ಶಿವಮೊಗ್ಗ, ಜೂ.೧೭:
ಪ್ರಸಕ್ತ ಸಾಲಿನ ನೀಟ್ ಪರೀಕ್ಷೆಯಲ್ಲಿ ಶಿವಮೊಗ್ಗದ ದೇಶ್ ನೀಟ್ ಅಕಾಡೆಮಿ ವತಿ ಯಿಂದ ಪರೀಕ್ಷೆಗೆ ಹಾಜರಾಗಿದ್ದ ೧೩೦ ವಿದ್ಯಾ ರ್ಥಿಗಳಲ್ಲಿ ೪೫ ವಿದ್ಯಾರ್ಥಿಗಳು ವೈದ್ಯಕೀಯ ವಿದ್ಯಾಬ್ಯಾಸದಲ್ಲಿ ಸರ್ಕಾರಿ ಪ್ರವೇಶ ಪಡೆಯಲಿ ದ್ದಾರೆ. ೯೮ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದ ಅರ್ಹತೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದು ಮೊದಲ ಹೆಜ್ಹೆಯಲ್ಲಿ ಅಕಾಡೆಮಿ ಪ್ರಯತ್ನ ಎಂದು ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕ ಎ.ಆರ್. ಅವಿನಾಶ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ವರ್ಷ ಆರಂಭವಾದ ಅಕಾಡೆಮಿಯಲ್ಲಿ ೧೫೦ ವಿದ್ಯಾರ್ಥಿಗಳು ೧೦ ತಿಂಗಳ ತರಬೇತಿ ಪಡೆದಿದ್ದು, ಅದರಲ್ಲಿ ೨೦ ವಿಧ್ಯಾರ್ಥಿಗಳು ಎರಡು ವರುಷದ ತರಬೇತಿಗೆ ಸೇರಿದ್ದರು.

ಈ ಪ್ರಥಮ ಬ್ಯಾಚ್ನಲ್ಲಿ ಪರೀಕ್ಷೆಗೆ ಹಾಜರಾಗಿದ್ದ ೧೩೦ ವಿದ್ಯಾರ್ಥಿಗಳಲ್ಲಿ ೪೫ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಇವರಲ್ಲಿ ೩೫ ವಿದ್ಯಾರ್ಥಿಗಳು ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು, ಉಳಿದ ೧೦ ವಿದ್ಯಾರ್ಥಿಗಳು ದಂತ ಹಾಗೂ ಆಯು ರ್ವೇದ ಕಾಲೇಜುಗಳಲ್ಲಿ ಪ್ರವೇಶ ಪಡೆಯಲಿ ದ್ದಾರೆ ಎಂದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ನೀಟ್ ಪರೀಕ್ಷೆ ಅತ್ಯಂತ ಕಠಿಣವಾಗಿತ್ತು. ಹಾಗಾಗಿ ಒಟ್ಟು ಫಲಿತಾಂಶ ಸಾಕಷ್ಟು ಕಡಿಮೆಯಾಗಿದೆ. ಆದರೂ ಕೂಡ ಈ ವರ್ಷ ದಲ್ಲಿ ಮೆಡಿಕಲ್ ಸೀಟುಗಳ ಸಂಖ್ಯೆ ಹೆಚ್ಚು ಮಾಡಿರುವುದರಿಂದ ಕಡಿಮೆ ಅಂಕ ಪಡೆದವರಿಗೂ ಕೂಡ ಮೆಡಿಕಲ್ ಕೋರ್ಸ್ಗಳ ಸೀಟು ಸಿಗುವ ಸಾಧ್ಯತೆಗಳಿವೆ. ಕರ್ನಾಟಕದಲ್ಲಿ ೯೦೦ ಮೆಡಿಕಲ್ ಸೀಟುಗಳು ಹೆಚ್ಚಳವಾಗಿವೆ. ವಿದ್ಯಾರ್ಥಿಗಳು ಸಾಧನೆ ಮಾಡಲು ಶ್ರಮಿಸಿದ ಅಕಾಡೆಮಿಯ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಅಭಿನಂದನೆ ಸಲ್ಲಿಸಿದರು. ೨೦೨೬ನೇ ಸಾಲಿನ ಹೊಸ ಬ್ಯಾಚ್ಗೆ ಪ್ರವೇಶ ಆರಂಭವಾಗಿದ್ದು, ಶಿವಮೊಗ್ಗ ಮತ್ತು ಅಕ್ಕ-ಪಕ್ಕದ ಜಿಲ್ಲೆಗಳ ವಿದ್ಯಾರ್ಥಿಗಳು ಈ ಸದಾವಕಾಶ ಪಡೆಯುವಂತೆ ಮನವಿ ಮಾಡಿಕೊಂಡರು ಕಲಿಕೆಯಲ್ಲಿ ಹಾಸ್ಟೆಲ್ ಪ್ರವೇಶ ಕಡ್ಡಾಯ ಎಂದರು.

