ಶಿವಮೊಗ್ಗ, ಸೆ.4:
ಶಿವಮೊಗ್ಗ : ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಮೆರವಣಿಗೆ ಗಣಪನ ರಾಜಬೀದಿ ಉತ್ಸ ವ ಎಂದರೇ ಶಿವಮೊಗ್ಗದ ಜನತೆಗೆ ಅದೊಂದು ಹಬ್ಬದ ವಾತಾವರಣವೇ ಹೌದು.

ಈಗ ಮತ್ತೆ ಶಿವಮೊಗ್ಗ ನಗರದ ಬೀದಿ ಬೀದಿಗಳಲ್ಲೂ ಕೇಸರಿ ಅಲಂಕಾರದಿಂದ ಭರ್ಜರಿಯಾಗಿ ಸಜ್ಜಾಗುತ್ತದೆ. ಇದೇ ಸೆಪ್ಟೆಂಬರ್ 06 ಶನಿವಾರ ದಂದು ನಡೆಯುವ ನಮ್ಮ ಶಿವಮೊಗ್ಗ ಹಿಂದೂ ಮಹಾಸಭಾ
ಗಣಪತಿ ವಿಸರ್ಜನೆ ಮೆರವಣಿಗೆಯನ್ನು ನೋಡಲು ಶಿವಮೊಗ್ಗ ಸೇರಿದಂತೆ ಬೇರೆ ಜಿಲ್ಲೆಗಳಿಂದಲೂ ಸಹ ಗಣಪತಿ ವಿಸರ್ಜನೆ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಹಾಗೂ ಭರ್ಜರಿ ಸ್ಟೆಪ್ ಹಾಕಲು ಭಕ್ತರು ಸೇರಿದಂತೆ ಯುವಕ ಯುವತಿಯರು ಬರುತ್ತಾರೆ.
ಗಣಪನ ವಿಸರ್ಜನೆ ಮೆರವಣಿಗೆಗೆ ಬರುವ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಹೆಚ್ .ಎಸ್.ಸುಂದರೇಶ್ ರವರಿಂದ ಏರ್ಪಡಿಸಲಾಗಿದೆ.

ರಾಜಕೀಯದಲ್ಲಿ ತಾನು ಬೆಳೆದು ತನ್ನವರನ್ನು ಬೆಳೆಸಿ ತಮ್ಮ ಜನ ಸೇವೆಯ ಮೂಲಕ ಶಿವಮೊಗ್ಗ ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಯ ಜನತೆಗೆ ಶಿವಮೊಗ್ಗ ಸೂಡಾ ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ಎಸ್. ಹೆಚ್. ಸುಂದರೇಶ್ ( ಎಲ್ಲರ ಚಿರಪರಿಚಿತ ಸುಂದರೇಶಣ್ಣ) ಅವರ ನೇತೃತ್ವದಲ್ಲಿ ಸತತ ಆರು ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬಂದಂತಹ ಅನ್ನಸಂತರ್ಪಣೆ ಕಾರ್ಯಕ್ರಮ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಈ ವರ್ಷವೂ ಸಹ 10 ಸಾವಿರ ಭಕ್ತರಿಗೆ ಸುಂದರೇಶ್ ರವರ ನೇತೃತ್ವದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಈ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಗಾಂಧಿ ಬಜಾರ್ ನ ಶ್ರೀ ಬಸವೇಶ್ವರ ದೇವಸ್ಥಾನದ ಮುಂಭಾಗ ಅಯೋಜನೆ ಮಾಡಲಾಗಿದೆ ಇದನ್ನು
ನಮ್ಮ ಶಿವಮೊಗ್ಗ ಗಣಪನ ವಿರ್ಸಜನೆ ಮೆರವಣಿಗೆಗೆ ಬರುವ ಎಲ್ಲಾ ಭಕ್ತರು ಗಣಪನ ಪ್ರಸಾದವನ್ನು ಸ್ವೀಕರಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಸೂಡಾ ಅಧ್ಯಕ್ಷ ಹೆಚ್ ಎಸ್ .ಸುಂದರೇಶ್ ರವರು ಬರುವ ಭಕ್ತರಿಗೆ ಮನವಿ ಮಾಡಿದ್ದಾರೆ.