ಶಿವಮೊಗ್ಗ : ದೂರುದಾರರಾದ ನಾಗರಾಜ ಕೆ. ಬಿನ್ ಲೇಟ್ ಕೆಂಚಪ್ಪನವರು ವ್ಯವಸಾಯಮಾಡಿಕೊಂಡು ಜೀವನ ನೆಡೆಸುತ್ತಿರುವ ವ್ಯಕ್ತಿ ಇವರು ಸಾಗರ ತಾಲೂಕಿನ ಅಂದಾಸುರ ಗ್ರಾಮ ಪಂಚಾಯತಿಯ ಆಚಾಪುರ ಗ್ರಾಮದವರು ಇವರ ಮಗಳು ಭೂವಿಲಾ ಎನ್ (8 ವರ್ಷ) ಈಕೆ ಅಂಗವೈಕಲ್ಯದಿಂದ ಬಳಲುತ್ತಿದ್ದು ಆಕೆಯ ವಿದ್ಯಾಭ್ಯಾಸ ಮತ್ತು ಸರ್ಕಾರಿ ಸೌಲಭ್ಯಗಳನ್ನು ಪಡೆಯುವ ಸಲುವಾಗಿ ಅಂಗವೈಕಲ್ಯ ಸರ್ಟಿಫಿಕೇಟ್ ಪಡೆದುಕೊಳ್ಳಲು ಬಡ ರೈತ ನಾಗರಾಜ್ ಕಳೆದ ಹದಿನೈದು 15-20 ದಿವಸಗಳಿಂದ ಶಿವಮೊಗ್ಗದ ಮಗ್ಗಾನ್ ಆಸ್ಪತ್ರೆಗೆ ಹೋಗಿ ಓಪಿಡಿ ಚೀಟಿ ಮಾಡಿಸಿ ಆಡಳಿತ ವಿಭಾಗದಲ್ಲಿರುವ ಗುಮಾಸ್ತ ನೀಲಕಂಠೇಗೌಡ ರವರನ್ನು ಭೇಟಿ ಮಾಡಿದ್ದಾರೆ ಆಗ ಅವರು ದೂರುದಾರ ನಾಗರಾಜ್ಗೆ ವೈದ್ಯರಿಂದ ಮಗಳನ್ನು ತಪಾಸಣೆ ಮಾಡಿಸಿ ವೈದ್ಯರಿಂದ ಸಹಿ ಪಡೆದು ಫಾರಂಗಳನ್ನು ತಂದು ನೀಡುವಂತೆ ತಿಳಿಸಿದ್ದಾನೆ, ಅದರಂತೆ ದೂರುದಾರರು ವೈದ್ಯರಿಂದ ಪರೀಕ್ಷೆ ಮಾಡಿಸಿ ಫಾರಂಗಳನ್ನು ಭರ್ತಿ ಮಾಡಿಸಿ ಕ್ಲರ್ಕ್ ನೀಲಕಂಠೇಗೌಡರವರಿಗೆ ತಂದು ನೀಡಿದ್ದಾರೆ, ನಂತರ ಫೋಟೋ ಮತ್ತು ಇತರೆ ದಾಖಲಾತಿಗಳನ್ನು ನೀಡಿರುತ್ತಾರೆ ನಂತರ ಕ್ಲರ್ಕ್ ರವರು ಸರ್ಟಿಫಿಕೇಟ್ ರೆಡಿಮಾಡುವುದಾಗಿ ತಿಳಿಸಿದ್ದು, ನಂತರ ದೂರುದಾರರು ಅಪಾದಿತರ ಮೊಬೈಲ್ಗೆ ಸಂಪರ್ಕಿಸಿ ಸರ್ಟಿಫಿಕೇಟ್ ನೀಡುವಂತೆ ಕೇಳಿದಾಗ ಕ್ಲರ್ಕ್ ನೀಲಕಂಠೇಗೌಡ ರವರು ಅಂಗವೈಕಲ್ಯ ಸರ್ಟಿಫಿಕೇಟ್ ನೀಡಲು ರೂ 1500/- ಲಂಚದ ಹಣ ನೀಡುವಂತೆ ಕೇಳಿದ್ದು, ಪಿರ್ಯಾದುದಾರರು ಸದರಿ ಸಂಭಾಷಣೆಯನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿರುತ್ತಾರೆ. ಪಿರ್ಯಾದುದಾರರಿಗೆ ಅವರ ಮಗಳ ಅಂಗವೈಕಲ್ಯ ಸರ್ಟಿಫಿಕೇಟ್ಗಾಗಿ ಪಡೆಯಲು ಕ್ಲರ್ಕ್ ರವರಿಗೆ ಲಂಚದ ಹಣ ನೀಡಲು ಇಷ್ಟವಿಲ್ಲದ ಕಾರಣಕ್ಕೆ ಸದರಿ ಕ್ಲರ್ಕ್ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದಿನಾಂಕ 12/08/2025 ರಂದು ಲೋಕಾಯುಕ್ತ ಕಚೇರಿಗೆ ಹೋಗಿ ದೂರು ನೀಡಿದ್ದಾರೆ. ದೂರಿನ ಅಧಾರದ ಮೇಲೆ ಕಲಂ:7(೩) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988. (ತಿದ್ದುಪಡಿ ಕಾಯಿದೆ-2018) ರೀತ್ಯಾ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು
