ಶಿವಮೊಗ್ಗ : ಹಾಸನದಲ್ಲಿ ೨೦ ರಿಂದ ೩೦ ಜನರು ಹೃದಯ ಘಾತದಿಂದ ಪ್ರಾಣ ಕಳೆದು ಕೊಂಡಿದ್ದಾರೆ ವಿರೋಧ ಪಕ್ಷದ ನಾಯಕರು ಕೂಡ ಹಾಸನಕ್ಕೆ ಹೋಗಿ ಸ್ಥಿತಿಯನ್ನು ನೋಡಲಿ ದ್ದಾರೆ ಆದರೆ, ಉಸ್ತುವಾರಿ ಸಚಿವರು ೨-೩ ತಿಂಗಳಾದರೂ ಹಾಸನಕ್ಕೆ ಹೋಗಿಲ್ಲ. ಇಷ್ಟೊಂದು ಸಾವು ನೋವುಗಳು ಆಗುತ್ತಿ ದ್ದರೂ ಯಾಕೆ ಹಾಸನಕ್ಕೆ ಹೋಗುತ್ತಿಲ್ಲ ಇದರ ಅರ್ಥ ವೇನು..? ಒಂದು ರೀತಿಯಲ್ಲಿ ಸರ್ಕಾರದ ಮೇಲೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ಜನತೆಯ ಪಾಲಿಗೆ ಸರ್ಕಾರ ಬದುಕಿದ್ದರೂ ಸತ್ತಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದಿಗಾರ ರೊಂದಿಗೆ ಮಾತನಾಡಿದ ಅವರು, ರಾಗಿಗುಡ್ಡದ ಬಂಗಾರಪ್ಪ ಬಡಾವಣೆ ಗಣಪತಿ ವಿಗ್ರಹಕ್ಕೆ ಅಪಮಾನಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ಗೃಹ ಸಚಿವರು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಮಂಗಳೂರಿನ ಪ್ರಕರಣ ವನ್ನು ಕೂಡ ನಾವು ಗಮನಿಸಿ ದ್ದೇವೆ. ರಾಜ್ಯದಲ್ಲಿ ರಾಷ್ಟ್ರಧ್ರೋಹಿ ಕೃತ್ಯ ನಡೆಯುತ್ತಿದೆ. ಕರ್ನಾಟಕ ಎಂದರೆ ದುಷ್ಕರ್ಮಿಗಳಿಗೆ ಸ್ವರ್ಗ ಆಗಿದೆ. ತಾವು ಏನೇ ಮಾಡಿದರು ಕಾಂಗ್ರೆಸ್ ಪಕ್ಷ ನಮ್ಮನ್ನು ಬಚಾವ್ ಮಾಡುತ್ತದೆ ಎಂದುಕೊಂಡಿ ದ್ದಾರೆ. ಯಾರೂ ಹೇಳೋರು ಕೇಳೋರು ಇಲ್ಲ ಎಂಬ ಮನ ಸ್ಥಿತಿಗೆ ಬಂದಿದ್ದಾರೆ.

ದುಷ್ಟ ಶಕ್ತಿಗಳಿಗೆ ರಾಜ್ಯ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಈ ಹಿಂದೆ ರಾಜ್ಯ ಸರ್ಕಾರ ಇಂತಹ ಅಯೋಗ್ಯರಿಗೆ ಬುದ್ದಿ ಕಲಿಸುವ ಕೆಲಸ ಮಾಡಬೇಕಿತ್ತು. ರಾಜ್ಯ ಸರ್ಕಾರದ ಸಚಿವರು, ಶಾಸಕರೇ ಹುಚ್ಚುಚ್ಚು ಹೇಳಿಕೆ ಕೊಟ್ಟಾಗ ಏನು ಬೇಕಾದರೂ ಮಾಡುತ್ತಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ವಿಚಾರ. ಗುಜರಾತ್, ಉತ್ತರ ಪ್ರದೇಶ, ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯದ ಅಧ್ಯಕ್ಷರ ಆಯ್ಕೆ ಇನ್ನೂ ಹಾಗೆಯೇ ಬಾಕಿ ಉಳಿ ದಿದೆ. ಸುಮಾರು ೨೫ ರಿಂದ ೨೮ ರಾಜ್ಯಗಳ ಅಧ್ಯಕ್ಷರ ಘೋಷಣೆ ಆಗಿದೆ. ಅದರ ಪ್ರಕ ಟಣೆಯ ದಿನಾಂಕ ಹೇಳಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ರಾಷ್ಟ್ರೀಯ ಅಧ್ಯಕ್ಷರು ತೀರ್ಮಾನ ಕೈಗೊಳ್ಳಲಿದ್ದಾರೆ. ಪಾರ್ಲಿಮೆಂಟ್ ಅಧಿವೇಶನಕ್ಕೂ ಮುನ್ನವೇ ಎಲ್ಲದಕ್ಕೂ ಉತ್ತರ ಸಿಗಲಿದೆ. ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಕೂಡ ಆಗಲಿದೆ ಎಂಬ ಸೂಚನೆ ಇದೆ ಎಂದರು.
