ಶಿವಮೊಗ್ಗ : ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕು ಎಂಬ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದಿಂದ ಇಂದು ಜೆಪಿಎನ್ ರಸ್ತೆಯ ಜ್ಯುಯೆಲ್ ರಾಕ್ ಹೋಟೆಲ್ ಬಳಿಯ ಗಣಪತಿ ದೇವಸ್ಥಾನದಲ್ಲಿ ೧೦೮ ಕಾಯಿ ಗಣಹೋಮ, ವಿಶೇಷ ಸಂಕಲ್ಪ ಪೂಜೆ ನಡೆಸಲಾಯಿತು.


ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಮೇಲೆ ನಾಡಿನ ಉದ್ದಗಲಕ್ಕೂ ಸಂಚರಿಸಿದ್ದಾರೆ. ಪಕ್ಷವನ್ನು ಸಂಘಟಿಸಿದ್ದಾರೆ. ಉಪಮುಖ್ಯಮಂತ್ರಿಯೂ ಆಗಿದ್ದಾರೆ. ಆದರೆ, ಪಕ್ಷಕ್ಕಾಗಿ ದುಡಿದವರಿಗೆ ಮುಖ್ಯಮಂತ್ರಿಯಾಗಬೇಕು ಎಂಬ ಹಂಬಲ ಇದ್ದೇ ಇರುತ್ತದೆ.

ಆದ್ದರಿಂದ ಈ ಹುದ್ದೆ ಅವರಿಗೆ ಆದಷ್ಟು ಬೇಗನೇ ಸಿಗಲಿ ಎಂಬ ಹಿನ್ನೆಲೆಯಲ್ಲಿ ದೇವರ ಪೂಜೆ ಹಾಗೂ ಪ್ರಾರ್ಥನೆ ಮೂಲಕ ಅವರಿಗೆ ಆ ಯೋಗ

ಪ್ರಾಪ್ತವಾಗಲಿ ಎಂದು ನಾವು ಬಯಸಿ ಈ ಪೂಜೆ ನಡೆಸಲಾಗಿದೆ ಎಂದು ಡಿಕೆಶಿ ಅಭಿಮಾನಿಗಳ ಸಂಘದ ಅಧ್ಯಕ್ಷ ಆರ್. ಮೋಹನ್ ತಿಳಿಸಿದರು.
ಈ ಸಂದರ್ಭದಲ್ಲಿ ಎಸ್. ತಂಗರಾಜ್, ಹನುಮೇಶ್ ಕೆ.ಆರ್., ಹಾಪ್ಕಾಮ್ಸ್ ಅಧ್ಯಕ್ಷ ಎಸ್. ವಿಜಯಕುಮಾರ್, ಬಿ.ವಿ. ಗಣೇಶ್ ಮೊದಲಾದವರಿದ್ದರು.