ಶಿವಮೊಗ್ಗ ನಗರದ ಸೆಕ್ರೆಟ್ ಹಾರ್ಟ್ ಕ್ರೀಡಾಂಗಣದಲ್ಲಿ ಅಕ್ಟೊಬರ್ 11ರಿಂದ 12ರ ವರೆಗೆ ಎರಡು ದಿನಗಳ ಕಾಲ ಬೆಂಗಳೂರು ವಿಭಾಗ ಮಟ್ಟದ 14 ಮತ್ತು 17 ವರ್ಷ ವಯೋಮಿತಿಯೊಳಗಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಬಾಲಕ ಮತ್ತು ಬಾಲಕಿಯರ ಫುಟ್ ಬಾಲ್ ಕ್ರೀಡಾ ಕೂಟವನ್ನು ಅಭೂತಪೂರ್ಣ, ಯಶಸ್ವಿಯಾಗಿ ಕಾಣುವ ಮೂಲಕ, ಮತ್ತೊಂದು ದಾಖಲೆ ಬರೆದಿದೆ. ಎರಡು ದಿನಗಳ ಕಾಲ ಈ ಕ್ರೀಡಾಕೂಟವು ಅಚ್ಚುಕಟ್ಟಾಗಿ ನಡೆದಿದ್ದು, ಕ್ರೀಡಾಭಿಮಾನಿಗಳ ಭಾರಿ ಮೆಚ್ಚುಗೆಗೆ ಪಾತ್ರವಾಗಿದ್ದು ವಿಶೇಷ.
ಈ ಕ್ರೀಡಾಕೂಟದ ಸಂಪೂರ್ಣ ಜವಾಬ್ದಾರಿ ಹೊತ್ತ ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಛೇರಿ, ಶಿವಮೊಗ್ಗ. ಹಾಗೂ ಜಿಲ್ಲಾ ಪುಟ್ ಬಾಲ್ ಸಂಸ್ಥೆ, ಶಿವಮೊಗ್ಗ., ಸೆಕ್ರೆಟ್ ಹಾರ್ಟ್ ವಿದ್ಯಾ ಸಂಸ್ಥೆ, ಸೆಕ್ರೆಟ್ ಹಾರ್ಟ್ ಪ್ರೌಢ ಶಾಲೆ, ಶಿವಮೊಗ್ಗ.ಇವರ ಸಹಯೋಗದಲ್ಲಿ ನಿಜಕ್ಕೂ ಅತ್ಯಂತ ವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿ ಬೆಂಗಳೂರು ವಿಭಾಗದ 11 ಜಿಲ್ಲೆಗಳಿಂದ 800 ಕ್ಕೂ ಹೆಚ್ಚು ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಕ್ರೀಡೆಗೆ ಮೆರಗು ತಂದಿದ್ದಾರೆ.

ಬೆಂಗಳೂರು ವಿಭಾಗ ಮಟ್ಟದ 11 ಜಿಲ್ಲೆಗಳಿಂದ, ಬಾಲಕರ ಮತ್ತು ಬಾಲಕಿಯರ ತಂಡಗಳು ಪುಟ್ ಬಾಲ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದವು, ಕ್ರೀಡಾಪಟುಗಳ ಅನುಕೂಲಕ್ಕಾಗಿ ಸಾರಿಗೆ ವ್ಯವಸ್ಥೆ, ಸುಸಜ್ಜಿತವಾದ ವಸತಿಯನ್ನು ಕಲ್ಪಿಸಿ ಕ್ರೀಡಾಪಟುಗಳ ಮೆಚ್ಚುಗೆಗೆ ಶಿಕ್ಷಣ ಇಲಾಖೆ ಪಾತ್ರವಾಯಿತು.
ಫುಟ್ ಬಾಲ್ ಸುಸಜ್ಜಿತವಾದ ಅಂಕಣದಲ್ಲಿ ಕ್ರೀಡಾಕೂಟ ಆಯೋಜಿಸುವ ಮೂಲಕ, ಎಲ್ಲವೂ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಂಡಿದ್ದು ವಿಶೇಷವಾಗಿತ್ತು. ಎಂಟನೂರಕ್ಕೂ ಹೆಚ್ಚು ಮಕ್ಕಳು ಎರಡು ದಿನವೂ ನಗರದ ವಿವಿದಡೆಗಳಲ್ಲಿ ವಾಸ್ತವ್ಯ ಹೂಡಿ, ಅತ್ಯುತ್ತಮ ಆತಿಥ್ಯ ಸ್ವೀಕರಿಸುವ ಮೂಲಕ ಕ್ರೀಡಾಕೂಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
25ಕ್ಕೂ ಹೆಚ್ಚು ದೈಹಿಕ ಶಿಕ್ಷಣ ಶಿಕ್ಷಕರು ಕ್ರೀಡಾಧಿಕಾರಿಗಳಾಗಿ ನಿಯೋಜನೆ ಮಾಡಲಾಗಿತ್ತು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ನುರಿತ ಅನುಭವಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಪುಟ್ ಬಾಲ್ ಕ್ರೀಡಾಕೂಟದ ರೆಫ್ರಿಗಳಾಗಿ ಕೆಲಸ ಮಾಡಿದ 20ಕ್ಕೂ ಹೆಚ್ಚು ರೆಫ್ರಿಗಳನ್ನು ಈ ಪಂದಾವಳಿಗೆ ಆಹ್ವಾನಿಸಲಾಗಿತ್ತು.

ಕ್ರೀಡಾಕೂಟಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ 800ಕ್ಕೂ ಹೆಚ್ಚು ಮಕ್ಕಳು ಬಂದಿದ್ದರೂ, ಎಲ್ಲಿಯೂ ಗೊಂದಲ, ತಕರಾರುಗಳು ಕೇಳಿ ಬರಲಿಲ್ಲ, ಅಷ್ಟು ಮಾತ್ರವಲ್ಲ ಎಲ್ಲಾ ಸ್ಪರ್ಧೆಗಳು ಸಮಯಕ್ಕೆ ಸರಿಯಾಗಿ ನಿಗದಿತ ದಿನದಂದೇ ನಿರ್ದಿಷ್ಟ ಅಂಕಣಗಳಲ್ಲಿಯೇ ನಡೆದವು. ಇವೆಲ್ಲ ಜಿಲ್ಲಾ ಶಿಕ್ಷಣ ಇಲಾಖೆಯ ಆಯೋಜಿಸುವ ಪಂದಾವಳಿಯ ವೈಶಿಷ್ಟವೇ ಹೌದು.ಕ್ರೀಡಾ ಕೂಟವು ಅಭೂತಪೂರ್ವ ಯಶಸ್ಸಿಗೆ ಕಾರಣವಾಗುವಂತೆ ನೋಡಿಕೊಂಡಿದ್ದು, ಕ್ರೀಡಾಕೂಟ ವೀಕ್ಷಣೆಗೆ ಬಂದ ಅಭಿಮಾನಿಗಳಲ್ಲಿ ಭಾರಿ ಮೆಚ್ಚುಗೆಗೆ ಕಾರಣವಾಯಿತು.
