ಶಿವಮೊಗ್ಗ: ತೀರ್ಥಹಳ್ಳಿಯ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ನಡೆದಿರುವ ಕಳ್ಳತನ ಪ್ರಕರಣ ಪತ್ತೆ ಮಾಡಬೇಕು ಮತ್ತು ಈ ಪ್ರಕರಣದಲ್ಲಿ ಕಾಣದ ಕೈಗಳ ಕೈವಾಡದ ಶಂಕೆಯ ಕುರಿತು ತನಿಖೆ ನಡೆಸಬೇಕೆಂದು ಕೋರಿ ಧಾರ್ಮಿಕ ದತ್ತಿ ಮತ್ತು ಧರ್ಮದಾಯ ಇಲಾಖೆಯ ಜಿಲ್ಲಾ ಧಾರ್ಮಿಕ ಪರಿ?ತ್ ಸದಸ್ಯೆ ಬಿ. ವರಲಕ್ಷ್ಮಿ ಪ್ರಕಾಶ್ ಇವರು ಇಂದುಅಡಿಷನಲ್ ಎಸ್ಪಿ ಮೂಲಕ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿಯವರು ಜಿಲ್ಲಾ ಧಾರ್ಮಿಕ ಪರಿ?ತ್ನ ಅಧ್ಯಕ್ಷರಾಗಿದ್ದು, ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳು ಈ ಪರಿ?ತ್ನ ವ್ಯಾಪ್ತಿಗೊಳಪಟ್ಟಿವೆ. ಅಂತೆಯೇ ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನವು ಜಿಲ್ಲಾ ಧಾರ್ಮಿಕ ಪರಿ?ತ್ನ ವ್ಯಾಪ್ತಿಯಲ್ಲಿದೆ. ಈ ದೇವಸ್ಥಾನವು ಕೇವಲ ಜಿಲ್ಲೆಯಲ್ಲಷ್ಟೇ ಅಲ್ಲ, ರಾಜ್ಯಮಟ್ಟದಲ್ಲೂ ಸಹ ಅಪಾರ ಭಕ್ತಾಧಿಗಳನ್ನು ಹೊಂದಿದೆ. ದಸರಾ ಸಂದರ್ಭದಲ್ಲಿ ನಡೆಯುವ ದೇವಸ್ಥಾನದ ಕಾರ್ಯಕ್ರಮವು ಪ್ರಖ್ಯಾತಿ ಪಡೆದಿದೆ.

ಇಂತಹ ಹಿನ್ನೆಲೆ ಹಾಗೂ ಮಹತ್ವ ಹೊಂದಿರುವ ದೇವಸ್ಥಾನದಲ್ಲಿ ಆಗಸ್ಟ್ ೧೧ರ ರಾತ್ರಿ ಕಾಣಿಕೆ ಹುಂಡಿ ಹೊಡೆದು ಸಾವಿರಾರು ರೂ.ಗಳ ಕಳ್ಳತನ ನಡೆದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮುಖಕ್ಕೆ ಮಾಸ್ಕ್ ಧರಿಸಿ ಬಂದಿದ್ದ ಕಳ್ಳರು ದೇವಸ್ಥಾನದ ಅನ್ನ ದಾಸೋಹ ಕೊಠಡಿಯಲ್ಲಿದ್ದ ಸಿಸಿ ಕ್ಯಾಮೆರಾವನ್ನು ಬೇರೆ ದಿಕ್ಕಿಗೆ ತಿರುಗಿಸಿ, ಬೀರುವಿನ ಬಾಗಿಲು ಮುರಿದಿದ್ದಾರೆ. ನಂತರ ಕೊಠಡಿಯಲ್ಲಿದ್ದ ಎರಡು ಕಾಣಿಕೆ ಹುಂಡಿಗಳನ್ನು ಒಡೆದು ಹಣ ಕಳವು ಮಾಡಿ ಪರಾರಿಯಾಗಿದ್ದಾರೆ.

ಈ ಕುಕೃತ್ಯದ ಹಿಂದೆ ದೇವಸ್ಥಾನಕ್ಕೆ ಕೆಟ್ಟ ಹೆಸರನ್ನು ತರಲು ಕಾಣದ ಕೈಗಳ ಕೈವಾಡ ಇದೆ ಏನೋ ಎಂಬ ಅನುಮಾನ ಸಹ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಜಿಲ್ಲೆಯ ವಿವಿಧ ಭಾಗಗಳಲ್ಲಿ ಈ ಹಿಂದೆಯೂ ದೇವಸ್ಥಾನಗಳಲ್ಲಿ ಕಳ್ಳತನಗಳು ನಡೆದಿವೆ ಮತ್ತು ನಡೆಯುತ್ತಿವೆ. ಅಂತೆಯೇ ದೇವಸ್ಥಾನಗಳನ್ನೇ ಗುರಿಯನ್ನಾಗಿಸಿಕೊಂಡು ಕಳ್ಳತನ ಮಾಡುವ ಗ್ಯಾಂಗ್ ರಚನೆಯಾಗಿರಬಹುದೇನೋ ಎಂಬ ಸಂಶಯ ಸಹ ಮೂಡಿದೆ.

ಆದ್ದರಿಂದ ಪೊಲೀಸ್ ಇಲಾಖೆಯು ಕೂಡಲೇ ಈ ಬಗ್ಗೆ ಗಮನ ಹರಿಸಿ ರಾಮೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇಗುಲಗಳಲ್ಲಿ ಕಳ್ಳತನ ಮಾಡಿದವರನ್ನು ಬಂಧಿಸಬೇಕಿದೆಯಲ್ಲದೆ, ಈ ಕಳ್ಳತನದ ಹಿಂದೆ ಕಾಣದ ಕೈಗಳ ಕೈವಾಡದ ಶಂಕೆಯ ಹಿನ್ನೆಲೆಯಲ್ಲಿ ಈ ಬಗ್ಗೆಯೂ ಸಹ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಪತ್ತೆ ಮಾಡಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ಡಾ. ನಾಗರತ್ನ, ರೇಖಾ ಭದ್ರಾವತಿ, ಎನ್.ಹೆಚ್. ದೇವಕುಮಾರ್ ಉಪಸ್ಥಿತರಿದ್ದರು.