ಶಿವಮೊಗ್ಗ, ಆ.13:
ಶಿವಮೊಗ್ಗ ಇಲ್ಲಿನ ಗೋಪಾಲಗೌಡ ಬಡಾವಣೆಯ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ವಸತಿ ವಿದ್ಯಾಲಯದಲ್ಲಿ ಅಂತರ್ ಶಾಲಾ ಮಕ್ಕಳಿಗೆ ಗಣಪತಿ ಹಬ್ಬದ ನಿಮಿತ್ತ ವೈವಿಧ್ಯಮಯ ಗಣಪತಿ ಚಿತ್ರ ರಚನೆಯ ಸ್ಪರ್ಧೆಯನ್ನು ಆಗಸ್ಟ್ 16ರಂದು ಆಯೋಜಿಸಲಾಗಿದೆ.

16ರ ಶನಿವಾರ ಮಧ್ಯಾಹ್ನ 2.30 ರಿಂದ 4.30 ಗಂಟೆಯವರೆಗೆ ನಡೆಯಲಿರುವ ಈ ಸ್ಪರ್ಧೆಯಲ್ಲಿ ಶಿವಮೊಗ್ಗ ನಗರದ ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿರುತ್ತದೆ.


ಮಕ್ಕಳು ಚಿತ್ರ ರಚನೆ ಸ್ಪರ್ಧೆಯಲ್ಲಿ ಭಾಗವಹಿಸಲು ಅಗತ್ಯವಿರುವ ಬಣ್ಣ, ಕ್ರಯಾನ್, ಸ್ಕೆಚ್ ಪೆನ್ ಹಾಗೂ ಇತರ ವಸ್ತುಗಳನ್ನು ತಾವೇ ತರಬೇಕಾಗಿದ್ದು, ಡ್ರಾಯಿಂಗ್ ಹಾಳೆಯನ್ನು ಶಾಲೆಯ ವತಿಯಿಂದ ನೀಡಲಾಗುತ್ತದೆ.

ಬಹುಮಾನ:
ಎಲ್ ಕೆ ಜಿಯಿಂದ 10ನೇ ತರಗತಿವರೆಗಿನ ಪ್ರತಿ ತರಗತಿಯ ವಿದ್ಯಾರ್ಥಿಗಳಿಗೆ ತರಗತಿವಾರು ಐದು ಬಹುಮಾನಗಳನ್ನು ನೀಡಲು ನಿರ್ಧರಿಸಲಾಗಿದೆ.

ಶುಭಾಶಯ:
ಸರ್ವರಿಗೂ ಗಣೇಶ ಚತುರ್ಥಿಯ ಶುಭ ಕೋರಿರುವ ಶ್ರೀ ರಾಮಕೃಷ್ಣ ವಿದ್ಯಾನಿಕೇತನದ ಕಾರ್ಯದರ್ಶಿ ಶೋಭಾ ವೆಂಕಟರಮಣ ಅವರು ಸಕಲ ವಿಘ್ನ ನಾಶಕನಾದ ಗಣಪತಿಯು ವಿದ್ಯಾರ್ಥಿ ಸಮೋಹಕ್ಕೆ ವಿದ್ಯಾ ಪ್ರದಾಯಕನೂ ಇಷ್ಟ ಪ್ರದಾಯಕನೂ ಆಗಿರಲೆಂದು ಪ್ರಾರ್ಥಿಸಿದ್ದಾರೆ.