ಶಿವಮೊಗ್ಗ : ನಗರದ ಕೋಟೆ ರಸ್ತೆಯಲ್ಲಿರುವ ಕೋರ್ಪಲಯ್ಯನ ಛತ್ರದ ಬಳಿ ಮೈದುಂಬಿ ಹರಿಯುತ್ತಿರುವ ತುಂಗಾನದಿಗೆ ಶಿವಮೊಗ್ಗ ನಗರ ಜೆಡಿಎಸ್ ಘಟಕದವತಿಯಿಂದ ಇಂದು ಬಾಗಿನ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಉಪಾಧ್ಯಕ್ಷರು ಹಾಗೂ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ನಗರದ ಜೀವನದಿ ತುಂಗೆ ಪ್ರತಿವರ್ಷವೂ ಸಹ ತುಂಬಿ ಹರಿಯುತ್ತಿದ್ದಾಳೆ. ಶ್ರಾವಣ ಮಾಸದಲ್ಲಿ ಪ್ರತಿವರ್ಷವೂ ಬಾಗಿನ ಅರ್ಪಿಸಲಾಗುತ್ತಿದೆ. ಬಾಗಿನ ಅರ್ಪಿಸಿ

ಸಂಪ್ರದಾಯದಂತೆ ತುಂಗೆಯ ಆಶೀರ್ವಾದ ಪಡೆದಿದ್ದೇವೆ. ಜಿಲ್ಲೆ ಹಾಗೂ ನಗರ ಸಮೃದ್ಧಿಯಾಗಿರಲಿ, ತುಂಗೆ ಶಾಂತವಾಗಿರಲಿ, ಪಕ್ಷ, ರೈತರು, ಕಾರ್ಮಿಕರಿಗೆ ತುಂಗೆ ಆಶೀರ್ವಾದ ನೀಡಲಿ ಎಂದು ಪ್ರಾರ್ಥಿಸಿದ್ದೇವೆ ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಶಿವಮೊಗ್ಗ ನಗರ ಜೆಡಿಎಸ್ ಅಧ್ಯಕ್ಷ ದೀಪಕ್ಸಿಂಗ್, ಪ್ರಮುಖರಾದ ಮಾಜಿ ಪಾಲಿಕೆ ಸದಸ್ಯ ರಘುಬಾಲರಾಜ್ ಕೆ.ಎನ್. ರಾಮಕೃಷ್ಣ, ತ್ಯಾಗರಾಜ್, ಹೆಚ್.ಎಂ. ಸಂಗಯ್ಯ, ಚಂದ್ರಶೇಖರ್, ಮಾಧವಮೂರ್ತಿ, ರಾಘವೇಂದ್ರ ಉಡುಪ, ಸುರೇಶ್ ನಾಡಿಗ್, ಎಸ್.ಎನ್. ಮಹೇಶ್, ದಯಾನಂದ ಸಾಲಗಿ, ಗೋಪಿ ಮೊದಲಿಯಾರ್, ಸಿದ್ದೇಶ್, ಸುನೀಲ್ ಗೌಡ, ಗೀತಾಂಜಲಿ ಕೆ.ಬಿ. ಪ್ರಸನ್ನಕುಮಾರ್, ಗೀತಾ ಸತೀಶ್,

ಚಂದ್ರಮತಿ ಹೆಗಡೆ, ಶಾರದಮ್ಮ, ರಾಜಲಕ್ಷ್ಮೀ, ಪ್ರಭಾವತಿ, ಆಶಾ, ಮಮ್ತಾಜ್, ರೂಪ, ಲಕ್ಷ್ಮೀನರಸಿಂಹಮೂರ್ತಿ, ಹೊನ್ನಮ್ಮ ಸೇರಿದಂತೆ ಇನ್ನಿತರರು ಇದ್ದರು.