


ಸಾಂದರ್ಭಿಕ ಚಿತ್ರಣ
ನೆಗಿಟೀವ್ ಥಿಂಕಂಗ್
ವಾರದ ಅಂಕಣ- 59
ಗಜೇಂದ್ರ ಸ್ವಾಮಿ ಎಸ್. ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)
ನಮ್ಮ ಈ ಸಮಾಜದಲ್ಲಿ, ಇತ್ತೀಚಿನ ಅತ್ಯಾಧುನಿಕತೆಯ ಪ್ರಪಂಚದ ಲೋಕದಲ್ಲಿ ಆರೋಗ್ಯ, ಶಿಕ್ಷಣ ಅತಿ ಮುಖ್ಯ ಎಂಬುದನ್ನು ಅರಿತಿದ್ದೇವೆ. ಈ ಎರಡು ವಿಭಾಗಗಳಲ್ಲಿ ಹೊಸಹೊಸ ಆವಿಷ್ಕಾರಗಳು ನಿತ್ಯ ನಿರಂತರವಾಗಿ ನಡೆಯುತ್ತಲೇ ಬಂದಿವೆ, ಈಗಲೂ ನಡೆಯುತ್ತಿವೆ. ವೈದ್ಯರಿಗಿಂತ ಯಂತ್ರ (?)ಗಳೇ ನಮ್ಮ ಆರೋಗ್ಯದ ತಲೆ ಬುಡವನ್ನು ಅರ್ಥ ಮಾಡಿಕೊಳ್ಳುವಂತಹ, ಅರ್ಥ ಮಾಡಿಸುವಂತಹ ಪ್ರಕ್ರಿಯೆ ಸಹಜವಾಗಿ ಕಂಡುಬರುತ್ತದೆ ಅಲ್ಲವೇ? ಆದರೆ ಕೆಲವೇ ಕೆಲವು ದೊಡ್ಡ ಹೆಸರಿನ ಅತ್ಯುನ್ನತ ಮಿಷನ್ (?)ಗಳನ್ನು ಅಂದರೆ ಯಂತ್ರಗಳನ್ನು ಹಾಕಿಕೊಂಡು ಭವ್ಯ ಹಾಗೂ ಸುಸಜ್ಜಿತ ಕಟ್ಟಡಗಳಲ್ಲಿ ಆಸ್ಪತ್ರೆಗಳನ್ನು ನಡೆಸುತ್ತಾ ಬಂದು ಯಾವುದೆ ಅನಾರೋಗ್ಯ ಪೀಡಿತನಾಗಿರಲಿ ಇಷ್ಟು ಬಗೆಯ ಚೆಕಪ್ ಮಾಡಿ ಇಲ್ಲದ ಕಾಯಿಲೆಯನ್ನು ಹುಡುಕುತ್ತಾ ಕೊನೆಗೊಂದು ಕಾಯಲೆ ಸಿಕ್ಕಾಗ ಅದಕ್ಕೆ ಚಿಕಿತ್ಸೆ ಕೊಟ್ಟು ರೊಕ್ಕ ಮಾಡುವ ಆಸ್ಪತ್ರೆಗಳತ್ತ ಸುಖ ಸುಮ್ಮನೆ ತಿರುಗಿಯೂ ನೋಡಬೇಡಿ ಎಂಬುದು ಈ ವಾರದ ನೆಗೆಟಿವ್ ಥಿಂಕಿಂಗ್ ಅಂಕಣದ ವಿಷಯ.

ಹಿಂದಿನ ದಿನಮಾನಗಳಲ್ಲಿ ಇದ್ದಂತಹ ವ್ಯವಸ್ಥೆ, ಅಂದು ಇದ್ದಂತಹ ನಾಟಿ ಚಿಕಿತ್ಸಾ ಪದ್ಧತಿ, ಅಂದಿನ ದಿನಕ್ಕೆ ಪೂರಕವಾಗಿ ಅರ್ಥಪೂರ್ಣವಾಗಿ ದೊರಕುತ್ತಿತ್ತು. ಅಂದು ನಾವು ತಿನ್ನುತ್ತಿದ್ದ ಆಹಾರ ಪದಾರ್ಥಗಳಲ್ಲೂ ಸಹ ಅಷ್ಟೇ ಶಕ್ತಿಶಾಲಿ ಅಂಶ ದೊರಕುತ್ತಿತ್ತು.
