ಶಿವಮೊಗ್ಗ ,ಸೆ. 05:
ನಗರದ ಕೋಟೆ ಭೀಮೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಶನಿವಾರ ನಡೆಯಲಿದ್ದು, ಇಡೀ ನಗರವನ್ನು ಅದ್ದೂರಿಯಾಗಿ ಸಿಂಗರಿಸಲಾಗಿದೆ. ಹಿಂದೂ ಕೇಸರಿ ಅಲಂಕಾರ ಸಮಿತಿ ವತಿಯಿಂದ ಇಂದು ಮಹಾಸಭಾ ಗಣಪತಿ ಸಾಗುವ ಮಾರ್ಗಗಳಲ್ಲಿ ಮಾತ್ರವಲ್ಲದೇ ಇಡೀ ನಗರದ ಪ್ರಮುಖ ವೃತ್ತಗಳು ರಸ್ತೆಗಳನ್ನು ವಿವಿಧ ಕಲಾ ಕೃತಿಗಳ ಮೂಲಕ ಅಲಂಕರಿಸಲಾಗಿದೆ ಕೇಸರಿ ಬಂಟಿಂಗ್ ಗಳನ್ನು ಕಟ್ಟಲಾಗಿದ್ದು ಶಿವಮೊಗ್ಗ ನಗರ ಕೇಸರಿಮಯವಾಗಿದೆ.


ಹಿಂದೂ ಮಹಾಸಭಾ ಗಣಪತಿಯ ರಾಜ ಬೀದಿ ಉತ್ಸವಕ್ಕೆ ನಗರ ಮಾತ್ರವಲ್ಲದೇ ವಿವಿಧೆಡೆಯಿಂದ, ಅಪಾರ ಸಂಖ್ಯೆಯ ಜನ ಆಗಮಿಸಲಿದ್ದು, ತಿಂಡಿ ಪಾನೀಯ ಸಿಹಿ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೆ ಪ್ರಮುಖವಾಗಿ, ನಗರದ ಪ್ರಮುಖ ವೃತ್ತ ಹಾಗೂ ರಸ್ತೆ ಕೇಸರಿಮಯಗೊಂಡಿದೆ. ಅಲ್ಲಲ್ಲಿ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ. ಗಾಂಧಿ ಬಜಾರ್ ಮುಂಭಾಗ ಪ್ರತಿ ವರ್ಷದಂತೆ ಈ ಬಾರಿಯು ವಿಭಿನ್ನ ಮಹಾದ್ವಾರ ಸ್ಥಾಪಿಸಲಾಗಿದೆ.


ಪ್ರತಿ ವರ್ಷದಂತೆ ಈ ಬಾರಿಯು ವಿಭಿನ್ನ ರೀತಿಯ ಮಹಾದ್ವಾರ ನಿರ್ಮಿಸಲಾಗಿದೆ. ದೇವತೆಗಳು ಮತ್ತು ರಾಕ್ಷಸರ ಮಧ್ಯೆ ಅಮೃತಕ್ಕಾಗಿ ಹಾಲಿನ ಸಮುದ್ರವನ್ನು ಕಡೆಯುವ ಕತೆಯನ್ನು ಈ ಬಾರಿಯ ಮಹಾದ್ವಾರ ಸ್ಥಾಪಿಸಲಾಗಿದೆ. ಸಮುದ್ರ ಮಂಥನ ಕೃತಿ ನೋಡುಗರನ್ನು ಆಕರ್ಷಿಸುತ್ತಿದ್ದು ಅಪಾರ ಸಂಖ್ಯೆಯ ಜನ ಫೋಟೋ ವಿಡಿಯೋ ಮಾಡಿ ಸೆಲ್ಫಿ ತೆಗೆದು ಕೊಂಡು ಸಂಭ್ರಮಿಸಿದ್ದಾರೆ.

