ಶಿವಮೊಗ್ಗ :ಹಿಂದೂಗಳಿಗೆ ಗೌರಿಗಣೇಶ ಹಬ್ಬ ಎಲ್ಲಾ ಹಬ್ಬಗಳಂತೆ ಪವಿತ್ರ ಹಬ್ಬವಾಗಿದೆ ಹಿಂದೂಗಳು ಅತ್ಯಂತ ಸಡಗರ ಸಂಭ್ರಮದಿಂದ ಹಬ್ಬವನ್ನು ಆಚರಿಸುವುದು
ಕಾಂಗ್ರೇಸ್ ಸರ್ಕಾರದ ಅಡಳಿತ ದಲ್ಲಿ ಕಷ್ಟವಾಗಿದೆ ಎಂದು ಬಿಜೆಪಿ ಮಾಜಿ ಪಾಲಿಕೆ ಸದ್ಯಸ್ಯ ಸುರೇಖಾ ಮುರುಳೀಧರ್ ಅರೋಪಿಸಿದ್ದಾರೆ ಕಾಂಗ್ರೇಸ್ ನ ಕೆಲ ನಾಯಕರ ಹಾಗೂ ರಾಜ್ಯಸರ್ಕಾರದ ಈ ನಡೆ ಹೀಗೆ ಮುಂದುವರೆದಲ್ಲಿ ಮುಂದಿನ ಚುನಾವಣೆಯಲ್ಲಿ ಜನರೇ ರಾಜ್ಯಸರ್ಕಾರಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. ಚುನಾವಣೆಯಲ್ಲಿ ಹಿಂದೂಗಳ ಮತಗಳನ್ನು ಪಡೆದು ರಾಜ್ಯದಲ್ಲಿ ಅಳ್ವಿಕೆ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ನವರ ಕಾಂಗ್ರೇಸ್ ಸರ್ಕಾರ ರಾಜ್ಯದ ಜನರ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ಅಗತ್ಯ ವಸ್ತುಗಳ ಬೆಲೆಯನ್ನು ಒಂದೆಡೆ ಏರಿಸಿ ಜನರಿಂದನೇ ಹಣ ವಸೂಲಿ ಮಾಡಿ ಐದು ಗ್ಯಾರಂಟಿಗಳು ಕೊಡುವ ಮೂಲಕ ರಾಜ್ಯದಲ್ಲಿ ಅಭಿವೃದ್ದಿಯನ್ನೆ ಮರೆತುಬಿಟ್ಟಿದ್ದಾರೆ.

ಮತಕ್ಕಾಗಿ ಮುಸ್ಲಿಂ ಸಮುದಾಯವನ್ನು ಒಲೈಸಲು ಕಾಂಗ್ರೇಸ್ ನ ಕೆಲ ನಾಯಕರು ಮುಂದಿನ ಜನ್ಮವಿದ್ದರೇ ಮುಸ್ಲಿಂನಾಗಿ ಹುಟ್ಟುತ್ತೇನೆ ನಿಮ್ಮ ಜೊತೆ ಮುಸ್ಲಿಂನಾಗಿ ಇರುತ್ತೇನೆ ಎಂದು ಮುಸ್ಲಿಂಮರ ಪರವಾಗಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತೀರುವ ಕಾಂಗ್ರೇಸ್ ಕೆಲ ನಾಯಕರ ಹಾಗೂ ರಾಜ್ಯ ಸರ್ಕಾರದ ವಿರುದ್ದ ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದಾರೆ

ಮಂಡ್ಯದ ಮದ್ದೂರಿನಲ್ಲಿ ಹಿಂದೂಗಳು ಶಾಂತಿಯಿಂದ ನಡೆಸುತ್ತಿದ್ದ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ
ಕೆಲ ಮುಸ್ಲಿಂ ಕಿಡಿಗೇಡಿಗಳು
ರಾಜ್ಯದಲ್ಲಿ ಅಶಾಂತಿ ಉಂಟುಮಾಡಲು
ಗಣಪತಿ ಮೆರವಣಿಗೆಯ ವೇಳೆ ಕಲ್ಲುತೂರಾಟ ನಡೆಸಿ ಅಟ್ಟಹಾಸ ಮೆರೆದಿದ್ದಾರೆ .ಹಾಗೂ ಭದ್ರಾವತಿಯಲ್ಲಿ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿ ಕಿಡಿಗೇಡಿಗಳು ನಮ್ಮ ದೇಶದ ಅನ್ನ ನೀರು ತಿಂದು ಕುಡಿದು ನಮ್ಮ ದೇಶಕ್ಕೆ ದ್ರೋಹ ಬಗೆದಿದ್ದಾರೆ
ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಇನ್ನೆಂದು ಮರುಕಳಿಸದಂತೆ

ರಾಜ್ಯಸರ್ಕಾರ ಎಚ್ಚೆತ್ತು ಇಂತಹ ಕೀಡಿಗೇಡಿಗಳಿಗೆ ಯಾವುದೇ ಕುಮ್ಮುಕ್ಕು ನೀಡದೇ ಯಾರ ಒತ್ತಡಕ್ಕೂ ಮಣಿಯದೇ ನಿರ್ದಾಕ್ಷಿಣ್ಯವಾಗಿ ಇಂತಹ ಕೀಡಿಗೇಡಿಗಳನ್ನು ಬಂಧಿಸಿ ಹೆಡೆಮುರಿ ಕಟ್ಟಿ
ಎಂದು ರಾಜ್ಯಸರ್ಕಾರಕ್ಕೆ ಅಗ್ರಹಿಸಿದ್ದಾರೆ