ಶಿವಮೊಗ್ಗ,ಜುಲೈ.03: : ನಗರದ ಉಪ ವಿಭಾಗ-2 ಘಟಕ-06ರ ವ್ಯಾಪ್ತಿಯಲ್ಲಿ ತುರ್ತು ನಿರ್ವಾಹಣೆಯ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜು.5 ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಗೋಪಿಶೆಟ್ಟಿಕೊಪ್ಪ, ಸಿದ್ದೇಶ್ವರ ಸರ್ಕಲ್, ಭವಾನಿ ಲೇಔಟ್, ಆಶಯ ಬಡಾವಣೆ,

ಚಾಲುಕ್ಯನಗರ, ಕೆಹೆಚ್ಬಿ ಕಾಲೋನಿ, ಹಳೆ ಊರು ಗೋಪಿಶೆಟ್ಟಿಕೊಪ್ಪ, ಗದ್ದೆಮನೆ ಲೇಔಟ್, ಮಂಜಪ್ಪ ಬಸಪ್ಪ ಲೇಔಟ್, ಜಿಎಸ್ ಕ್ಯಾಸ್ಟಿಂಗ್

, ಸೋಮಣ್ಣ ಫ್ಯಾಕ್ಟರಿ, ಸಲೀಮ್ ಪ್ಯಾಕ್ಟರಿ, ಕಾಮತ್ ಲೇಔಟ್, ಮೇಲಿನ ತುಂಗಾನಗರ ಹಾಗೂ ಸುತ್ತಮುತ್ತಲಿನ ಐಪಿ ಲಿಮಿಟ್

ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.