ಶಿವಮೊಗ್ಗ ಜಿಲ್ಲಾ ರಾಜಪುತ್ ಸಭಾ ರಾಜ್ಯ ಸರ್ಕಾರದ ಹಿಂದುಳಿದ ಆಯೋಗಗಳ ವತಿಯಿಂದ ನಡೆಸಲಿರುವ ಸಾಮಾಜಿಕ, ಶೈಕ್ಷಣಿಕ ಜಾತಿ ಗಣತಿ ಸಂದರ್ಭದಲ್ಲಿ ಜಿಲ್ಲೆಯಲ್ಲಿರುವ ರಾಜಪುತ್ ಸಮಾಜದ ಎಲ್ಲಾ ಉಪಪಂಗಡಗಳು ಕಾಲಂ ನಂಬರ್ ೯ ಜಾತಿ ಕಾಲಂನಲ್ಲಿ ರಾಜಪುತ್

ಎಂದು ಹಾಗೂ ಕಾಲಂ ನಂಬರ್ ೮ ಧರ್ಮದ ಕಾಲಂನಲ್ಲಿ ಹಿಂದೂ ಎಂದು ನಮೂದಿಸಬೇಕು. ಉಪಜಾತಿ ಕಾಲಂನಲ್ಲಿ ಏನನ್ನೂ ಭರ್ತಿಮಾಡಬಾರದು ಎಂದು ಜಿಲ್ಲಾ ರಾಜಪುತ್ ಸಭಾ ಅಧ್ಯಕ್ಷ ದೀಪಕ್ ಸಿಂಗ್ ಮನವಿ ಮಾಡಿದ್ದಾರೆ. ರಾಜಪುತ್ ಸಮಾಜದ ಎಲ್ಲರೂ

ಈ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಭಾಗವಹಿಸಿ ಮಾಹಿತಿ ನೀಡಬೇಕು. ಇದು ಹಬ್ಬಗಳ ಸಮಯ ಮಾಹಿತಿ ಸಂಗ್ರಹಕಾರರು ಬರುತ್ತಾರೆ ಹಾಗಾಗಿ ಯಾವ ಊರುಗಳಿಗೂ ಹೋಗದೆ ಆಧಾರ್ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್ ಇತ್ಯಾದಿಗಳನ್ನು ಸಿದ್ಧವಾಗಿಟ್ಟುಕೊಂಡು ಸರಿಯಾಗಿ

ಮಾಹಿತಿಯನ್ನು ಕಡ್ಡಾಯವಾಗಿ ನಮೂದಿಸಬೇಕು. ಮತ್ತು ಸಮೀಕ್ಷಾಕಾರರು ಸರಿಯಾಗಿ ಮಾಹಿತಿಯನ್ನು ಭರ್ತಿ ಮಾಡಿಕೊಂಡಿದ್ದಾರೆಯೇ ಎಂದು ಖಚಿತಪಡಿಸಿಕೊಂಡೇ ಸಬ್ಮಿಟ್ ಮಾಡಲು ಒಪ್ಪಿಗೆ ಕೊಡಬೇಕು ಎಂದು ಅವರು ತಿಳಿಸಿದ್ದಾರೆ.