ಶಿವಮೊಗ್ಗ, ಜು.05:
ಹೊಸಮನೆ ಜೈಲ್ ರಸ್ತೆ ಚಾನೆಲ್ ಎಡಬಾಗದ ಆವರಣದಲ್ಲಿರುವ ಶ್ರೀ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಕಳೆದ ಜೂನ್ 25ರಿಂದ ಇಂದಿನವರೆಗೆ ನಿತ್ಯ ವಿಶೇಷ ಪೂಜೆ ಅರ್ಚನೆ ಅನ್ನದಾಸೋಹ ನಡೆಯುತ್ತಿದ್ದು, ಜುಲೈ 6ರ ನಾಳೆ ಬೆಳಿಗ್ಗೆ 10:00 ಗಂಟೆಗೆ ಸಾಮೂಹಿಕ ನಾಗ ಪ್ರತಿಷ್ಠಾಪನೆ ಹಾಗೂ ಸಂಜೆ 5:00 ಗಂಟೆಗೆ ಸಾಮೂಹಿಕ ಆಶ್ಲೇಷ ಬಲಿ ಸೇವೆ ಮತ್ತು 7:00ಗೆ ನಾಗದರ್ಶನ ನಡೆಯಲಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ.

ನಾಗಪಾತ್ರಿಗಳಾದ ಕಾರ್ಕಳದ ರಾಮಚಂದ್ರ ಕುಂಚಿತಾಯ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಶ್ರೀ ನಾಗಾರಾಧನೆಯ ನೇತೃತ್ವವನ್ನು ಕೆಎ ಸುಬ್ಬರಾವ್ ಭಟ್ ಮತ್ತು ಕೆ ಎಸ್ ಸುಮುಖ್ ಬಟ್ ವಹಿಸಿದ್ದಾರೆ.

ಕಾರ್ಯಕ್ರಮದಲ್ಲಿ ಸಂಸದ ಬಿ ವೈ ರಾಘವೇಂದ್ರ, ಶಾಸಕರಾದ ಶಾರದಾ ಪುರ್ಯಾನಾಯ್ಕ್ , ಚನ್ನಬಸಪ್ಪ ಧನಂಜಯ ಸರ್ಜಿ, ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಮಾಜಿ ಶಾಸಕ ಕೆಬಿ ಪ್ರಸನ್ನ ಕುಮಾರ್ ಸೇರಿದಂತೆ ವಿವಿಧ ಗಣ್ಯರು ಈಗಾಗಲೇ ಭಾಗವಹಿಸಿದ್ದು ನಾಳೆಯೂ ಸಹ ಆಗಮಿಸಿದ್ದಾರೆ.

ಪ್ರತಿದಿನ ಸಂಜೆ 5:30ಕ್ಕೆ ಆಶ್ಲೇಷ ಬಲಿ ನಡೆಯುತ್ತಿದ್ದು, ನಿತ್ಯ ನಾಗನಿಗೆ ಹೂವಿನ ಸೇವೆ ನಡೆದಿದ್ದು, ವಿವಿಧ ದಾನಿಗಳು ಈ ಕಾರ್ಯಕ್ರಮಕ್ಕೆ ಸಹಕರಿಸಿದ್ದಾರೆ.
ಮಲೆ ಮಹದೇಶ್ವರ ಸೇವಾ ಸಮಿತಿ ಅಧ್ಯಕ್ಷ ಜಯರಾಮ ಅವರು ವಿವಿಧ ಗಣ್ಯರ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ನಾಳಿನ ಕಾರ್ಯಕ್ರಮ ಅತ್ಯಂತ ವಿಶೇಷವಾಗಿದೆ.
ಭಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ನಾಗದರ್ಶನ ಪಡೆದು ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಲು ಕೋರಲಾಗಿದೆ