ಈಗ ನಮ್ಮ ಬದುಕು ಬದಲಾವಣೆಯಾಗಿದೆ. ಕುರುಮ್ ಕುರುಮ್ ಐಟಂಗಳಿಂದ ನಮ್ಮನ್ನು ನಾವು ಇದ್ದು ಇಲ್ಲದ ರೀತಿಯಲ್ಲಿ ನೋಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಇದು ಸಾರಸತ್ವವೇ ಎಷ್ಟೊಂದು ಆಹಾರದ ಐಟಂಗಳಿವೆಯಲ್ಲವೇ?

ಈಗ ಹಾದಿ ಬೀದಿಯಲ್ಲಿ ದೊಡ್ಡ ದೊಡ್ಡ ಆಸ್ಪತ್ರೆಗಳು, ಅದರ ಮುಂದೆ ನೂರಾರು ಜನ ರೋಗಿಗಳು ಮತ್ತು ಪೋಷಕರು ಸದಾ ನಿಂತಿರುತ್ತಾರೆ. ಅಂದರೆ ಈಗ ರೋಗಗಳ ಸಂಖ್ಯೆ ಹೆಚ್ಚಾಯಿತಾ ಅಥವಾ ನಮ್ಮನ್ನು ನಾವು ಸರಿಯಾಗಿ ಬೆಳೆಸಿಕೊಳ್ಳದ ಕಾರಣವ ಎಂಬುದನ್ನು ಯಾರೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲದ ವ್ಯವಸ್ಥೆಗೆ ನಾವು ತಲುಪಿದ್ದೇವೆ.
ಕೆಲವು ಆಸ್ಪತ್ರೆಗಳ ಕರ್ಮಕಾಂಡವನ್ನು ನಾವು ನಿರಂತರವಾಗಿ ಕೇಳುತ್ತಲೇ ಬಂದಿದ್ದೇವೆ. ಒಬ್ಬೊಬ್ಬ ವೈದ್ಯರಿಗೆ ಒಂದಿಷ್ಟು ಟಾರ್ಗೆಟ್ ನೀಡುತ್ತಾರಂತೆ. ಅಷ್ಟೇ ಪ್ರಮಾಣದ ವೇತನ ಕೊಡುತ್ತಾರಂತೆ, ಹಾಗೆಯೇ ಅಲ್ಲಿ ಇರುವಂತಹ ಆರೋಗ್ಯದ ತಪಾಸಣಾ ಯಂತ್ರಗಳ ಸದ್ಬಳಕೆ ಮಾಡಿಕೊಳ್ಳಲು ಸೂಚನೆ ನೀಡುತ್ತಾರಂತೆ, ಚಿಕ್ಕದೊಂದು ಮೈ ಕೈ ನೋವು ಎಂದು ಹೋದರೆ ಮೊದಲು ರಕ್ತ ಪರೀಕ್ಷೆಯಿಂದ ಶುರುವಾಗುತ್ತದೆ. ಅದಕ್ಕೆ ಸಾವಿರಗಟ್ಟಲೆ ಸುರಿಯಬೇಕು ಬಡವನಾದರೆ ಅವನ ಪರಿಸ್ಥಿತಿ ಭಗವಂತನಿಗೂ ಬೇಡ ಎನ್ನುವ ಗೋಳು ಅಲ್ಲಿ ಕಾಣುತ್ತದೆ.