ಅನ್ನಭಾಗ್ಯ ಅಕ್ಕಿ-ಲಾರಿಗಳ ಮುಷ್ಕರ ವಿಚಾರಕ್ಕೆ ಸಂಬಂಧಿಸಿ ದಂತೆ ಅನ್ನಭಾಗ್ಯ ಅಕ್ಕಿಗೆ ಸರ್ಕಾ ರವೇ ಕನ್ನ ಹಾಕುತ್ತಿದೆ. ವಿಧಾನ ಸಭಾ ಚುನಾವಣೆ ವೇಳೆ ೧೦ ಕೆ.ಜಿ. ಅಕ್ಕಿ ನೀಡುತ್ತೇವೆ ಎಂದು ಹೇಳಿದ್ದರು. ಚುನಾವಣೆ ಮುಗಿದ ಮೇಲೆ ಕೇಂದ್ರ ಸರ್ಕಾರ ನೀಡು ತ್ತಿದ್ದ ೫ ಕೆ.ಜಿ. ಅಕ್ಕಿಗೆ ಸೇರಿಸಿ ೧೦ ಕೆ.ಜಿ. ಕೊಡುತ್ತಿದ್ದೇವೆ ಎಂದು ಬಿಂಬಿ ಸಿದ್ದರು. ಈಗ ಅಕ್ಕಿಯನ್ನು ಕೊಡು ವುದಿಲ್ಲ. ಇಂದಿರಾ ಕಿಟ್ನಲ್ಲಿ ಕೊಡುತ್ತೇವೆಂದು ಹೇಳುತ್ತಿದ್ದಾರೆ.

೭೦೦ ಕೋಟಿ ಹಣ ಉಳಿ ತಾಯ ಆಗುತ್ತದೆ ಎಂದು ಹೇಳು ತ್ತಿದ್ದಾರೆ. ದುಡ್ಡನ್ನು ಉಳಿಸಲು ಇಂದಿರಾ ಕಿಟ್ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ಸಿಎಂ ಆಗಿ ಮುಂದುವರೆಯುತ್ತಾರೆ. ಅವರು ರಾಜೀನಾಮೆ ಕೊಟ್ಟು ಇನ್ಯಾರೋ ಬಂದು ಕುಳಿತು ಕೊಳ್ಳುತ್ತಾರಾ ಎಂಬುದರ ಬಗ್ಗೆ ನಮಗೆ ಆಸಕ್ತಿ ಇಲ್ಲ. ಈ ವಿಚಾ ರದ ಬಗ್ಗೆ ರಾಜ್ಯದ ಜನರಿಗೂ ಕೂಡ ಆಸಕ್ತಿ ಇಲ್ಲ. ಸಿದ್ದ ರಾಮಯ್ಯ ಮುಂದುವರೆದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ಉದ್ಧಾರ ಆಗುವುದಕ್ಕೆ ಸಾಧ್ಯವಿಲ್ಲ. ಅಭಿವೃದ್ಧಿ ಆಗೋದಕ್ಕೂ ಸಾಧ್ಯವಿಲ್ಲ. ಕಾಂಗ್ರೆಸ್ನಲ್ಲಿ ಯಾರೇ ಬಂದರೂ ರಾಜ್ಯದ ಜನರಿಗೆ ಉಪವಾಸ ಎಂದು ತಪ್ಪಿದ್ದಲ್ಲ. ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದು ಹೋಗಿದೆ. ಮುಖ್ಯಮಂತ್ರಿಗಳ ಬಗ್ಗೆ ಆಡಳಿತ ಪಕ್ಷದ ಶಾಸಕರೇ ವಿಶ್ವಾಸ ಕಳೆದುಕೊಂಡಿದ್ದಾರೆ. ಇದರ ಪರಿಣಾಮ ಸುರ್ಜೆವಾಲಾ ರಾಜ್ಯಕ್ಕೆ ಪದೇಪದೇ ಬಂದು ಹೋಗುತ್ತಿದ್ದಾರೆ. ಶಾಸಕರನ್ನು ಸಮಾಧಾನ ಪಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಈ ಬಗ್ಗೆ ಸ್ವತಃ ಕಾಂಗ್ರೆಸ್ ಶಾಸಕರೇ ಬಹಿರಂಗವಾಗಿ ಮಾತ ನಾಡುತ್ತಿದ್ದಾರೆ. ಹಿರಿಯ ಶಾಸಕ ಬಿ.ಆರ್. ಪಾಟೀಲ್ ಅವರೇ ಸಿಎಂ ಅವರನ್ನು ಲಾಟರಿ ಮುಖ್ಯ ಮಂತ್ರಿಗಳು ಎಂದು ಹೇಳುತ್ತಿ ದ್ದಾರೆ. ಸಿದ್ದರಾಮಯ್ಯ ಅವರನ್ನು ಅನುಭವಿ ಸಿಎಂ ಎಂದು ಅಂದುಕೊಂಡಿದ್ದೆವು. ಆದರೆ, ಅವರು ಆಡಳಿತದಲ್ಲಿ ಹಿಡಿತ ಕಳೆದುಕೊಳ್ಳುತ್ತಿದ್ದಾರೆ.
