ಚುಂಚಾದ್ರಿ ಕಪ್ ಶಿವಮೊಗ್ಗ ಜಿಲ್ಲೆಯಲ್ಲಿಯೇ ಒಂದು ವಿಶೇಷವಾದ ಕ್ರೀಡಾಕೂಟ, ಕ್ರೀಡೆಯ ಜೊತೆ ಜೊತೆಗೆ ವಿದ್ಯಾರ್ಥಿಗಳಿಗೆ ಸಂಸ್ಕೃತಿ, ಸಂಸ್ಕಾರವನ್ನು ಕೊಡುವಂತಹ ಕೆಲಸವನ್ನು ಶ್ರೀಮಠ ಮಾಡುತ್ತಾ ಇದೆ. ಎಲ್ಲರೂ ಕೂಡ ಸಂಸ್ಕಾರವಂತರಾಗಬೇಕು, ಭಾರತೀಯ ಸಂಸ್ಕೃತಿ ವಿಶೇಷವಾಗಿ ತಮಗೆಲ್ಲರಿಗೂ ದೊರಕುವಂತಾಗಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪನವರು ಅಭಿಪ್ರಾಯಪಟ್ಟರು.

ಅವರು ನಿನ್ನೆ ಸಂಜೆ ನೆಹರು ಕ್ರೀಡಾಂಗಣದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆ ಹಾಗೂ ಜಿಲ್ಲಾ ವಾಲಿಬಾಲ್ ಸಂಸ್ಥೆ,ಶಿವಮೊಗ್ಗ. ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ 23ನೇ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕ-ಬಾಲಕಿಯರ ಹೊನಲು ಬೆಳಕಿನ ವಾಲಿಬಾಲ್ ಚುಂಚಾದ್ರಿ ಕಪ್ ಪಂದ್ಯಾವಳಿ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ,ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತ ಮನಸ್ಸು ರೂಪಿಸಲು ಕ್ರೀಡೆ ಸಹಕಾರಿ, ಇಂತಹ ಕ್ರೀಡಾಸ್ಪೂರ್ತಿ,ಚುಂಚಾದ್ರಿ ಕಪ್ ನಂತಹ ಕ್ರೀಡಾಕೂಟಗಳಲ್ಲಿ ಕ್ರೀಡಾ ಪ್ರತಿಭಾನ್ವಿತರನ್ನು ಹೊರಹೊಮ್ಮಿಸಲು ಸಾಧ್ಯ ಎಂದು ಹೇಳಿದರು.

ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಪೂಜ್ಯ ಶ್ರೀ ಶ್ರೀ ನಾದಮಯಾ ನಂದನಾಥಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡುತ್ತಾ, ಕ್ರೀಡೆಯ ಮಹತ್ವವನ್ನು ನಾವು ತಿಳಿದುಕೊಳ್ಳಲಿಲ್ಲ ಅಂದರೆ ಜೀವನದಲ್ಲಿ ಯಾವುದೇ ಒಂದು ಅಂಶವನ್ನು ಕಳೆದುಕೊಂಡಿದ್ದೇವೆ ಎಂದರ್ಥ. ದೇಹದ ಅಂಗಾಂಗಗಳಿಗೆ,ಸ್ನಾಯುಗಳಿಗೆ ಬೇಕಾಗಿರುವಂತಹ ದೈಹಿಕ ಚಟುವಟಿಕೆಗಳನ್ನು ಕ್ರೀಡೆಯ ಮೂಲಕ ಅಳವಡಿಸಿಕೊಂಡಾಗ, ಕ್ರೀಡೆ ನಮಗೆ ನೈತಿಕತೆ, ನಾಯಕತ್ವದಗುಣ ಬೆಳೆಯುತ್ತದೆ. ಈ ಒಂದು ಚಟುವಟಿಕೆಯಿಂದ ಆರೋಗ್ಯವನ್ನು ಸುಸ್ಥಿತಿಗೆ ತಂದುಕೊಳ್ಳಲು ಸಾಧ್ಯ ಎಂದರು.