ಬದುಕಬೇಕೆಂಬ ಹಂಬಲ ರೋಗಿಗಳಿಗೆ ಹಾಗೂ ಅವರ ಪೋಷಕರಿಗೆ ಇರುವುದು ಸಹಜ ಹಾಗೂ ಅದು ವಾಸ್ತವ. ಆದರೆ ಕಾಯಿಲೆ ಹುಡುಕುವ ನೆಪದಲ್ಲಿ ರಕ್ತ ಪರೀಕ್ಷೆಯಿಂದ ಆರಂಭಗೊಂಡು ಸ್ಕ್ಯಾನಿಂಗ್, ಎಂಆರ್ ಚಿಕಿತ್ಸೆಗಳು, ಇಸಿಜಿ, ಎಕೋ, ತಲೆಗೊಂದು ಚಿಕಿತ್ಸೆಯಾದರೆ, ಹೊಟ್ಟೆಯ ಭಾಗದಲ್ಲಿ ಮತ್ತೊಂದು ಬಗೆಯ ತಪಾಸಣೆ ಈ ಎಲ್ಲವನ್ನು ಹುಡುಕಿದಾಗ ಯಾವುದಾದರೂ ಒಂದು ಬಗೆಯಲ್ಲಿ, ಒಂದು ಕಡೆ ಸಮಸ್ಯೆ ಕಂಡು ಬರುತ್ತದೆ.
ಸಮಸ್ಯೆ ಹುಡುಕುವ ಪ್ರಯತ್ನ ಒಳ್ಳೆಯದಾದರೂ ಸಹ ಹಿಂದಿನ ವೈದ್ಯ ಲೋಕ ಇದ್ದಂತಹ ರೀತಿಯಲ್ಲಿ ಈಗಿನ ಕೆಲವು ವೈದ್ಯರು ಇದ್ದಾರೆ ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ ಮತ್ತೆ ಕೆಲವರು ಆಸ್ಪತ್ರೆಯ ಆದಾಯ ಹೆಚ್ಚಿಸುವ ತಮ್ಮ ಆದಾಯವನ್ನು ನೋಡಿಕೊಳ್ಳುವ ಕೆಲಸಕ್ಕೆ ಈ ಮಾರ್ಗವನ್ನು ಹುಡುಕಿದ್ದಾರೆಯೇ ಎಂಬ ಅನುಮಾನದ ಪ್ರಶ್ನೆ ಬಹಳಷ್ಟು ಜನ ಕೇಳಿರುವುದನ್ನು ನಾವು ಗಮನಿಸಿದ್ದೇವೆ ಅಲ್ಲವೇ?

ಮತ್ತೊಂದು ಕಡೆ ಹೋದ ಜೀವವನ್ನು ಇನ್ನೂ ಇದೆ ಎನ್ನುತ್ತಾ ಐಸಿಯುನಲ್ಲಿ ಒಂದೆರಡು ದಿನ ಇಟ್ಟು ಆ ಯಂತ್ರದ ಮೂಲಕ ಅದರ ಖರ್ಚು ವೆಚ್ಚವನ್ನು ಹಾಗೂ ಆಸ್ಪತ್ರೆಯ ಆದಾಯವನ್ನು ವೃದ್ಧಿಸಿಕೊಂಡಂತಹ ನಿದರ್ಶನಗಳನ್ನು ನಾವು ಸಾಕಷ್ಟು ಕಡೆ ಕೇಳಿದ್ದೇವಲ್ಲವೇ? ವೈದ್ಯ ದೇವರಿಗೆ ಸಮಾನ ಎಂಬ ಮಾತನ್ನು ನಾವು ಅತ್ಯಂತ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲೇಬೇಕು. ಆದರೆ ಈ ವೈದ್ಯ ಲೋಕದ ಕೆಲವರ ವರ್ತನೆ, ಇಡೀ ವ್ಯವಸ್ಥೆಯನ್ನು ಒಂದೆಡೆ ನಿತ್ರಾಣ ಮಾಡುತ್ತದೆ. ನನ್ನವರು ಉಳಿಯಲಿ ಎಂಬ ಆಶಯ ಒಂದು ಬಗೆಯ ಒಂದು ಕಡೆಯಾದರೆ ಅದಕ್ಕಾಗಿ ಜನಸಾಮಾನ್ಯರಿಗೆ ಗೊತ್ತಿಲ್ಲದ ಪದ ಹೇಳುತ್ತಾ, ಇದ್ದ ಸ್ವಲ್ಪ ಆರೋಗ್ಯವನ್ನು ಹದಗೆಡಿಸುವ ಎಷ್ಟೋ ನಿದರ್ಶನಗಳು ನಾವು ಕಣ್ಣಾರೆ ಕಂಡಿದ್ದೇವೆ.