ಆತಿಥ್ಯಕ್ಕೆ ಕ್ರೀಡಾಪಟುಗಳು ಮೆಚ್ಚುಗೆ : ದಾಸೋಹದ ವಿಷಯದಲ್ಲಿ ಶಿವಮೊಗ್ಗ ಜಿಲ್ಲೆ ವಿಶೇಷವಾಗಿ ಕ್ರೀಡೆ ಮತ್ತು ಕ್ರೀಡಾಪಟುಗಳ ವಿಷಯದಲ್ಲಿ ಜಿಲ್ಲಾಡಳಿತ, ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್ ಎಸ್.ಆರ್.ಮತ್ತು ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳಾದ ಪ್ರಕಾಶ್ ಎಂ. ಜಿಲ್ಲೆಯ ಎಲ್ಲಾ ವಿಭಾಗದ ಅಧಿಕಾರಿಗಳು ಖುದ್ದಾಗಿ ಎಲ್ಲಾ ವ್ಯವಸ್ಥೆಗಳನ್ನು ಗಮನಿಸುತ್ತಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವಂತಹ ಕ್ರೀಡಾಪಟುಗಳು, ತರಬೇತುದಾರರು, ತೀರ್ಪುಗಾರರಿಗೂ, ಬೆಂಗಳೂರು ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಕ್ರೀಡಾಪಟುಗಳಿಗೆ ಹಾಗೂ ಪೋಷಕರಿಗೆ ಶಿವಮೊಗ್ಗ ಸೆಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಯ ವತಿಯಿಂದ ಮದ್ಯಾಹ್ನದ ಊಟವನ್ನು ಸವಿಯಲು ವಿಶೇಷವಾಗಿ ಆಯೋಜಿಸಿರುವುದು ವಿಶೇಷವಾಗಿತ್ತು. ಜಿಲ್ಲಾಡಳಿತ, ಶಿಕ್ಷಣ ಇಲಾಖೆಯ ಅಧಿಕಾರಿ ವರ್ಗದವರು, ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು, ಶಿಕ್ಷಕ ವೃಂದದ ಶ್ರಮಮದ ನಡುವೆ ಯಶಸ್ವಿ ಯಾಗಿರುವುದು ಹೆಮ್ಮೆಯ ವಿಚಾರ.
ವಿಭಾಗ ಮಟ್ಟದ ಪುಟ್ ಬಾಲ್ ಕ್ರೀಡಾಕೂಟವು ಮಕ್ಕಳಲ್ಲಿ ಹಬ್ಬದ ಸಂಭ್ರಮವೇ ಮನೆ ಮಾಡುವಂತೆ ಮಾಡಿತ್ತು, ಸ್ಪರ್ಧೆಗಳು ನಡೆಯುತ್ತಿದ್ದಾಗ ಸೆಕ್ರೆಟ್ ಹಾರ್ಟ್ ಕ್ರೀಡಾಂಗಣದಲ್ಲಿ ನಿತ್ಯವೂ ಮಕ್ಕಳ ಸೈನ್ಯವೇ ಜಮಾಹಿಸುತ್ತಿತ್ತು, ಸ್ಪರ್ಧೆಗಳು ಸುರುವಾದರೆ ಸಾಕು, ಅವರ ಉತ್ಸಾಹ ಇಮ್ಮಡಿಗೊಳ್ಳುತ್ತಿತ್ತು. ಆಟಗಾರರನ್ನು ಹುರಿದಿಂಬಿಸಲು ಮಕ್ಕಳು ಚಪ್ಪಾಳೆ ತಟ್ಟಿ, ಜೈಕಾರ ಹಾಕಿ ಸಂಭ್ರಮ ಅಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುವಂತೆ ಮಾಡಿತ್ತು.
ಸೆಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಯ ಹಳೆಯ ವಿದ್ಯಾರ್ಥಿ,ವಾಯು ಮಾಲಿನ್ಯ ವಿಭಾಗದ ಅಧಿಕಾರಿ ಹರ್ಷ ರವರು ವಿಜೇತ ತಂಡಗಳಿಗೆ ಅಕ್ಕಾಕರ್ಷಕ ಟ್ರೋಪಿ ಮತ್ತು ನೆನಪಿನ ಕಾಣಿಕೆಯನ್ನು ನೀಡಿರುತ್ತಾರೆ. ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಮಂಜುನಾಥ್ ಎಸ್.ಆರ್.,ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಪ್ರಕಾಶ್ ಎಂ.,ಮುಖ್ಯ ಶಿಕ್ಷಕ ಯುಬರ್ಟ್ ಮಿರಾಂಡ, ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮೈಕಲ್ ಕಿರಣ್, ಇನ್ನು ಮುಂತಾದವರು ವಿಜೇತ ತಂಡಗಳಿಗೆ ಪ್ರಶಸ್ತಿ ಪತ್ರ, ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.