ದೂರಿನ ಅಧಾರದ ಮೇಲೆ ದಿನಾಂಕ12-08-2025 ರಂದು ಮದ್ಯಾಹ್ನ 3:30 ಸುಮಾರಿಗೆ ಅಪಾದಿತ ಅಧಿಕಾರಿ ಶಿವಮೊಗ್ಗ ಮೆಗ್ಗಾನ್ ಜಿಲ್ಲಾ ಭೋಧನಾ ಆಸ್ಪತ್ರೆಯ ಆಡಳಿತ ಕಛೇರಿಯಲ್ಲಿ ದೂರು ದಾರರಿಂದ 1,500/-ರೂ ಲಂಚದ ಹಣವನ್ನು ಪಡೆದುಕೊಂಡ ಸಮಯಕ್ಕೆ ಸರಿಯಾಗಿ ಲೋಕಾಯುಕ್ತ ಅಧಿಕಾರಿಗಳು ಮತ್ತು ತಂಡ ಆತನನ್ನು ಸರಿಯಾದ ಸಮಯಕ್ಕೆ ಟ್ರ್ಯಾಪ್ ಮಾಡಿದ್ದಾರೆ ಮತ್ತು ಲಂಚದ ಹಣವನ್ನು ಜಪ್ತಿ ಪಡಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಾದಿತ ಅಧಿಕಾರಿಯಾದ ನೀಲಕಂಠೇಗೌಡ ಬಿನ್ ತಿಮ್ಮೇಗೌಡ ನನ್ನು ತನಿಖೆ ಸಂಬಂಧ ವಶಕ್ಕೆ ಪಡೆದು ಪ್ರಕರಣದ ತನಿಖೆಯನ್ನು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ರಾದ ಶ್ರೀ ವೀರಬಸಪ್ಪ ಎಲ್ ಕುಸಲಾಪುರ ರವರು ಕೈಗೊಂಡಿರುತ್ತಾರೆ.

ಸದರಿ ಲೋಕಾಯುಕ್ತ ದಾಳಿಯ ಕಾರ್ಯಾಚರಣೆಯನ್ನು ಮಂಜುನಾಥ ಚೌಧರಿ.ಎಂ. ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ ಬಿ.ಪಿ. ಚಂದ್ರಶೇಖರ್. ಪೊಲೀಸ್ ಉಪಾಧೀಕ್ಷಕರು, ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರಾದ ವೀರಬಸಪ್ಪ ಎಲ್ ಕುಸಲಾಪುರ ರವರು ದಾಳಿ ಮಾಡಿದ್ದು, ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ಗಳಾದ ರುದ್ರೇಶ್ ಕೆ.ಪಿ, ಗುರುರಾಜ ಎನ್ ಮೈಲಾರ್ ಸಿಬ್ಬಂದಿಯವರಾದ ಯೋಗೇಶ್.ಜಿ.ಸಿ, ಸಿ.ಹೆಚ್.ಸಿ, ಮಂಜುನಾಥ.ಎಂ. ಸಿ.ಹೆಚ್.ಸಿ. ಟೀಕಪ್ಪ ಸಿಹೆಚ್ಸಿ, ಬಿ.ಟಿ. ಚನ್ನೇಶ್, ಸಿ.ಪಿ.ಸಿ, ಪ್ರಶಾಂತ್ ಕುಮಾರ್ ಹೆಚ್. ಸಿ.ಪಿ.ಸಿ, ಪ್ರಕಾಶ್ ಬಾರಿಮರದ. ಸಿಪಿಸಿ,ಅರುಣ್ ಕುಮಾರ್.ಯು.ಬಿ.ಸಿ.ಪಿ.ಸಿ, ಆದರ್ಶ್ ಸಿ.ಪಿ.ಸಿ, ಶ್ರೀಮತಿ ಅಂಜಲಿ ಮ.ಪಿ.ಸಿ, ಚಂದ್ರಿಬಾಯಿ.ಎಸ್. ಮ.ಪಿ.ಸಿ, ಪ್ರದೀಪ. ಎ.ಹೆಚ್.ಸಿ, ತರುಣ್ ಎಪಿಸಿ, ಗಂಗಾಧರ ಎಪಿಸಿ,ಆನಂದ. ಎ.ಪಿ.ಸಿ, ಗೋಪಿ ಎ.ಪಿ.ಸಿ ರವರು ಹಾಜರಿದ್ದರು.

.