ಕಳೆದ ವರ್ಷವಷ್ಟೇ ದೂರದ ಆಸ್ಪತ್ರೆಯಿಂದರಲ್ಲಿ ಓಪನ್ ಹಾರ್ಟ್ ಸರ್ಜರಿ ಮಾಡಿಸಿಕೊಂಡು ಬಂದಿದ್ದ ವ್ಯಕ್ತಿಯನ್ನು ಇಲ್ಲಿ ಹುಷಾರಿಲ್ಲ ಎಂಬ ಕಾರಣಕ್ಕೆ ಬಂದಾಗ ನಿಮ್ಮ ಹಾರ್ಟನ್ನು ಪರೀಕ್ಷಿಸಬೇಕು ಎಂದು ಮತ್ತೆ ಓಪನ್ ಹಾರ್ಟ್ ಸರ್ಜರಿ ಆಗಬೇಕಿದೆ. ಕೂಡಲೇ ಮೂರುವರೆ ಲಕ್ಷ ರೂಪಾಯಿ ಕೊಡಿ ಎನ್ನುವ ಕರೆಗಳು ರಾತ್ರಿ ಪೋಷಕರಿಗೆ ಬಂದಾಗ ಅವರ ಪರಿಸ್ಥಿತಿ ಏನಾಗಬಹುದು.

ಚೆನ್ನಾಗಿದ್ದವರು ತಮ್ಮ ಆರೋಗ್ಯವನ್ನು ಹದಗೆಡಿಸಿಕೊಳ್ಳಲು ಇಂತಹ ದೊಡ್ಡ ಆಸ್ಪತ್ರೆಗೆ ಬಂದರಾ ಅಥವಾ ಈ ಆಸ್ಪತ್ರೆಯವರು ಸಾವನ್ನೇ ದೂರ ತಳ್ಳಿ ಆರೋಗ್ಯವಂತರನ್ನಾಗಿ ಮಾಡುತ್ತಾರೆಯೇ ಎಂಬ ಪ್ರಶ್ನೆ ಪಬ್ಲಿಕ್ ವಲಯಯದ್ದು.
ನಾವು ಒಂದು ವಿಷಯವನ್ನು ಅತ್ಯಂತ ಗಂಭೀರವಾಗಿ ಗಮನಿಸಲೇಬೇಕು ಏಕೆಂದರೆ ಇಂದಿನ ದಿನಮಾನಗಳಲ್ಲಿ ಆಸ್ಪತ್ರೆಗಳು ಎಷ್ಟು ಬಗೆ ಬಗೆ ಆಗಿರುತ್ತವೆ ಎಂದರೆ ಅದನ್ನು ವರ್ಣಿಸಲು ಅಸಾಧ್ಯ.
