ಹೊಸನಗರ ; ವಿಕೃತ ಮನಸ್ಥಿತಿಯ ಪಾಪಿಗಳು ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ತೋಟದಕೊಪ್ಪ ಗ್ರಾಮದ ವಿಜಾಪುರ ಎಂಬಲ್ಲಿ ನಡೆದಿದೆ.

ಹಸುವಿನ ಮಾಲೀಕ ನವೀನ್ ಎಂಬುವರು ಹೊಸನಗರ ಠಾಣೆಯಲ್ಲಿ ದೂರು ನೀಡಿದ್ದು, ’ಎಂದಿನಂತೆ ನಮ್ಮ ದನಗಳನ್ನು ಮೇಯಲು ಬಿಟ್ಟಿದ್ದು ಶನಿವಾರ ಸಂಜೆ ೪:೩೦ರ ಸುಮಾರಿಗೆ ದನದ ಕೆಚ್ಚಲಿನಲ್ಲಿ ರಕ್ತ ಸೋರುತ್ತಿರುವುದಾಗಿ ಊರಿನವರು ತಿಳಿಸಿದ್ದು ತಕ್ಷಣ ಸ್ಥಳಕ್ಕೆ ಧಾವಿಸಿ

ನೋಡಿದಾಗ ೯ ವ? ಪ್ರಾಯದ ಕರು ಹಾಕಿದ ಮಲೆನಾಡು ಗಿಡ್ಡ ತಳಿಯ ನಮ್ಮ ದನದ ಕೆಚ್ಚಲಿನಿಂದ ರಕ್ತ ಸೋರುತ್ತಿರುವುದು ಕಂಡು ಬಂದಿದೆ. ಯಾರೋ ದನದ ಕೆಚ್ಚಲು ಕೊಯ್ದಿರುವ ಬಗ್ಗೆ ಅನುಮಾನ ಬಂದಿದೆ. ನಂತರ ಗ್ರಾಮಸ್ಥರ ಸಹಾಯದಿಂದ ಹಾಗೂ ಹೊಸನಗರದ ಪೋಲಿಸ್ ಸಬ್ ಇನ್ಸ್ಪೇಕ್ಟರ್ ಶಂಕರ ಗೌಡ ಪಾಟೀಲ್ ಪೋಲೀಸ್ ಸಿಬ್ಬಂದಿ ಗೋಪಾಲಕೃಷ್ಣ, ಸುನೀಲ್ ದನವನ್ನು ಮನೆಗೆ ಕರೆತಂದು ಪಶು ವೈದ್ಯ ಸಂತೋಷ್ರವರ ಮೂಲಕ ಹೊಲಿಗೆ ಹಾಕಿಸಿ ಚಿಕಿತ್ಸೆ ಕೊಡಿಸಲಾಗಿದೆ.

ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಸುವಿನ ಮಾಲೀಕ ನವೀನ್ ದೂರಿನಲ್ಲಿ ತಿಳಿಸಲಾಗಿದ್ದು ಹೊಸನಗರ ಪೋಲೀಸ್ ಇಲಾಖೆ ತಪ್ಪಿತಸ್ಥರಿಗಾಗಿ ಭಲೆ ಬೀಸಿದ್ದಾರೆ.