ಶಿವಮೊಗ್ಗ : ಶ್ರೀಗಂಧ ಸಾಂಸ್ಕøತಿಕ ಸಂಸ್ಥೆ ಹಾಗೂ ಮಂಥನ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಭಾರತದ ತುರ್ತು ಪರಿಸ್ಥಿತಿಯ ಕರಾಳ ಅಧ್ಯಾಯದ ಸಂಘರ್ಷಮಯ ಹೋರಾಟದ 50 ವರ್ಷಗಳ ಸವಿನೆನಪಿಗಾಗಿ ಶಿವಮೊಗ್ಗ ನಗರದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ನಗರಮಟ್ಟದ ದೇಶಭಕ್ತಿ ಗೀತೆಯ ಸಮೂಹ ಗಾಯನ ಸ್ಪರ್ಧೆ ಆಯೋಜಿಸಲಾಗಿದೆ.
ಸಮೂಹ ಗಾಯನ ಸ್ಪರ್ಧೆ ಜು.19ರಂದು ಪೇಸ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ ಎಂದು ಶ್ರೀಗಂಧ ಸಾಂಸ್ಕøತಿಕ ಸಂಸ್ಥೆಯ ಖಜಾಂಚಿ ಕೆ.ಈ. ಕಾಂತೇಶ್ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜುಲೈ 25ರಂದು ನಡೆಯಲಿರುವ ವಿಶೇಷ ಸಮಾರಂಭದಲ್ಲಿ ವಿಜೇತ ತಂಡಕ್ಕೆ ನಗದು ಬಹುಮಾನ ವನ್ನು ಪ್ರಥಮ ತಂಡಕ್ಕೆ 15,000, ದ್ವಿತೀಯ ತಂಡಕ್ಕೆ 10,000 ಹಾಗೂ ತೃತೀಯ ತಂಡಕ್ಕೆ 5000 ರೂ.ಗಳನ್ನು ನೀಡಲಾಗುವುದು. ಶಿವಮೊಗ್ಗ ನಗರದ 36 ಪದವಿಪೂರ್ವ ಕಾಲೇಜುಗಳಿದ್ದು, ಆ ಕಾಲೇಜಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ ಎಂದರು.

ಈ ವಿಶೇಷ ಸಮಾರಂಭದಲ್ಲಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ಮೀಸಾ ಕಾಯ್ದೆಯಡಿ ಸೆರೆಮನೆಯ ಶಿಕ್ಷೆಯನ್ನು ಅನುಭವಿಸಿದ ಶಿವಮೊಗ್ಗ ನಗರದ ಹಿರಿಯರನ್ನು ಸಾರ್ವಜನಿಕರವಾಗಿ ಸನ್ಮಾನಿಸಲಾಗುವುದು ಎಂದರು.
ಶ್ರೀಗಂಧ ಸಂಸ್ಥೆಯ ವಿನಯ್ ಶಿವಮೊಗ್ಗ ಮಾತನಾಡಿ, ಈ ಸ್ಪರ್ಧೆಯಲ್ಲಿ ಒಂದು ತಂಡದಲ್ಲಿ ಕನಿಷ್ಠ 6 ಹಾಗೂ ಗರಿಷ್ಠ 10 ವಿದ್ಯಾರ್ಥಿಗಳಿರಬೇಕು. ಒಂದು ಕಾಲೇಜಿನಿಂದ ಎರಡು ತಂಡಗಳು ಭಾಗವಹಿಸಬಹುದಾಗಿದೆ. ಸಿನಿಮಾ ಗೀತೆಗಳನ್ನು ಹಾಡುವಂತಿಲ್ಲ ಹಾಗೂ ಕರೋಕೆ ಬಳಸುವಂತಿಲ್ಲ. ದೇಶಭಕ್ತಿಗೀತೆಗಳನ್ನು ಮಾತ್ರ ಹಾಡಬೇಕು. ತೀರ್ಪುಗಾರರ ನಿರ್ಣಯವೇ ಅಂತಿಮವಾಗಿದ್ದು, ಹೆಸರು ನೊಂದಾಯಿಸಲು ಜುಲೈ 14ರಂದು ಕೊನೆಯ ದಿನವಾಗಿದೆ ಎಂದರು.

ಸಮೂಹಗಾಯನದಲ್ಲಿ ಭಾಗವಹಿಸುವ ಕಾಲೇಜು ವಿದ್ಯಾರ್ಥಿಗಳು ಉಮೇಶ್ ಆರಾಧ್ಯ-9886177311, ಹರೀಶ್ ಕಾರ್ಣೀಕ್-94448106690 ಅಥವಾ ವಿನಯ್ ಶಿವಮೊಗ್ಗ-8310876277 ಇವರನ್ನು ಸಂಪರ್ಕಿಸಿ ಹೆಸರು ನೊಂದಾಯಿಸಬಹುದಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಡಾ. ತೇಜಸ್, ಶ್ರೀಕಾಂತ್, ವಾಸುದೇವ, ಜಾದವ್, ಬಾಲು ಉಪಸ್ಥಿತರಿದ್ದರು.