ಇಲ್ಲಿ ದುಡ್ಡು ಬೇಕು ಎಂಬುದು ಅತ್ಯಂತ ಮುಖ್ಯ. ಈಗ ರೋಬೋಟ್ ಯಂತ್ರವೇ ಶಸ್ತ್ರ ಚಿಕಿತ್ಸೆ ನಡೆಸುವ ಹಂತಕ್ಕೆ ತಲುಪಿದೆ ಎಂದರೆ ನಮ್ಮ ದೇಹ ಅದರ ಆರೋಗ್ಯ ಎಷ್ಟು ಸೂಕ್ಷ್ಮವಾಗಿದೆ ಎಂಬುದನ್ನು ನಾವು ಚಿಂತಿಸುವ ಅಗತ್ಯ ಇದೆ ಅಲ್ಲವೇ? ಆರೋಗ್ಯವೇ ಭಾಗ್ಯ ಎನ್ನುವ ನಮ್ಮ ಸಿದ್ಧಾಂತಗಳು ಈ ಇಲಾಖೆಯ ಕೆಲವರಿಂದ ಸಂಪೂರ್ಣವಾಗಿ ಸುಲಿಗೆಯ ದುಡಿಮೆಯಂತೆ ಕಾಣಿಸಿಕೊಳ್ಳುತ್ತಿರುವುದು ಹಾಗೂ ಮಾಡುತ್ತಿರುವುದು ದುರಂತದ ಪ್ರಶ್ನೆ ಅಲ್ಲವೇ?
ಇದನ್ನೂ ಓದಿ SHIMOGA |ಜಿಲ್ಲೆಯಲ್ಲಿ ಗುರುತಿಸಲಾಗಿರುವ ಹಾಗೂ ಗುರುತಿಸಲು ಸಾಧ್ಯವಾಗದೇ ಇರುವ ಪ್ರವಾಸಿ ತಾಣಗಳನ್ನು ಜಗತ್ತಿಗೆ ಪರಿಚಯಿಸುವ ಸದುದ್ದೇಶದಿಂದ ವಿವಿಧ ಕಾರ್ಯಕ್ರಮಗಳು : ಜಿಲ್ಲಾಧಿಕಾರಿ ಗುರುದತ್ತಹೆಗಡೆ https://tungataranga.com/?p=44425
ಸಂಪೂರ್ಣ ಸುದ್ದಿ ಓದಲು ಆಯಾ ಲಿಂಕ್ ಬಳಸಿ
ಗಮನಿಸಿ ಕಿರಿಕಿರಿ ಇಲ್ಲದ ಸುದ್ದಿವಾಹಿನಿಯ ತುಂಗಾತರಂಗ ಗುಂಪಲ್ಲಿ ಇಲ್ಲದವರು ಮಾತ್ರ ಕೆಳಗಿನ ಲಿಂಕಲ್ಲಿ ಸೇರಿ https://chat.whatsapp.com/DvWBmQxqpjV906mtKCFNZ5
ಮತ್ತೊಂದು ವಿಶೇಷವೆಂದರೆ ಫ್ರೀ ಕ್ಯಾಂಪ್ ಹೆಸರಿನಲ್ಲಿ ಗಿರಾಕಿಗಳನ್ನು ಹುಡುಕುವ ಎಷ್ಟೋ ಆಸ್ಪತ್ರೆಗಳನ್ನು ನಾವು ಕಣ್ಣಾರೆ ಕಂಡಿದ್ದೇವೆ. ಒಟ್ಟು ಆಸ್ಪತ್ರೆಯ ಖರ್ಚು ವೆಚ್ಚಗಳನ್ನು ಸರಿದೂಗಿಸಲು ಆದಾಯವನ್ನು ಕೂಡಿಡಲು ಗಿರಾಕಿಗಳನ್ನು ರೋಗಿಗಳ ಹೆಸರಿನಲ್ಲಿ ಹುಡುಕುವ ಪ್ರಯತ್ನ ಸಾಕಷ್ಟು ಕಡೆ ನಡೆಯುತ್ತಿದೆ. ಎಲ್ಲಾ ಶಿಬಿರಗಳು ಅಂದರೆ ಇಂತಹ ತಪಾಸಣಾ ಶಿಬಿರಗಳು ಕೆಟ್ಟವು ಎಂದು ಹೇಳಲಾಗದು. ತುಂಬಾ ಅರ್ಥಗರ್ಭಿತವಾಗಿ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸಾಕಷ್ಟು ಶಿಬಿರಗಳು ನಡೆದಿವೆ. ಅದರ ನಡುವಿನ ಒಂದಿಷ್ಟು ಶಿಬಿರಗಳು ಗಿರಾಕಿಗಳನ್ನು ಹುಡುಕುವ ತಂತ್ರವನ್ನು ಪಾಲಿಸುತ್ತಿವೆ ಎಂಬುದು ಬಹಳಷ್ಟು ಜನರ ಮಾತು.
