ಭದ್ರಾವತಿ,ಜು.18:
ಹುಣಸೇಕಟ್ಟೆ ದನಗಳ ಮುಪ್ಪತ್ತು ಜಾಗ ಕಬಳಿಸಲು ಹುನ್ನಾರ ಮಾಡಿರುವ ಕ್ರಮದ ವಿರುದ್ದ ಜಿಲ್ಲಾಧಿಕಾರಿಗಳನ್ನು ಬೇಟಿ ಮಾಡಿದ ಪರಿಸರ ಶಿವರಾಂ ಅವರ ಸಮಸ್ಸೆ ಆಲಿಸಿ, ಗ್ರಾಮದ ಸರ್ಕಾರಿ ಜಮೀನು ಉಳಿಸುವ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ
ಜಮೀನು ಕಬಳಿದ ಅಂತಹವರ ವಿರುದ್ದ ಕ್ರಿಮಿನಲ್ ಮೊಕ್ಕದ್ದಮೆ ಹಾಕುವಂತೆ ಭದ್ರಾವತಿ ತಹಶಿಲ್ದಾರರಿಗೆ ಸೂಚಿದ್ದಾರೆಂದು ಪರಿಸರ ಶಿವರಾಂ ತಿಳಿಸಿದ್ದಾರೆ.


ಭದ್ರಾವತಿ ತಾಲೂಕು ಹುಣಸೇಕಟ್ಟೆ ಗ್ರಾಮದ ಕಸಬಾ ಸರ್ವೇ ನಂಬರ್ ೪೨ರ ಎರಡು ಎಕರೆ ದನಗಳ ಮುಪ್ಪತ್ತಿನ ಜಮೀನನ್ನು ಭದ್ರಾವತಿ ಮೂಲದ ಸಹೋದರ ರಿಬ್ಬರು ಪಡೆಯಲು ರಾಜ್ಯ ಉಚ್ಚ ನ್ಯಾಯಾಲ ಯದ ಹಾಗೂ ಜಿಲ್ಲಾಧಿಕಾರಿಗಳ ಹೆಸರಲ್ಲಿ ನಕಲಿ ಆದೇಶ ಸಂಖ್ಯೆ ಹಾಕಿ ವಂಚಿಸಿರುವ ಘಟನೆ ನಡೆದಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಇತರ ಕಂದಾಯ ಅಧಿಕಾರಿಗ ಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಹೋರಾಟಗಾರ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರ ಶಿವರಾಂ ನಿರಂತರವಾಗಿ ಒತ್ತಾಯಿಸಿದ್ದರು.

ಕಳೆದ ಜನವರಿ ೨೦೨೪ ಹಾಗೂ 25 ರಂದು ಜಿಲ್ಲಾಧಿಕಾರಿಗಳ ಆದೇಶದನ್ವಯ ಅಂದಿನ ತಹಶೀಲ್ದಾರ್ ಈ ಅತಿಕ್ರಮಣ ಜಾಗವನ್ನು ತೆರವು ಗೊಳಿಸಿ ಕಂಬದಾಳು ಹೊಸೂರು ಪಂಚಾಯಿತಿ ವಹಿಸಿ, ಅತಿಕ್ರಮ ಪ್ರವೇಶ ಮಾಡಬಾರದೆಂದು ಬೋರ್ಡ್ ಹಾಕಿದ್ದರು. ಆದರೆ ದಿನ ಕಳೆದಂತೆ ದಿಡೀರನೆ ರೈತನಾಗಲು ಬಂದಿರುವ ಸಹೋದರರಿಬ್ಬರು ಈ ಜಾಗವನ್ನು ಕಬಳಿಸಲು ಹುನ್ನಾರ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಅದನ್ನು ಕೇಳಿದ ಜಿಲ್ಲಾಧಿಕಾರಿ ಗಳು ಕೂಡವೇ ಭದ್ರಾವತಿ ತಹಸಿಲ್ದಾರರಿಗೆ ಫೋನ್ ಮಾಡಿ ಕೂಡಲೇ ಸರ್ಕಾರಿ ಜಾಗವನ್ನು ತೆರ

ವುಗೊಳಿಸುವ ಜೊತೆಗೆ ಅವರ ವಿರುದ್ಧ ಕ್ರಿಮಿನಲ್ ಮುಖದ್ದಮೆ ದಾಖಲಿಸಲು ಸೂಚಿಸಿದ್ದಾರೆ ಎಂದು ಪರಿಸರ ಶಿವರಾಂ ಪತ್ರಿಕೆಗೆ ತಿಳಿಸಿದ್ದಾರೆ. ಆದರೆ ಭದ್ರಾವತಿ ತಹಶೀಲ್ದಾರರ ಮುಂದಿನ ಕ್ರಮ ಅರ್ಥವಾಗಿಲ್ಲ ಎಂದು ಸಹ ಹೇಳಿದ್ದಾರೆ.

ಈಗಾಗಲೇ ಗ್ರಾಮಸ್ಥರು ತಹಶೀಲ್ದಾರ್, ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಕನಿಷ್ಠ ಒಬ್ಬರೂ ಪರಿಶೀಲನೆಗೆ ಬರದಿರುವುದು ದುರಂತವೇ ಹೌದು. ಈಗ ಜಿಲ್ಲಾಧಿಕಾರಿಗಳೇ ನೀಡಿದ ಸೂಚನೆ ಪಾಲನೆಯಾಗುತ್ತೋ ಇಲ್ಲವೋ ಕಾದು ನೋಡಬೇಕಿದೆ.