ಶಿವಮೊಗ್ಗ : ನಗರದ ಎನ್ಇಎಸ್ ಹವ್ಯಾಸಿ ರಂಗತಂಡದ ವತಿಯಿಂದ ಜೂ.17 ಮತ್ತು 18 ರಂದು ಎರಡು ದಿನಗಳ ಕಾಲ

ರಷ್ಯಾದ ಖ್ಯಾತ ಬರಹಗಾರ ಆಯ್ಯಂಟನ್ ಚೆಕಾವ್ ರವರ ಸಣ್ಣ ಕಥೆಗಳನ್ನು ಆಧರಿಸಿದ ಡಾ.ಹೇಮಪಟ್ಟಣಶೆಟ್ಟಿ ವಿರಚಿತ ನಾಟಕ ‘ಚೆಕಾವ್ ಟು ಶಾಂಪೇನ್’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಜೂ.17 ರ ಮಂಗಳವಾರ ಸಂಜೆ 06:30 ಕ್ಕೆ ಸುವರ್ಣ ಸಂಸ್ಕೃತಿ ಭವನದಲ್ಲಿ ನಾಟಕ ಪ್ರದರ್ಶನ ನಡೆಯಲಿದ್ದು, ಜೂ.18 ರಂದು ಬುಧವಾರ ಕರ್ನಾಟಕ ಸಂಘದಲ್ಲಿ ಸಂಜೆ 06:30 ಕ್ಕೆ ಪ್ರದರ್ಶನ ಏರ್ಪಡಿಸಲಾಗಿದೆ.

ಎನ್ಇಎಸ್ ಬಿಎಡ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಕೆ.ಚಿದಾನಂದ ನಟಿಸಿ, ನಿರ್ದೇಶಿಸಿ, ರಂಗವಿನ್ಯಾಸ ಮಾಡಿದ್ದು,

ಭದ್ರಾವತಿಯ ಲಕ್ಷ್ಮೀ ನಾಟಕದ ಪ್ರಸಾಧನ ಮತ್ತು ವಸ್ತ್ರ ವಿನ್ಯಾಸ ನಿರ್ವಹಿಸಲಿದ್ದಾರೆ. ಹರಿಗೆ ಗೋಪಾಲಸ್ವಾಮಿ ಬೆಳಕಿನ ವಿನ್ಯಾಸ ರೂಪಿಸಿದ್ದು, ವಿನ್ಯಾಸ್ ಸಂಗೀತ ನಿರ್ವಹಣೆ ಮಾಡಲಿದ್ದಾರೆ.
ಎನ್ಇಎಸ್ ಸಂಸ್ಥೆಯ ನೌಕರರು ಹಾಗೂ ವಿದ್ಯಾರ್ಥಿಗಳು ಹವ್ಯಾಸಿ ರಂಗತಂಡದ ಮುಖ್ಯ ರುವಾರಿಗಳಾಗಿದ್ದಾರೆ. ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.