ವೈದ್ಯರನ್ನು ಹಾಗೂ ಆ ಲೋಕವನ್ನು ದೇವರಂತೆ ಪೂಜಿಸುವ ಜನಸಾಮಾನ್ಯರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರುವ ವೈದ್ಯ ಸಮೂಹಕ್ಕೆ ನಮ್ಮ ನಮನಗಳು. ಅದೇ ಹೆಸರಿನಲ್ಲಿ ದುಡಿಮೆಯ ಹಾದಿ ಹಚ್ಚಿಕೊಂಡವರಿಗೆ ನಮ್ಮ ಧಿಕ್ಕಾರವಿರಲಿ ಅಲ್ಲವೇ?
ಮತ್ತೊಂದು ವಿಶೇಷವೆಂದರೆ ಫ್ರೀ ಕ್ಯಾಂಪ್ ಹೆಸರಿನಲ್ಲಿ ಗಿರಾಕಿಗಳನ್ನು ಹುಡುಕುವ ಎಷ್ಟೋ ಆಸ್ಪತ್ರೆಗಳನ್ನು ನಾವು ಕಣ್ಣಾರೆ ಕಂಡಿದ್ದೇವೆ. ಒಟ್ಟು ಆಸ್ಪತ್ರೆಯ ಖರ್ಚು ವೆಚ್ಚಗಳನ್ನು ಸರಿದೂಗಿಸಲು ಆದಾಯವನ್ನು ಕೂಡಿಡಲು ಗಿರಾಕಿಗಳನ್ನು ರೋಗಿಗಳ ಹೆಸರಿನಲ್ಲಿ ಹುಡುಕುವ ಪ್ರಯತ್ನ ಸಾಕಷ್ಟು ಕಡೆ ನಡೆಯುತ್ತಿದೆ. ಎಲ್ಲಾ ಶಿಬಿರಗಳು ಅಂದರೆ ಇಂತಹ ತಪಾಸಣಾ ಶಿಬಿರಗಳು ಕೆಟ್ಟವು ಎಂದು ಹೇಳಲಾಗದು. ತುಂಬಾ ಅರ್ಥಗರ್ಭಿತವಾಗಿ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸಾಕಷ್ಟು ಶಿಬಿರಗಳು ನಡೆದಿವೆ. ಅದರ ನಡುವಿನ ಒಂದಿಷ್ಟು ಶಿಬಿರಗಳು ಗಿರಾಕಿಗಳನ್ನು ಹುಡುಕುವ ತಂತ್ರವನ್ನು ಪಾಲಿಸುತ್ತಿವೆ ಎಂಬುದು ಬಹಳಷ್ಟು ಜನರ ಮಾತು.







ವೈದ್ಯರನ್ನು ಹಾಗೂ ಆ ಲೋಕವನ್ನು ದೇವರಂತೆ ಪೂಜಿಸುವ ಜನಸಾಮಾನ್ಯರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರುವ ವೈದ್ಯ ಸಮೂಹಕ್ಕೆ ನಮ್ಮ ನಮನಗಳು. ಅದೇ ಹೆಸರಿನಲ್ಲಿ ದುಡಿಮೆಯ ಹಾದಿ ಹಚ್ಚಿಕೊಂಡವರಿಗೆ ನಮ್ಮ ಧಿಕ್ಕಾರವಿರಲಿ ಅಲ್ಲವೇ?