ಪ್ರವೇಶಾತಿ ಅಥವಾ ಹೆಚ್ಚಿನ ಮಾಹಿತಿಗಾಗಿ ಮೊ.: ೯೬೬೩೮-೬೧೭೧೩, ೭೦೧೯೨-೫೫೬೮೮ರಲ್ಲಿ ಸಂಪರ್ಕಿಸಬಹುದಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪಸ್ ಕೋ-ಆರ್ಡಿನೇಟರ್ ವಿಜಯ್, ಜನರಲ್ ಮ್ಯಾನೇಜರ್ ಪ್ರದೀಪ್, ನಾಗರಾಜ್ ಆಚಾರಿ, ಡಿಸಿಲ್ ಇದ್ದರು.
ನನ್ನ ಪಾಲಿನ ದೇವ್ರು ಅವಿನಾಶ್ ಸರ್
ಡಾಕ್ಟರ್ ಆಗಿ ನೋಡಬೇಕೆಂಬ ತಂದೆಯ ಆಸೆ ಈಗ ಈಡೇರುತ್ತಿದೆ. ಅಪ್ಪ ಆಟೋ ಡ್ರೈವರ್, ತಾಯಿ ಅಂಗನವಾಡಿ ಕಾರ್ಯಕರ್ತೆ. ಕಷ್ಟಪಟ್ಟು ಡಾಕ್ಟರೇ ಆಗಬೇಕೆಂದು ಓದಿಸುತ್ತಿದ್ದಾರೆ. ಹಿಂದೆ ಓದಿದ ಅಕಾಡೆಮಿಯಲ್ಲಿ ಹಣವೂ ಹಾಳಾಯ್ತು. ಎನ್ಸಿ ಆರ್ ಟಿ ಓದ್ದೇಕು. ಹೇಗೆ ಓದ್ದೇಕು ಅಂತ ಗೊತ್ತಿರ್ಲಿಲ್ಲ. ಆದರೂ ಕೊನೆಯದಾಗಿ ದೇಶ್ ನೀಟ್ ಆಕಾಡೆಮಿಗೆ ಬಂದೆ. ತಾಯಿಯ ಕಣ್ಣೀರಿನ ಕಥೆ ಕೇಳಿ ಅವಿನಾಶ್ ಸರ್ ನನಗೆ ಕಡಿಮೆ ಶುಲ್ಕದಲ್ಲಿ ಸೀಟ್ ಕೊಟ್ಟರು. ಇಂತಹ ಎಂಡಿಯನ್ನು ಯಾವ ಆಕಾಡೆಮಿಯಲ್ಲೂ ನಾನು ನೋಡಿಲ್ಲ. ನನಗೆ ೪೫೦ ಅಂಕ ಬರುತ್ತೆ. ನನ್ನ ತಂದೆ ತುಂಬ ಸಂತಸ ಪಟ್ಟರು.
-ದಿಶೀಲ್ ಡಿ.ಕೆ, ದೇಶ್ ನೀಟ್ ಅಕಾಡೆಮಿಯ ವಿದ್ಯಾರ್ಥಿ
ದೇಶ್ ನೀಟ್ ಅಕಾಡೆಮಿಯು ವೈದ್ಯರಾಗುವ ಕನಸುಗಳನ್ನು ನನಸು ಮಾಡುವತ್ತ ಹೆಜ್ಜೆ ಹಾಕುತ್ತಿದೆ. ಹಾಗಾಗಿ ಇಲ್ಲಿಯೇ ಹಾಸ್ಟೇಲ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಹಾಸ್ಟೆಲ್ ಪ್ರವೇಶವಿಲ್ಲದೆ ಇಲ್ಲಿ ಪ್ರವೇಶ ಪಡೆಯಲು ಸಾಧ್ಯವಿಲ್ಲ. ಶಿವಮೊಗ್ಗದ ಬಡ ವಿದ್ಯಾರ್ಥಿಗಳಿಗೆ ಹಾಸ್ಟೇಲ್ ಪ್ರವೇಶಕ್ಕೆ ಶೇ.೫೦ರಷ್ಟು ಕೂಡ ರಿಯಾಯಿತಿ ನೀಡಲಾಗುವುದು. ಅತ್ಯಂತ ಬಡ ಮಕ್ಕಳಿಗೆ ಶುಲ್ಕದಲ್ಲಿ ರಿಯಾಯಿತಿ ಕೂಡ ನೀಡಲಾಗುವುದು.
-ಎ.ಆರ್. ಅವಿನಾಶ್, ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