ಶಿವಮೊಗ್ಗ : ದಲಿತರ ಭೂಮಿಯ ಹಕ್ಕಿಗಾಗಿ ಆಗ್ರಹಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಇಂದು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.

ಕಳೆದ ನಾಲ್ಕು ದಶಕಗಳಿಂದ ಭೂಮಿಯ ಹಕ್ಕಿಗಾಗಿ ದಲಿತರು ಹೋರಾಟ ಮಾಡುತ್ತಾ ಬಂದಿದ್ದಾರೆ. ದರಖಾಸ್ತು ಜಮೀನು ಮಂಜೂರು ಮಾಡುವ ಕಾಯ್ದೆ ಜಾರಿಯಲ್ಲಿದ್ದರೂ ಸಹ ಇದೂವರೆಗೂ ರಾಜ್ಯದ ಭೂಮಿಯಲ್ಲಿ ಕೇವಲ ಶೇ.೧೧ರಷ್ಟು ಮಾತ್ರ ದಲಿತರು ಭೂಮಿ ಹೊಂದಿದ್ದಾರೆ. ಇದರಲ್ಲಿ ನೀರಾವರಿ ಪ್ರದೇಶ ಇನ್ನೂ ಕಡಿಮೆಯಿದೆ. ಜಾತಿವಾದಿಗಳ, ಅಧಿಕಾರಿಗಳ, ಮಸಲತ್ತಿನಿಂದ ದಲಿತರಿಗೆ ಎಲ್ಲೂ ಜಮೀನು ಸಿಗುತ್ತಿಲ್ಲ. ಬಗರ್ಹುಕ್ಕುಂ ಜಮೀನು ಕೂಡ ದಲಿತರಿಗೆ ಮಂಜೂರು ಮಾಡುತ್ತಿಲ್ಲ.

ಈಗ ಸಾಗುವಳಿ ಮಾಡುತ್ತಿರುವ ಭೂಮಿಗೂ ಕೂಡ ಅರಣ್ಯ ಇದು ತನಗೆ ಸೇರಿದ್ದು ಎಂದು ರೈತರಿಗೆ ನೋಟೀಸ್ ಕೊಡುತ್ತಿದೆ ಎಂದು ದೂರಿದರು.
ಯಾವುದೇ ಕಾರಣಕ್ಕೂ ಖಾತೆಯನ್ನು ವಜಾಮಾಡಬಾರದು, ಸಾಗುವಳಿದಾರರಿಗೆ ತೊಂದರೆ ಕೊಡಬಾರದು. ಭದ್ರಾವತಿ ತಾಲ್ಲೂಕು

ಚಂದನಕೆರೆ ಸರ್ವೇ ನಂ.೧೨ರಲ್ಲಿ ಮಂಜೂರಾದ ಭೂಮಿಯನ್ನು ಎಂಪಿಎಂನವರು ಅತಿಕ್ರಮಿಸಿ, ದಲಿತರ ಮೇಲೆ ಸುಳ್ಳು ದೂರನ್ನು

ದಾಖಲಿಸಿದ್ದಾರೆ. ಸರ್ಕಾರ ಅದನ್ನು ಹಿಂಪಡೆದು ದಲಿತರಿಗೆ ಭೂಮಿಯನ್ನು ವಾಪಾಸ್ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಮೈಸೂರು ವಿಭಾಗೀಯ ಸಂಚಾಲಕ ಟಿ.ಹೆಚ್. ಹಾಲೇಶಪ್ಪ, ಜಿಲ್ಲಾ ಸಂಚಾಲಕ ಎಂ. ಮಂಜುನಾಥ, ಪ್ರಮುಖರಾದ ಪರಮೇಶ್ ಸೂಗೂರ್,ಶಿವಕುಮಾರ್ ಅಸ್ತಿ ಎಂ ಆರ್ ಶೇಷಪ್ಪ ಹುಣಸೋಡು, ರುದ್ರೇಶ್, ಮೀನಾ, ಗೋವಿಂದ, ಮೋಹನ, , ಪ್ರಸನ್ನ, ಕೃಷ್ಣಪ್ಪ, ರಂಗಸ್ವಾಮಿ ಸೇರಿದಂತೆ ಹಲವರಿದ್ದರು