ಇದರ ನಡುವೆ ಜನರು ಈ ಸರ್ಕಾರಕ್ಕೆ ಶಾಪವನ್ನು ಹಾಕು ತ್ತಿದ್ದಾರೆ. ಇಂತಹ ಅಯೋಗ್ಯ ಸರ್ಕಾರವನ್ನ ತಂದಿದ್ದೇವೆ ಎಂದು ಪಶ್ಚಾತಾಪ ಪಡುತ್ತಿ ದ್ದಾರೆ. ಸಿಎಂ ಆರ್ಥಿಕ ಸಲಹೆ ಗಾರರ ಮಾತನ್ನ ನಾವು ಗಂಭೀರವಾಗಿ ತೆಗೆದುಕೊಳ್ಳ ಬೇಕು. ಒಂದು ಗಂಗಾ ಕಲ್ಯಾಣ ಯೋಜನೆಯನ್ನ ಕೂಡ ಈ ಸರ್ಕಾರಕ್ಕೆ ಕೊಡಲು ಆಗುತ್ತಿಲ್ಲ. ಇಂತಹ ದುಸ್ಥಿತಿ ಸರ್ಕಾರಕ್ಕೆ ಬಂದಿದೆ ಎಂದರು.
ನಿಮ್ಮ ಕ್ಷೇತ್ರಗಳಿಗೆ ಅಭಿವೃದ್ಧಿ ಬೇಕಾದರೆ ನಾವು ಗ್ಯಾರಂಟಿ ನಿಲ್ಲಿಸುತ್ತೇವೆ ಎಂಬುದು ಒಂದು ಬೆದರಿಕೆ ಹಾಕುತ್ತಿದ್ದಾರೆ. ಸಿಎಂ ಆರ್ಥಿಕ ಸಲಹೆಗಾರರು ಮುಖ್ಯ ಮಂತ್ರಿಗಳ ಸೂಚನೆ ಇಲ್ಲದೆ ಏನು ಮಾತನಾಡಲು ಸಾಧ್ಯ ವಿಲ್ಲ. ಈ ದಾಟಿಯಲ್ಲಿ ಬೆದರಿಕೆ ಹಾಕುತ್ತಿರುವುದನ್ನು ನೋಡಿದರೆ ಸಿಎಂ ಅಸಹಾಯಕರಾಗಿದ್ದಾರೆ. ಗ್ಯಾರಂಟಿ ಯೋಜನೆಗೆ ಹಣ ಒಟ್ಟು ಮಾಡಲು ಆಗುತ್ತಿಲ್ಲ. ಜನ ಸಾಮಾನ್ಯರ ಮೇಲೆ ಟ್ಯಾಕ್ಸ್ ಹೆಚ್ಚಿಸಿ ಬರೆ ಎಳೆಯುತ್ತಿದ್ದಾರೆ. ಹಣ ಕ್ರೂಢೀಕರಣಕ್ಕೆ ಯಾವ ಮಟ್ಟಕ್ಕೂ ಇಳಿಯೋದಕ್ಕೆ ಹೇಸು ವುದಿಲ್ಲ ಈ ಸರ್ಕಾರ. ಗ್ರಾ.ಪಂ ಮಟ್ಟದಲ್ಲೂ ಇದೀಗ ಆಸ್ತಿ ತೆರಿಗೆ ಹಾಕಲು ಮುಂದಾಗುತ್ತಿದೆ ಎಂದರು.