ಶಿವಮೊಗ್ಗ ಮತ್ತು ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳ ಲಕ್ಷಾಂತರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ರೈತರ ಜೀವನಾಡಿ ತನ್ನ ಜೀವಕಳೆ ಮರಳಿ ಪಡೆದುಕೊಂಡು ಮೈದುಂಬಿ ಹರಿಯುತ್ತಿರುವ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಾಜನೂರು ತುಂಗಾ ಜಲಾಶಯಕ್ಕೆ

ಇಂದು ಭೇಟಿ ಕೊಟ್ಟು ಹಿರಿಯ ಶಾಸಕ ಅರಗ ಜ್ಞಾನೇಂದ್ರ ಅವರೊಂದಿಗೆ ಜೊತೆಗೂಡಿ ಸಂಸದ ಬಿವೈ ರಾಘವೇಂದ್ರ ಬಾಗಿನ ಸಮರ್ಪಿಸಿದರು.


ಈ ವರ್ಷವೂ ಮಳೆರಾಯನ ಕೃಪೆಯಿಂದ ಜಲಾನಯನ ಪ್ರದೇಶದಲ್ಲಿ ನಿರೀಕ್ಷೆಗೂ ಮೀರಿ ಉತ್ತಮ ವರ್ಷಧಾರೆ ಧುಮ್ಮಿಕ್ಕಿದ ಪರಿಣಾಮ ಜಲಾಶಯ ತನ್ನ ನೈಜ ಸೊಬಗನ್ನು ಮರಳಿ ಪಡೆದುಕೊಂಡು ಉಳುವ ಯೋಗಿಯ ಮೊಗದಲ್ಲಿ ಭಯದ ಕಾರ್ಮೋಡ ದೂರವಾಗಿ ಭರವಸೆಯ ಮಂದಹಾಸ ಮೂಡಿಸಿದ್ದು, ಈ ಸಾಲಿನಲ್ಲಿ ಭತ್ತ, ಅಡಿಕೆ ಸೇರಿದಂತೆ ಇನ್ನಿತರ ಬೆಳೆಗಳು ಉತ್ತಮ ಇಳುವರಿ ದೊರೆಯುವ ನಿರೀಕ್ಷೆ ಮೂಡಿದೆ.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಬಿಜೆಪಿ ಶಿವಮೊಗ್ಗ ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಶಾಸಕರುಗಳಾದ ಚನ್ನಬಸಪ್ಪ, ಡಿಎಸ್ ಅರುಣ್ ಸೇರಿದಂತೆ ಅನೇಕ ಮುಖಂಡರು, ಹಿರಿಯರು, ಕಾರ್ಯಕರ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.