ಒಂದೆಡೆ ದೇವತೆಗಳು, ಮತ್ತೊಂದೆಡೆ ರಾಕ್ಷಕರು, ಸಮುದ್ರವನ್ನು ಕಡೆಯಲು ಬಳಸಿದ್ದ ಹಾವು, ಈಶ್ವರನು ವಿಷ ಕುಡಿದು ನೀಲಕಂಠನಾದದ್ದನ್ನು ಮಹಾದ್ವಾರದಲ್ಲಿ ರೂಪಿಸಲಾಗಿದೆ.ಜೀವನ್ ಕಲಾಕೇಂದ್ರದ ಕಲಾವಿದರು ಮಹಾದ್ವಾರ ನಿರ್ಮಿಸಿದ್ದು ಆಕರ್ಷಣೀಯವಾಗಿದೆ ಬೆಳಗ್ಗೆಯಿಂದ ದೊಡ್ಡ ಸಂಖ್ಯೆಯ ಜನರು ಗಾಂಧಿ ಬಜಾರ್ ಮುಂಭಾಗ ಬಂದು ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

ಗಾಂಧಿ ಬಜಾರ್ ಕೇಸರಿಮಯ
ಹಿಂದೂ ಕೇಸರಿ ಅಲಂಕಾರ ಸಮಿತಿ ವತಿಯಿಂದ ಗಾಂಧಿ ಬಜಾರ್ನಲ್ಲಿ ಅಲಂಕಾರ ಮಾಡಲಾಗಿದೆ. ಗಾಂಧಿ ಬಜಾರ್ ಮುಖ್ಯ ರಸ್ತೆಯಲ್ಲಿ ಕೇಸರಿ ಬಂಟಿಂಗ್ಸ್, ಧ್ವಜಗಳನ್ನು ಕಟ್ಟಲಾಗಿದೆ. ಡಿವೈಡರ್ಗಳ ಮೇಲೆ ಹಿಂದೂ ದೇವರು, ಧಾರ್ಮಿಕ ಗುರುಗಳ ಭಾವಚಿತ್ರದ ಫ್ಲೆಕ್ಸ್ ಅಳವಡಿಸಲಾಗಿದೆ. ಶಿವಪ್ಪನಾಯಕ ಪ್ರತಿಮೆ ಮುಂಭಾಗ ಧರ್ಮಸ್ಥಳ ಮಾದರಿಯ ಮಹಾದ್ವಾರ ನಿರ್ಮಿಸಲಾಗಿದೆ. ವಿವಿಧೆಡೆ ಲೈಟಿಂಗ್ ಹಾಕಲಾಗಿದೆ.

ಇಡೀ ರಸ್ತೆಗೆ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ನೆಹರು ರಸ್ತೆಯ ಪ್ರವೇಶದಲ್ಲಿ ಆಪರೇಷನ್ ಸಿಂಧೂರ ಹೆಸರಿನಲ್ಲಿ ಮಹಾದ್ವಾರ ನಿರ್ಮಿಸಲಾಗಿದೆ. ಬಿ.ಹೆಚ್. ರಸ್ತೆಯಲ್ಲಿ ಡಿವೈಡರ್ ಮೇಲೆ ಕೇಸರಿ ಧ್ವಜಗಳನ್ನು ಹಾಕಲಾಗಿದೆ. ಎಂಆರ್ಎಸ್ ಸರ್ಕಲ್ನಲ್ಲಿ ಕೇಸರಿ ಬಂಟಿಂಗ್ಸ್ನಿಂದ ಅಲಂಕಾರ ಮಾಡಲಾಗಿದೆ. ಸರ್ಕಲ್ನಲ್ಲಿ ಶಿವಾಜಿ ಮಹಾರಾಜ ಮತ್ತು ಶ್ರೀರಾಮನ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ ಶ್ರೀ ರಾಮನ ಮೂರ್ತಿಯನ್ನು ಕೂಡ ಪ್ರತಿಷ್ಠಾಪಿಸಲಾಗಿದೆ.
ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವಕ್ಕೆ ಶುಭ ಕೋರಿ ಫ್ಲೆಕ್ಸ್ಗಳನ್ನು ಹಾಕಲಾಗಿದೆ. ಅದೇ ರೀತಿ ಬೃಹತ್ ಹೂವಿನ ಹಾರಗಳನ್ನು ಹಾಕಲು ತಯಾರಿ ಮಾಡಿಕೊಳ್ಳಲಾಗಿದೆ. ಅದೇ ರೀತಿ ಕ್ರೇನ್ಗಳ ಮೂಲಕ ಹಾಕಲು ಹಣ್ಣುಗಳು ಹೂವಿನ ಹಾರಗಳನ್ನು ಕೂಡ ಸಿದ್ಧಪಡಿಸಲಾಗಿದೆ. ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವಕ್ಕೆ ಶುಭ ಕೋರಿ ಫ್ಲೆಕ್ಸ್ ಗಳನ್ನು ಹಾಕಲಾಗಿದೆ. ಅದೇ ರೀತಿ ಬೃಹತ್ ಹೂವಿನ ಹಾರಗಳನ್ನು ಹಾಕಲು ತಯಾರಿ ಮಾಡಿಕೊಳ್ಳಲಾಗಿದೆ. ಅದೇ ರೀತಿ ಕ್ರೇನ್ ಗಳ ಮೂಲಕ ಹಾಕಲು ಹಣ್ಣುಗಳು ಹೂವಿನ ಹಾರಗಳನ್ನು ಕೂಡ ಸಿದ್ಧಪಡಿಸಲಾಗಿದೆ.
ನಗರದ ನ್ಯೂ ಮಂಡಳಿಯಲ್ಲಿ ಶ್ರೀ ಕೃಷ್ಣಾರ್ಜುನರ ಕುರುಕ್ಷೇತ್ರ ದೃಶ್ಯ ಪ್ರತಿ ಕೃತಿ ನಿರ್ಮಿಸಿದ್ದು ನೋಡಿಗರನ್ನು ಆಕರ್ಷಿಸುತ್ತಿದೆ ಇದಕ್ಕಾಗಿ ಸಿದ್ಧತೆ ಆರಂಭವಾಗಿದೆ. ರಸ್ತೆ ಮಧ್ಯದ ಡಿವೈಡರ್ಗಳಲ್ಲಿ ವೀರ ಸಾವರ್ಕರ್ ಮಹರ್ಷಿ ವಾಲ್ಮೀಕಿ ಸೇರಿದಂತೆ ನೂರಾರು ಮಹನೀಯರ ಫ್ಲೆಕ್ಸ್ಗಳನ್ನು ಅಳವಡಿಸಲಾಗಿದೆ ಗೋಪಿ ವೃತ್ತದಲ್ಲಿ ಕೂಡ ವೇದಿಕೆ ನಿರ್ಮಿಸಿ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಶಿವಪ್ಪ ನಾಯಕ ವೃತ್ತದಲ್ಲಿ ಧರ್ಮಸ್ಥಳ ಮಹಾದ್ವಾರ ನೆಹರು ರಸ್ತೆಯಲ್ಲಿ ಆಪರೇಷನ್ ಸಿಂಧೂರ ಮಹಾದ್ವಾರ ನಿರ್ಮಾಣ ಮಾಡಲಾಗಿದೆ.
ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಹಿನ್ನಲೆಯಲ್ಲಿ ನಗರದಾದ್ಯಂತ ಬಿಗಿ ಬಂದೋಬಸ್ತ್ ಕೈಗಳಲಾಗಿದೆ ಈಗಾಗಲೇ ಪೊಲೀಸ್ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮವಹಿಸಲಾಗಿದ್ದು ಜಿಲ್ಲೆ ಮಾತ್ರವಲ್ಲದೆ ವಿವಿಧ ಜಿಲ್ಲೆಗಳಿಂದಲೂ ಪೊಲೀಸ್ ಕೆಎಸ್ಆರ್ಪಿ ತುಕಡಿ ಆರೈಎಫ್ ಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ ಇಡೀ ನಗರದಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು ಹಾಕಿಸಲಾಗಿದೆ ಗಣಪತಿ ಮೆರವಣಿಗೆ ಸಾಗುವ ಮಾರ್ಗದಿದ್ದಕ್ಕೂ ಅದ್ದಿನ ಕಣ್ಣು ಇಡಲಾಗಿದೆ.