ಶಿವಮೊಗ್ಗ : ತಹಶೀಲ್ದಾರ್ ರಾಜೀವ್ರವರು ರೈತರಿಗೆ ಹಾಗೂ ಜಮೀನಿನ ಮಾಲೀಕರಿಗೆ ಒಂದೊಳ್ಳೆ ಸುದ್ದಿ ನೀಡಿದ್ದಾರೆ
ಉಚಿತ ವಾಗಿ ಇ ಪೌತಿ ಮೂಲಕ ಪಹಣಿ ಮಾಡಿಸಿಕೊಳ್ಳಿ ಎಂದು ಮಾಹಿತಿ ನೀಡಿದ್ದಾರೆ

ಕೃಷಿ ಜಮೀನುಗಳ ಮಾಲೀಕರು ಮೃತರಾದಲ್ಲಿ ಅ ಜಮೀನಿಗೆ ಸಂಬಂಧಿಸಿದ ವಾರಸುದಾರರು ತಮ್ಮ ಹೆಸರಿಗೆ ಹಕ್ಕು ಬದಲಾವಣೆ ಮಾಡಿಕೊಳ್ಳಿ

ಈ ಪೌತಿ ಅಂದೋಲನದ ಮೂಲಕ ಶಿವಮೊಗ್ಗ ತಾಲ್ಲೂಕಿನ ಜಮೀನುಗಳನ್ನು ಉಚಿತ ವಾಗಿ ವಾರಸುದಾರರ ವಂಶಾವಳಿ ಪ್ರಕಾರ ಪಹಣಿ ಮಾಡಿಕೊಡಲಾಗುತ್ತದೆ.

ಈ ಕೂಡಲೇ ಜಮೀನುಗಳ ವಾರಸ್ಸುದಾರರು ಮೃತರ ಮರಣ ಪ್ರಮಾಣ ಪ್ರಮಾಣ ಪತ್ರ ಹಾಗೂ ವಂಶವೃಕ್ಷ ವಾರಸ್ಸುದಾರರ ಅಧಾರ್ ಕಾರ್ಡ್
ಇನ್ನಿತರೇ ದಾಖಲೆಗಳನ್ನು ತಮ್ಮ ತಮ್ಮ ಗ್ರಾಮದ ಗ್ರಾಮ ಅಡಳಿತಧಿಕಾರಿಗಳ ಹತ್ತಿರ ಸಲ್ಲಿಸಿ ಭೂ ಮಾಲೀಕರು ಭೂ ಮಾಲೀಕರು ಮೃತರಾಗಿರುವ ಜಮೀನುಗಳ ವಾರಸುದಾರರಿಗೆ ಖಾತೆಯನ್ನು ಉಚಿತವಾಗಿ ಇ ಪೌತಿ ಅಂದೋಲನ ದ ಮೂಲಕ ಪಹಣಿ ಮಾಡಿಸಿಕೊಳ್ಳಿ

ಶಿವಮೊಗ್ಗ ತಾಲ್ಲೂಕು ಸೇರಿದಂತೆ ಜಿಲ್ಲೆಯ ಎಲ್ಲಾ ಜಮೀನಿನ ಮಾಲೀಕರು ರೈತರು ಇ -ಪೌತಿ ಅಂದೋಲನದ ಮೂಲಕ ಒಂದೊಳ್ಳೆ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಿ ಎಂದು ಶಿವಮೊಗ್ಗ ತಹಶೀಲ್ದಾರ್ ರಾಜೀವ್ರವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ .