ಶಿವಮೊಗ್ಗ,ಅ.16:
ಶಿವಮೊಗ್ಗ ಗೋಪಾಳದ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ವಸತಿ ಶಾಲೆಯಲ್ಲಿ ನಾಳೆ (ಅ.17) ರ ಬೆಳಗ್ಗೆ 10 ಗಂಟೆಗೆ ಶಾಲಾ ಆವರಣದಲ್ಲಿ ಜ್ಞಾನ ವಿಜ್ಞಾನ ಸೃಜನಶೀಲ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಕುವೆಂಪು ವಿಶ್ವವಿದ್ಯಾನಿಲಯದ ಕೈಗಾರಿಕಾ ರಾಸಾಯನಿಕ ಶಾಸ್ತ್ರದಲ್ಲಿ ಪಿಜಿ ಅಧ್ಯಯನಗಳು ಮತ್ತು ಸಂಶೋಧನಾ ವಿಭಾಗದ ಪ್ರೊ. ಕೆ ವಸಂತ ಕುಮಾರ್ ಪೈ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮಕೃಷ್ಣ ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ. ಡಿ.ಆರ್. ನಾಗೇಶ್ ವಹಿಸಲಿದ್ದು, ಕಾರ್ಯದರ್ಶಿ ಶೋಭಾ ವೆಂಕಟರಮಣ ಅವರು ಉಪಸ್ಥಿತರಿರಲಿದ್ದಾರೆ.

ಎಲ್ ಕೆ ಜಿ, ಯುಕೆಜಿಯಿಂದ ಹಿಡಿದು ಎಸ್ ಎಸ್ ಎಲ್ ಸಿ ಯವರೆಗಿನ ಪ್ರತಿ ವಿದ್ಯಾರ್ಥಿಗಳು ಪಠ್ಯಧಾರಿತ ವಸ್ತು ಪ್ರದರ್ಶನವನ್ನು ಮಾಡಲಿದ್ದಾರೆ.
ನಾಳೆ ನಡೆಯಲಿರುವ ಈ ವಸ್ತು ಪ್ರದರ್ಶನವನ್ನು ಅನ್ಯ ಶಾಲೆಯ ಮಕ್ಕಳು ಸಹ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ.
ವಿಜ್ಞಾನ, ಗಣಿತ, ಭಾಷೆ ಹಾಗೂ ಎಲ್ಲ ವಿಷಯಗಳ ವಸ್ತು ಪ್ರದರ್ಶನ ಇರಲಿದೆ. ವಿವಿಧ ಹೊಸಹೊಸ ಸಂಶೋದನಾತ್ಮಕ ತಿಳುವಳಿಕೆ ನೀಡುವ ಮಾಹಿತಿ ಇಲ್ಲಿ ದೊರೆಯುತ್ತದೆ.