ನಮ್ಮ ದೇಹದಲ್ಲಿ ಇಂಟರ್ನಲ್ ಆರ್ಗ್ಯನ್ಸ್ ಗಳು ನಮಗೆ ಅರಿವಿಲ್ಲದಂತೆ ಎಷ್ಟೋ ಕೆಲಸ ಮಾಡುತ್ತಾ ಇರುತ್ತದೆ.ಭೌತಿಕ ಶರೀರ ಮೆಡಿಕಲ್ ಬಾಡಿ ಅನ್ನೋದು ನಮಗೆ ಸಹಕರಿಸಲಿಲ್ಲ ಅಂದ್ರೆ ನಾವೇನ್ ಮಾಡುತ್ತೇವೆ, ಮೆಡಿಕಲ್ ಪರ್ಪಸ್ಗೆ ಹೋಗುತ್ತೀವಿ, ಮಾತ್ರೆಗಳ ಮೂಲಕ ದೇಹವನ್ನು ಸರಿ ಮಾಡಲಿಕ್ಕೆ ಹೋಗುತ್ತೀವಿ, ಮಾತ್ರೆಗಳನ್ನು ತಗಂಡು ನಮ್ನ ದೇಹ ಮುಂದೆ ಕೆಲಸ ಮಾಡುತ್ತೆ ಅಂತ ಹೇಳಿದರೆ,ಅಂದರೆ ನಮ್ಮ ದೇಹ ಸ್ವಯಂ ಪ್ರೇರಿತವಾಗಿ ಕೆಲಸ ಮಾಡುತ್ತಿಲ್ಲ ಅಂತ ಅರ್ಥ. ಚಟುವಟಿಕೆ ಅಂದರೆ ಉತ್ತಮವಾದ ಕ್ರಿಯೆಯಲ್ಲಿ ಅಂದರೆ,ಕ್ರೀಡೆಯಲ್ಲಿ ಭಾಗವಹಿಸಬೇಕು ಆಗಿದ್ದಾಗ ಮಾತ್ರ ಆರೋಗ್ಯವಂತ ವ್ಯಕ್ತಿಗಳಾಗಲು ಸಾಧ್ಯ ಎಂದರು.

ಕ್ರೀಡೆಯಲ್ಲಿ ಭಾಗವಹಿಸಿ,ಸೋಲು ಗೆಲುವು ಮುಖ್ಯವಲ್ಲ, ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಎಂದು ಕ್ರೀಡಾಪಟುಗಳಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷರಾದ ಭಾಸ್ಕರ್ ಜಿ ಕಾಮತ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭದ್ರಾ ಕಾಡಾ ಅಧ್ಯಕ್ಷರಾದ ಡಾ.ಕೆ. ಸಿ. ಅಂಶುಮಂತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರೇಖ್ಯಾನಾಯ್ಕ್, ಜಿಲ್ಲಾ ವಾಲಿಬಾಲ್ ಸಂಸ್ಥೆಯ ಕಾರ್ಯದರ್ಶಿ,ಕೆ.ಎಸ್. ಶಶಿ, ಸಂಸ್ಥೆಯ ನಿರ್ದೇಶಕರುಗಳಾದ ಕೊಳಿಗೆ ವಾಸಪ್ಪಗೌಡ, ರವೀಶ್, ಕುಮಾರಸ್ವಾಮಿ, ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ಖಜಾಂಚಿ ಉದಯ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
:
ಶ್ರೀಗಳ ಅವಿರತ ಪರಿಶ್ರಮ, ಅವರು ಕೂಡಿಟ್ಟ ಆಧ್ಯಾತ್ಮ ತುಡಿತದ ಮನೋ ಭೂಮಿಕೆಯಿಂದ ಸಾವಿರಾರು ಮಕ್ಕಳು ಶಿಕ್ಷಣದ ಜೊತೆಗೆ , ಕ್ರೀಡಾ ಕ್ಷೇತ್ರಗಳಲ್ಲಿ ಇಂದು ಅಗ್ರ ಪಂಕ್ತಿಯ ಸಮಾಜಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಅನೇಕ ಪ್ರತಿಭಾವಂತರನ್ನು ನಾಡಿಗೆ ಮತ್ತು ದೇಶಕ್ಕೆ ವಿವಿಧ ಕ್ಷೇತ್ರಗಳಲ್ಲಿ ಶ್ರೀ ಮಠ ಕೊಡುಗೆಯಾಗಿ ನೀಡಿರುವುದು ನಮಗೆಲ್ಲ ಸಂತಸ ತಂದಿದೆ.
ಸುಂದರೇಶ್ ಎಸ್. ಹೆಚ್.
ಅಧ್ಯಕ್ಷರು, ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ,ಶಿವಮೊಗ್ಗ