ಶಿವಮೊಗ್ಗ : ದೇಶದಲ್ಲಿ ಉದ್ಯೋಗ ಸರಿಯಾಗಿ ಸೃಷ್ಟಿ ಆಗಿಲ್ಲ.ಮೋದಿ ಅಧಿಕಾರಕ್ಕೆ ಬಂದರೆ ವರ್ಷಕ್ಕೆ ೨ ಕೋಟಿ ಉದ್ಯೋಗ ಕೊಡ್ತಿನಿ ಅಂದಿದ್ದರು. ಆದರೆ ಇನ್ನೂ ಕೊಟ್ಟಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸಿದರು.

ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ದೇಶ ವ್ಯಾಪ್ತಿ ನಿರುದ್ಯೋಗ ಹೆಚ್ಚಾಗುತ್ತಿದ್ದು ಈ ಬಗ್ಗೆ ರಾಜ್ಯದ ಸಂಸದರು ಗಮನ ಕೊಡುತ್ತಿ. ಈ ಬಗ್ಗೆ ರಾಜ್ಯದ ಸಿಎಂ ಹಾಗೂ ಕೇಂದ್ರ ಸರ್ಕಾರವು ಗಮನ ಕೊಡಬೇಕು. ಉದ್ಯೋಗ ಸೃಷ್ಟಿ ಮಾಡಬೇಕು ಎಂದರು.
ಬಿಜೆಪಿ ಬರೀ ಧರ್ಮ, ಪಾಕಿಸ್ತಾನ ಬಗ್ಗೆ ಗಮನ ಹರಿಸದೆ ಉದ್ಯೋಗ ಸೃಷ್ಟಿಸುವತ್ತ ಗಮನ ಹರಿಸಬೇಕು. ಕೇಂದ್ರ ಸರ್ಕಾರಕ್ಕೂ ಮನವಿ ಮಾಡಬೇಕು. ಜಾತಿ ಗಣತಿ ಮುಕ್ತವಾಗಿ ನಡೆಯುತ್ತಿದೆ. ಇದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಶಿಕ್ಷಕರ ಈಗಾಗಲೇ ಸಮೀಕ್ಷೆಯ ತೊಡಗಿಕೊಂಡಿದ್ದು, ಅವರಿಗೆ ಸಹಕಾರ ನೀಡಬೇಕು ಎಂದರು.

ಬಿಜೆಪಿ ಸಣ್ಣ ಸಣ್ಣ ವಿಷಯಕ್ಕೆ ಧರ್ಮ ತಳಕು ಹಾಕಿ ರಾಜಕಾರಣ ಮಾಡಬಾರದು. ಮುಸ್ಲಿಂ ರಲ್ಲಿ ಮಾತ್ರವಲ್ಲ ಹಿಂದೂಗಳಲ್ಲಿ ಕಿಡಿಗೇಡಿಗಳಿದ್ದಾರೆ.ಅವರನ್ನೆಲ್ಲಾ ಧರ್ಮ ಆಧಾರಿತವಾಗಿ ಅಳಿಯುವ ಪ್ರಶ್ನೆ ಇಲ್ಲ. ತಪ್ಪು ಮಾಡಿದವರು ಯಾರೇ ಆಗಲಿ ಶಿಕ್ಷೆ ಆಗಬೇಕು. ಈಶ್ವರಪ್ಪ, ಅನಂತ ಕುಮಾರ್ ಹೆಗಡೆ, ಯತ್ನಾಳ, ಪ್ರತಾಪ್ ಸಿಂಹ ಇವರೆಲ್ಲರ ಹಿಂದುತ್ವ ಪರವಾಗಿ ಇದ್ದವರು ಅವರನ್ನೇ ಬಿಜೆಪಿ ಹೊರಹಾಕಿದೆ ಎಂದರು.

ಯಡಿಯೂರಪ್ಪರನ್ನು ಕಣ್ಣೀರು ಹಾಕಿಸಿ ಆಚೆ ದಬ್ಬಿದ ಪಾಪಿ ಇವರು. ನಮ್ಮ ಪಕ್ಷಕ್ಕೆ, ಸಿ ಎಂ ಗೆ ಬಯ್ಯುವ ಅಧಿಕಾರ ಈಶ್ವರಪ್ಪರಿಗೆ ಇಲ್ಲ. ಸಚಿವ ಸಂಪುಟ ಬದಲಾವಣೆ ಕೇಂದ್ರ ನಾಯಕರು ತೀರ್ಮಾನ ಮಾಡುತ್ತಾರೆ. ನನಗೆ ಸಚಿವ ಸ್ಥಾನ ನಮ್ಮ ಪಕ್ಷದ ವರಿಷ್ಠ ನಾಯಕರು ಮಾಡುತ್ತಾರೆ, ನನಗೆ ಕೊಟ್ಟರೆ ಖುಷಿಯಿಂದ ಕೆಲಸ ಮಾಡುತ್ತೇನೆ ನಮ್ಮೆಲ್ಲರ ವರಿಷ್ಠರ ತೀರ್ಮಾನ ಬದ್ಧ ಆಗಿದ್ದೇನೆ ಎಂದರು.

ಸಾಗರ ಜಿಲ್ಲೆ ಎಂಬುದು ನಾಗರೀಕರ ಒತ್ತಾಯ. ಸರ್ಕಾರ ಏನು ಕ್ರಮ ಕೈಗೊಳ್ಳುತ್ತೆ ಅದೇ ತೀರ್ಮಾನ. ಈ ಬಗ್ಗೆ ಕುಳಿತು ಚರ್ಚಿಸೋಣ ಎಂದರು.