ಹುಡುಕಾಟದ ವರದಿ-೦೧
ಶಿವಮೊಗ್ಗ, ಆ.೦೫:
ಇಲ್ಲಿನ ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಅದರಲ್ಲೂ ಇ-ಸ್ವತ್ತು ಹಾಗೂ ಬಿ ಖಾತಾ ವಿಚಾರದ ನಿತ್ಯ ನಿರಂತರ ಸಾರ್ವಜನಿಕರ ದೂರುಗಳು ಕೇಳಿಬರುತ್ತಿದ್ದು, ಖಡಕ್ ಅಧಿಕಾರಿಯೊಬ್ಬರು ಇದ್ದಾಗ ಹೇಗೆ ತಾನೆ ಬದಲಾವಣೆಯಾಗಲು ಸಾಧ್ಯ ಎಂಬು ದನ್ನು ಕಳೆದ ಎರಡು ತಿಂಗಳ ಹಿಂದಷ್ಟೇ ಶಿವ ಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರಾಗಿ ಬಂದ ಮಾಯಣ್ಣಗೌಡರು ನಿಜಕ್ಕೂ ತೋರಿಸಿ ಕೊಟ್ಟಿದ್ದಾರೆ ಎಂಬುದು ನಗರದ ಜನರ ಮಾತು.

ಕಳೆದ ಎರಡು ತಿಂಗಳ ಹಿಂದೆ ಇ-ಸ್ವತ್ತಿನ ವಿಚಾರದಲ್ಲಿ ನಿತ್ಯ ನಿರಂತರವಾಗಿ ನಗರ ಪಾಲಿಕೆಯ ಕಂದಾಯ ವಿಭಾಗ ಸದಾ ಗಜಿಬಿಜಿಯಲ್ಲಿರುತ್ತಿತ್ತು. ಮಾತೆತ್ತಿದ್ದರೆ ಸರ್ವರ್ ಸಮಸ್ಯೆ ಎನ್ನುತ್ತಿದ್ದ ಡಾಟ ಆಪರೇಟರ್ ಇಂದ ಹಿಡಿದು ಬೇಕಂತಲೇ ಹೆಸರನ್ನು ಅಥವಾ ಖಾತಾ ಸಂಖ್ಯೆಯನ್ನು ಬದಲಾಯಿಸಿ ಮತ್ತಷ್ಟು ಕಿರಿಕಿರಿ ಮಾಡುತ್ತಿದ್ದರಲ್ಲದೇ ಅಲ್ಲಿನ ಕೆಲ ಅಧಿಕಾರಿಗಳೇ ಬ್ರೋಕರ್ಗಳಾಗಿ ವರ್ತಿಸುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು.


ಇದರ ನಡುವೆ ಅಂದಿದ್ದ ಹಿರಿಯ ಅಧಿಕಾ ರಿಗಳು ಸಹ ಇವರಿಗೆ ಕುಮ್ಮಕ್ಕು ನೀಡುತ್ತಿದ್ದರು ಎನ್ನುವ ಆರೋಪ ನಗರ ಪಾಲಿಕೆಯ ಪಡಸಾ ಲೆಯಲ್ಲಿ ನಿತ್ಯ ಕೇಳಿಬರುತ್ತಿತ್ತು. ನಿರಂತರವಾಗಿ ಪಾಲಿಕೆಯ ಕಂದಾಯ ವಿಭಾಗದ ಬಿಲ್ ಕಲೆಕ್ಟರ್, ಪ್ರಥಮ ದರ್ಜೆ ಸಹಾಯಕ, ಆರ್ಐ ಹಾಗೂ ಪಾಲಿಕೆಯ ಮುಖ್ಯ ಕಂದಾಯ ಆಯುಕ್ತರ ವಿರುದ್ಧ ಕನಿಷ್ಠ ಏನಿಲ್ಲವೆಂದರೂ ದಿನಕ್ಕೆ ಹತ್ತಾರು ಜಗಳಗಳು, ಜನರ ಕೂಗಾಟ ಕೇಳಿಬರುತ್ತಲೇ ಇದ್ದವು ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಪಾಲಿಕೆ ಆಯುಕ್ತರಾಗಿ ಆಗಮಿಸಿದ ಮಾಯಣ್ಣಗೌಡರು, ಮೌನವಾಗಿ, ನಿರಂತರವಾಗಿ ಕಂದಾಯವಿಭಾಗವನ್ನು ಶುಚಿ ಮಾಡುತ್ತಲೇ ಹೋದರು. ಜಾಡಿಸುವ ಕಡೆ ಸರಿಯಾಗಿ ಜಾಡಿಸಿದ್ದಲ್ಲದೇ ನಿರಂತರವಾಗಿ ಅವರ ಮೇಲೆ ಹದ್ದಿನಕಣ್ಣಿಟ್ಟಿದ್ದರು.

