ಶಿವಮೊಗ್ಗ, ಮೇ.14:
ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ರೂಪಾಂತರಿ ಅಲೆ ಆತಂಕ ಸೃಷ್ಟಿಸಿದ್ದು ಇಂದು ಅದರ ಪ್ರಮಾಣ ಕುಗ್ಗಿ ನೆಮ್ಮದಿ ಕಾಣುವ ಹಂತಕ್ಕೆ ಬಂದಿದೆ ಎನ್ನಲಾಗಿದೆ.
ಜಿಲ್ಲೆಯಲ್ಲಿಂದಿನ ಶುಕ್ರವಾರ ಕೊರೊನಾ ಸೋಂಕು ಕಂಡುಬಂದಿರುವವರ ಸಂಖ್ಯೆ ಒಂದೂವರೆ ಸಾವಿರದಿಂದ ಇಳಿಕೆಯಾಗಿದ್ದು ಇಂದು 720 ಜನರಲ್ಲಿ ಸೊಂಕು ಕಾಡಿದೆ.
ಹಿಂದೆ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿ ಆತಂಕ ಸೃಷ್ಟಿಸಿರುವುದು ಸತ್ಯ.
ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 720 ಕೋವಿಡ್ ಸೋಂಕಿನ ಹೊಸ ಪ್ರಕರಣಗಳು ದಾಖಲಾಗಿದ್ದು, 5 ಮಂದಿ ಕೋವಿಡ್ ಸೊಂಕಿಗೆ ಜಿಲ್ಲೆಯಲ್ಲಿ ಮೃತರಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ ಜಿಲ್ಲೆಯಲ್ಲಿ 557ಕ್ಕೆ ಏರಿಕೆಯಾಗಿದೆ.
ಇನ್ನು,ಇಂದು 577 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ. ಇದು ಸಂತಸದ ವಿಷಯ.
ಜಿಲ್ಲೆಯಲ್ಲಿ ಪ್ರಸ್ತುತ 7277
ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಶಿವಮೊಗ್ಗ ತಾಲ್ಲೂಕಿನ 209 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಭದ್ರಾವತಿಯಲ್ಲಿ 103, ಶಿಕಾರಿಪುರ , ತೀರ್ಥಹಳ್ಳಿಯಲ್ಲಿ 41 , ಸೊರಬ 78, ಸಾಗರ 171, ಹೊಸನಗರ 31 ಹಾಗೂ ಇತರೆ ಜಿಲ್ಲೆಗಳ 28 ರೋಗಿಗಳಲ್ಲಿ ಸೋಂಕು ಪತ್ತೆಯಾಗಿದೆ.
28 ಮಂದಿ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 7277 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

By admin

ನಿಮ್ಮದೊಂದು ಉತ್ತರ

error: Content is protected !!