ಶಿವಮೊಗ್ಗ : ಇಲ್ಲಿನ ನವುಲೆ ಕೆರೆ ಒತ್ತುವರಿ ಯಾಗುತ್ತಿದೆ. ಈಗಾಗಲೇ ಮುಕ್ಕಾಲು ಭಾಗ ನಾಶವಾಗಿ,ಇನ್ನೇನು ಅಲ್ಪ ಪ್ರಮಾಣದಲ್ಲಿ ಉಳಿದಿರುವ ಕೆರೆಗೂ ಕೆಲವರು ನಗರದ ಕಸದ ಜತೆಗೆ ಅನುಪಯುಕ್ತ ಮಣ್ಣನ್ನು ತಂದು ಸುರಿಯುವ ಮೂಲಕಆಳಿದುಳಿದ ಕೆರೆಯನ್ನು ಶಾಶ್ವತವಾಗಿ ಮುಚ್ಚುವ ಹುನ್ನಾರ ನಡೆಸಿದ್ದಾರೆಂದು ಸ್ಥಳೀಯರು ದೂರಿದ್ದಾರೆ.

ಒಂದು ಕಾಲದಲ್ಲಿ ಶಿವಮೊಗ್ಗ ನಗರದ ಮುಕುಟ ಪ್ರಾಯದಂತಿದ್ದ ನವುಲೆ ಕೆರೆ ಈಗ ಬಹುತೇಕ ನಾಶದಂಚಿನಲ್ಲಿದೆ. ಒಂದು ಕಾಲಕ್ಕೆ೩೧ ಎಕರೆ ೪ ಗುಂಟೆ ವಿಸ್ತರಣಾ ಹೊಂದಿದ್ದ ಈ ಕೆರೆಯೂ ಈಗ ಕೇವಲ ೭ ಎಕೆರೆ ಜಾಗದಲ್ಲಿ ಮಾತ್ರ ಉಳಿದು ಕೊಂಡಿದೆ.೩೧ ಎಕರೆ ಜಾಗದಲ್ಲಿ ೨೦ ಎಕೆರೆ

ಜಾಗ ಕ್ರೀಕೆಟ್ ಅಸೋಸಿಯೇಷನ್ ಗೆ ಹೋಗಿದೆ. ಇನ್ನು ೫ ಎಕೆರೆ ಜಾಗದಲ್ಲಿ ಬೋಟ್ ವಿಹಾರಕ್ಕೆಂದು ತೆಗೆದಿಡಲಾಗಿದೆ. ಉಳಿಂದತೆ ೭ ಎಕೆರೆ ಜಾಗದಲ್ಲಿ ಮಾತ್ರ ಕರೆ ಉಳಿದಿದ್ದು, ಅದನ್ನು ಈಗ ಕೆಲವರು ಒತ್ತುವರಿ ಮಾಡಿಕೊಳ್ಳುವ ಹುನ್ನಾರ ನಡೆಸಿದ್ದಾರೆಂದು ದಲಿತ ಸಂಘರ್ಷ ಸಮಿತಿ ಮುಖಂಡ ಮಂಜುನಾಥ್ ದೂರಿದ್ದಾರೆ.

ನವುಲೆ ಗ್ರಾಮಕ್ಕೆ ಹೊಂದಿಕೊಂಡಂತಿರುವ ಕೆರೆಯ ಒಂದು ಕಡೆಯ ಭಾಗದಲ್ಲಿ ಈಗಾಗಲೇಕೆಲವರು ಒತ್ತುವರಿ ಮಾಡಿಕೊಂಡುಮನೆ ಮಠ ಕಟ್ಟಿಕೊಂಡಿದ್ದಾರೆ. ಈ ಕೆಲವರು ವಾಣಿಜ್ಯ ಮಳಿಗೆಗಳನ್ನ ನಿರ್ಮಿಸಿಕೊಂಡಿದ್ದಾರೆ. ಇದೇ ಕೆಲವರಿಗೆ ಪ್ರೇರಣೆಯಾಗಿ ಪಕ್ಕದ ಕೆರೆಯ ಜಾಗಕ್ಕೆ ಕಸ, ನಗರದ ಮನೆಮಠಗಳ ಅನುಪಯುಕ್ತ ಮಣ್ಣನ್ನು ಲಾರಿಮತ್ತು ಟ್ರ್ಯಾಕ್ಟರ್ ಗಳಲ್ಲಿ ತಂದು ಸುರಿಯುವ ಮೂಲಕ ಒತ್ತುವರಿ ಮಾಡಿಕೊಳ್ಳುವ ಹುನ್ನಾರ ನಡೆಸಿದ್ದಾರೆಂದು ಅವರು ದೂರಿದ್ದಾರೆ.

ರಿಯಲ್ ಎಸ್ಟೇಟ್ ಮಾಪಿಯಾ ಮತ್ತು ಭೂ ಒತ್ತುವರಿ ಕಾರಣಕ್ಕೆ ನಗರದಲ್ಲಿನ ಸಣ್ಣಪುಟ್ಟ ಯಾವುದೇ ಕೆರೆ ಕಟ್ಡೆಗಳುಉಳಿದಿಲ್ಲ. ಅದರ ಪ್ರಭಾವದಲ್ಲಿಯೇ ನವುಲೆ ಕೆರೆ ಕೂಡ ನಾಶವಾಗುತ್ತಾ ಬಂದಿದೆ. ಈಗ ಅಳಿದುಳಿದ ಕೆರೆಗೂ ಒತ್ತುವರಿದಾರರು ಕಣ್ಣು ಹಾಕಿ, ಕೆರೆನುಂಗುವ ಹುನ್ನಾರ ನಡೆಸಿದ್ದಾರೆ. ಈಹಿನ್ನೆಲೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ತಕ್ಷಣ ಗಮನಹರಿಸಿ ಈಕೆರೆಉಳಿಸಬೇಕೆಂದುಸ್ಥಳೀಯರುಒತ್ತಾಯಿಸಿದ್ದಾರೆ