ಇದೇ ಸಂದರ್ಭದಲ್ಲಿ ಪಾಲಿಕೆಯ ಆಡಳಿತವನ್ನು ಒಂದಿಷ್ಟು ವ್ಯವಸ್ಥಿತವಾಗಿ ಮಾಡಲು ಮೂರು ವಿಭಾಗಗಳಾಗಿ ಬದಲಾವಣೆ ಮಾಡಲಾಗಿದ್ದು, ಅಲ್ಲಿ ನಡೆಯುವ ಚಟುವಟಿಕೆ ಗಳನ್ನು ಗಮನಿಸುತ್ತಲೇ ಹೋದರು. ಸದಾ ಛೀ…. ಥೂ…, ಎನಿಸಿಕೊಳ್ಳುತ್ತಿದ್ದ ಕಂದಾಯ ವಿಭಾಗದಲ್ಲೀಗ. ಅಧಿಕಾರಿಗಳು ಹಾಗೂ ನೌಕ ರರು ಯಾವುದೇ ಕಡತಗಳನ್ನು ಅನಗತ್ಯವಾಗಿ ಇಟ್ಟಿಕೊಳ್ಳುವಂತಿಲ್ಲ. ಇ-ಸ್ವತ್ತು ಹಾಗೂ ಬಿ ಖಾತಾ ವ್ಯವಸ್ಥೆಯನ್ನು ಇನ್ನೊಂದಿಷ್ಟು ಸಡಿಲಿಸಿ ಯಾವುದೇ ಸಾರ್ವಜನಿಕರು ನನ್ನ ಬಳಿ ಬಂದು ನಿಮ್ಮ ವಿರುದ್ಧ ದೂರು ಹೇಳುವಂತಿಲ್ಲ. ಆ ರೀತಿಯ ದೂರು ಬಂದರೆ ನಾನು ಸುಮ್ಮನಿರು ವುದಿಲ್ಲ. ಜನರಿಗೆ ಸ್ಪಷ್ಟ ಕಾರಣವನ್ನು ಸರಿಯಾಗಿ ಹೇಳಿ ಕಳುಹಿಸಬೇಕು ಎಂದು ಸೂಚಿಸಿದರು.
ಇದು ಮೊದಲ ಹಂತದ ಜನರ ಪ್ರೀತಿ ಪಡೆಯುವ ಯಶಸ್ಸು ಎಂದರೆ ತಪ್ಪಗಾಲಿಕ್ಕಿಲ್ಲ. ಗೌಡರು ಹೆಚ್ಚು ಮಾತನಾಡುವುದಿಲ್ಲ. ಸದಾ ಒಂದಿಲ್ಲಾ ಒಂದು ಚಟುವಟಿಕೆಗಳಲ್ಲಿ ತೊಡಗುತ್ತಾ ಇಡೀ ಪಾಲಿಕೆಯ ವ್ಯವಸ್ಥೆಯನ್ನು ಸರಿಪಡಿಸುತ್ತಾ ಹೋದರು. ಹಾಗಾಗಿ ಸಾರ್ವಜನಿಕರ ದೂರಿನ ಪ್ರಮಾಣ ಬಹಳ ಕಡಿಮೆಯಾಗಿದೆ.
ಗೌಡ್ರು ಬರ್ತಾರೆ ಫೈಲ್ ಕ್ಲಿಯರ್ ಮಾಡ್ಬೇಕು!
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಇ-ಸ್ವತ್ತು ಹಾಗೂ ಬಿ ಖಾತಾ ವಿಚಾರವಾಗಿ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಆಯುಕ್ತರಾದ ಮಾಯಣ್ಣಗೌಡರು ಕಳೆದ ಒಂದು ತಿಂಗಳಿನಿಂದಲೇ ವಲಯ ಕಛೇರಿಗಳನ್ನು ಪ್ರತಿ ವಾರಕ್ಕೊಮ್ಮೆ ಭೇಟಿ ಮಾಡಿ ಅರ್ಜಿಗಳ ದೂರು ಪರಿಹಾರ ಸಂಬಂಧ ಕ್ರಮ ಕೈಗೊಳ್ಳುತ್ತಿದ್ದಾರೆ. ವಲಯ-೧ ವಿನೋಬನಗರಕ್ಕೆ ಪ್ರತಿ ಮಂಗಳವಾರ ಮದ್ಯಾಹ್ನ ೩ರಿಂದ ೫ಗಂಟೆಯವರೆ ಸಪ್ತಾಹಿಕ ಕಂದಾಯ ಶಾಖೆ ದೂರು ಪರಿಹಾರ ಸಭೆ ನಡೆಯಲಿದೆ. ಅಂತೆಯೆ ಪ್ರತಿ ಗುರುವಾರ ಮದ್ಯಾಹ್ನ ೩ರಿಂದ ೫ರವರೆಗೆ ಟಿ ಸೀನಪ್ಪಶೆಟ್ಟಿ ವೃತ್ತದ ದೇವರಾಜ್ ಅರಸ್ ವಾಣಿಜ್ಯ ಸಂಕೀರ್ಣದ ವಲಯ-೦೨ನಲ್ಲಿ ಸಭೆ ನಡೆಸುತ್ತಿದ್ದಾರೆ. ಶುಕ್ರವಾರ ಮದ್ಯಾಹ್ನ ೩ರಿಂದ ೫ರವರೆಗೆ ಪಾಲಿಕೆ ಕಛೇರಿಯಲ್ಲಿ ವಲಯ ೩ರಲ್ಲಿ ಈ ಪರಿಹಾರ ಸಭೆಯನ್ನು ನಡೆಸುತ್ತಿದ್ದು, ಸಾರ್ವಜನಿಕರು, ಆಸ್ತಿ ತೆರಿಗೆ ಮಾಲೀಕರು, ಕಂದಾಯ ಶಾಖೆಗೆ ಸಂಬಂಧಪಟ್ಟಂತೆ ತಮ್ಮ ಅರ್ಜಿ ದಾಖಲೆಗಳು ಹಾಗೂ ಸಂಕ್ಷಿಪ್ತ ದೂರಿನ ಸಹಿತ ವಲಯ ಕಛೇರಿಯಲ್ಲಿ ಆಯುಕ್ತರನ್ನು ಸಂಪರ್ಕಿಸಿ ತಮ್ಮ ಅಹವಾಲುಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ.