ಶಿವಮೊಗ್ಗ : ಸುಬ್ಬಯ್ಯ ಮೆಡಿಕಲ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ವೈದ್ಯಕೀಯ ಶಿಕ್ಷಣವನ್ನ ಮುಗಿಸಿ ಇಂಟರ್ ಶಿಪ್ ನ್ನ ಮುಗಿಸುವ ಹಂತದಲ್ಲಿದ್ದ ವೇಳೆ ವಿದ್ಯಾರ್ಥಿನಿ ನೇಣಿಗೆ ಶರಣಾಗಿದ್ದಾರೆ. ಬರ್ಲಿನ್ ದೇಶದಲ್ಲಿರುವ ಯುವತಿಯ ಪೋಷಕರು ಮೂಲತಃ ಬೆಂಗಳೂರಿನವರಾಗಿದ್ದಾರೆ.
ಇಂಟರ್ನ್ ಶಿಪ್ ಮುಗಿಯಲು 10 ದಿನಬಾಕಿ ಉಳಿದಿದ್ದು, ಈ ವೇಳೆ ಯುವತಿಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶವವನ್ನ ಶಿವಮೊಗ್ಗದ ಮರಣೋತ್ತರ ಪರೀಕ್ಷೆ ಕೇಂದ್ರಕ್ಕೆ ವಿದ್ಯಾರ್ಥಿನಿಯ ಮೃತ ದೇಹವನ್ನ ಸಾಗಿಸಲಾಗಿದೆ. ಪ್ರಕರಣ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.