ಶಿವಮೊಗ್ಗ ಸೆ.12: ನಿತ್ಯದ ಕೆಲಸದ ಜಂಜಾಟದ ನಡುವೆ ಪೌರಕಾರ್ಮಿಕರಿಗೆ ಮನರಂಜನೆ, ಮನೋಲ್ಲಾಸ ನೀಡುವ ಸಲುವಾಗಿ

ಪೌರಕಾರ್ಮಿಕರ ದಿನಚರಣೆಯ ಅಂಗವಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ .ನಾಳೆ ಹಾಗೂ ನಾಡಿದ್ದು ಕೃಷಿ ಕಾಲೇಜು ಕ್ರೀಡಾಂಗಣದಲ್ಲಿ ಕ್ರಿಕೇಟ್ ಪಂದ್ಯಾವಳಿ ಯನ್ನು ಅಯೋಜಿಸಲಾಗಿದೆ

ಕ್ರೀಡಾ ಪಂದ್ಯಾವಳಿಯನ್ನು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧುಬಂಗಾರಪ್ಪರವರ ಉದ್ಘಾಟಿಸಲಿದ್ದು

ಮುಖ್ಯ ಅಥಿತಿಗಳಾಗಿ ಸಂಸದರಾದ ಬಿ.ವೈ ರಾಘವೇಂದ್ರ , ಶಾಸಕರಾದ ಎಸ್ ಎನ್ ಚನ್ನಬಸಪ್ಪ ಹಾಗೂ ಇತರೆ ಚುನಾಯಿತ ಪ್ರತಿನಿಧಿಗಳು, ಆಯುಕ್ತರಾದ ಮಾಯಣ್ಣ ಗೌಡರು ಭಾಗವಹಿಸಲಿದ್ದು
ಈ ಕ್ರೀಡಾ ಪಂದ್ಯಾವಳಿಯಲ್ಲಿ ಎಲ್ಲಾ ಕಾರ್ಮಿಕರು ಭಾಗವಹಿಸಲು
ಮಹಾನಗರದ ಪಾಲಿಕೆ ನೌಕರರ ಸಂಘದ ಅಧ್ಯಕ್ಷರಾದ ಎನ್ ಗೋವಿಂದ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