ರಾ. ಹ.ತಿಮ್ಮೇನಹಳ್ಳಿ, ಶಿವಮೊಗ್ಗ.
ಆಟ ಅಂತ ಬಂದಾಗ ಸೋಲು ಗೆಲುವು ಸಹಜ.ಆದರೆ ಯಾವ ಪಂದ್ಯಾವಳಿಗಳು ಮಕ್ಕಳಲ್ಲಿ ಹೊಸ ಹುರುಪು,ಉತ್ಸಾಹಕ್ಕೆ ಮುನ್ನಡಿ ಬರೆಯುತ್ತವೆ.ಆ ನಿಟ್ಟಿನಲ್ಲಿ ಕ್ರೀಡೆಯು ದೈಹಿಕವಾಗಿ ಸದೃಢವಾಗಿಸುವುದರ ಜೊತೆಗೆ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಸತತ ಅಭ್ಯಾಸ, ಪರಿಶ್ರಮ,ನಿತ್ಯ ಸಾಧನೆ ಇರುವವರಿಗೆ ಮಾತ್ರ ಕ್ರೀಡೆ ಒಲಿಯುತ್ತದೆ.ಕ್ರೀಡಾ ಕೂಟದ ಯಶಸ್ವಿಗೆ, ಪ್ರತ್ಯಕ್ಷವಾಗಿ, ಪರೋಕ್ಷವಾಗಿ, ಸಹಕಾರ ನೀಡಿದ ಎಲ್ಲಾ ಇಲಾಖೆಯ ಅಧಿಕಾರಿ ವೃಂದಕ್ಕೂ, ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿ, ಪದಾಧಿಕಾರಿಗಳಿಗೂ ಆತ್ಮೀಯ ಅಭಿನಂದನೆಗಳು.
ಮಂಜುನಾಥ್ ಎಸ್. ಆರ್.
ಉಪ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ಶಿವಮೊಗ್ಗ.
ಬಾಕ್ಸ್: ಬೆಂಗಳೂರು ದಕ್ಷಿಣ ಮೇಲುಗೈ ಸಾಧಿಸಿದೆ: ಬೆಂಗಳೂರು ವಿಭಾಗ ಮಟ್ಟದ ಪುಟ್ ಬಾಲ್ ಪಂದ್ಯಾವಳಿಯಲ್ಲಿ 14ವರ್ಷ ಮತ್ತು 17ವರ್ಷ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಮೇಲುಗೈ ಸಾದಿಸಿ ಕ್ರೀಡಾ ಕೂಟದಲ್ಲಿ ಯಶಸ್ವಿ ತಂಡವಾಗಿ ಹೊರಮ್ಮಿದ್ದಾರೆ.
ಬಾಲಕರ ವಿಭಾಗದಲ್ಲಿ:
14ವರ್ಷ- ಬೆಂಗಳೂರು ದಕ್ಷಿಣ ಪ್ರಥಮ, ಶಿವಮೊಗ್ಗ ದ್ವಿತೀಯ
17ವರ್ಷ- ಬೆಂಗಳೂರು ಉತ್ತರ ಪ್ರಥಮ, ಕೋಲಾರ ದ್ವಿತೀಯ ಸ್ಥಾನ ಪಡೆದರೆ.
ಬಾಲಕಿಯರ ವಿಭಾಗದಲ್ಲಿ:
14 ವರ್ಷ- ಬೆಂಗಳೂರು ದಕ್ಷಿಣ ಪ್ರಥಮ, ಬೆಂಗಳೂರು ಗ್ರಾಮಾಂತರ ದ್ವಿತೀಯ ಪಡೆದರೆ.
17ವರ್ಷ- ಬೆಂಗಳೂರು ಗ್ರಾಮಾಂತರ ಪ್ರಥಮ, ಬೆಂಗಳೂರು ದಕ್ಷಿಣ ದ್ವಿತೀಯ ಸ್ಥಾನ ಪಡೆದು, ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಯಾಗಿ,.ಭಾಗವಹಿಸುತ್ತಿರುವುದು ಹೆಮ್ಮೆಯ ವಿಚಾರ.