರಿಕೆ ಹಾಕಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂದಾರ ಶಾಲೆಯ ಕಾರ್ಯದರ್ಶಿ ಸೇರಿದಂತೆ 11 ಜನರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಈ ದೂರು ದಾಖಲಾಗಿದೆ.
ಶಾಲೆ ಅಭಿವೃದ್ದಿಗೊಳಿಸಿದ್ದವರ ಹಣದ ವ್ಯವಹಾರವನ್ನ ಬಗೆಹರಿಸಿಕೊಳ್ಳಲು ಶಾಲೆಯ ಕಾರ್ಯದರ್ಶಿ ಅವರು ಸುನೀತ ಬಿ ಹಾಗೂ ಅಭಿವೃದ್ದಿ ಪಡಿಸಿದವರ ಸಿಬ್ಬಂದಿ ಸರೋಜಾ ಎಂಬುವರನ್ನು ವೆಂಕಟೇಶ ನಗರದಲ್ಲಿರುವ ಮನೆಗೆ ಕರೆದಿದ್ದರು. ಮನೆಗೆ ಹೋದ ಸುನೀತ , ಸರೋಜಾ ಮತ್ತು ಅವರ ಕಡೆಯವರಿಗೆ ಜಾತಿ ನಿಂದನೆ ಮಾಡಿ ಪೆಟ್ರೋಲ್ ಸುರಿದು ಹತ್ಯೆ ನಡೆಸುವ ಸಂಚು ರೂಪಿಸಿದ್ದರು ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಮಾಹಿತಿ ಪ್ರಕಾರ ಅನುಪಿನಕಟ್ಟೆಯಲ್ಲಿರುವ ಮಂದಾರ ಶಾಲೆಯ ಅಭಿವೃದ್ಧಿ ವಿಚಾರದಲ್ಲಿ ಹಾಗೂ ಶಾಲೆಯವರು ಮಾತುಕತೆ ನಡೆಸಿದ್ದು, ಮುಂಗಡವಾಗಿ 30 ಲಕ್ಷ ಪಡೆದಿದ್ದರೆನ್ನಲಾಗಿದೆ. ಈ ಸಮಯದಲ್ಲಿ ನಾವು ನಿಮಗೆ ಶಾಲೆಯನ್ನು ನಡೆಸಲು ಕೊಡುತ್ತೇವೆ ಎಂದು ಒಪ್ಪಿಕೊಂಡಿದ್ದ ಎನ್ನಲಾಗಿದೆ ಆಗ ಶಾಲೆಯ ಬಣ್ಣ ಪೀಠೋಪಕರಣ ಹಾಗೂ ಇತರ ಅಭಿವೃದ್ಧಿಗಾಗಿ ಸುಮಾರು ಒಂದು ಪಾಯಿಂಟ್ ಎರಡು ಐದು ಕೋಟಿ ಖರ್ಚು

ಮಾಡಿ ಶಾಲೆಯನ್ನು ಸುಂದರವಾಗಿ ಮಾಡಿದ್ದರು ನಂತರದ ಪ್ರವೇಶದ ಸಂದರ್ಭದಲ್ಲಿ ಶಾಲೆಯನ್ನು ನಡೆಸಲು ಬಿಡದ ಹಿನ್ನೆಲೆಯಲ್ಲಿ ದೂರು ಪ್ರತಿ ದೂರುಗಳು ದಾಖಲಾಗುತ್ತಿದ್ದವು. ಈ ವ್ಯವಹಾರ ಎರಡೂ ಪಾರ್ಟಿಯವರ ಕಡೆ ಸರಿಬಾರದ ಹಿನ್ನಲೆಯಲ್ಲಿ ಹಣದ ವಿಚಾರದಲ್ಲಿ ಜಟಾಪಟಿ ನಡೆಯುತ್ತಿದೆ ಎನ್ನಲಾಗುತ್ತಿದೆ. ಈಗ ಶಾಲೆಯನ್ನು ನಿಯಮದಂತೆ ಬಿಟ್ಟುಕೊಡದೇ ನಾನು ಹಣ ಖರ್ಚು ಮಾಡಲು ಹೇಳಿಲ್ಲ ಎಂಬುದಾಗಿ ಹೇಳುತ್ತಿದ್ದಾರೆ. ಬಂಡವಾಳ ಸುರಿದವರ ಪಾಡೇನು ಎಂಬುದಿಲ್ಲಿ ಪ್ರಶ್ನೆ.
ಹಣ ಹಿಂದಿರುಗಿಸುವ ವಿಚಾರವಾಗಿ ನಡೆದ ವಾದವಿವಾದ ಈಗ ಶಾಲೆಯ ಕಾರ್ಯದರ್ಶಿ ವಿರುದ್ಧ
ಜಾತಿ ನಿಂದನೆ, ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಬೆದರಿಕೆ ದೂರು ದಾಖಲಾಗಿದೆ.