ಶಿವಮೊಗ್ಗ : ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸುತ್ತಿರುವ ಮುಸ್ಲಿಂ ಗೂಂಡಾಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ನಗರ ಬಿಜೆಪಿವತಿಯಿಂದ ಇಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಇತ್ತೀಚಿನ ದಿನಗಳಲ್ಲಿ ಹಿಂದೂಗಳ ಜೀವಕ್ಕೆ ರಕ್ಷಣೆ ಇಲ್ಲದಂತಾಗಿದೆ. ಮುಸ್ಲಿಂ ಗೂಂಡಾಗಳಿಂದ ಹೆಣ್ಣು ಮಕ್ಕಳಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳಗಳು ನಡೆಯುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಮೇ ೨೭ರ ರಾತ್ರಿ ೮.೩೦ರ ಹೊತ್ತಿನಲ್ಲಿ ಬಾಪೂಜಿ ನಗರದ ಎರಡನೇ ತಿರುವಿನಲ್ಲಿ

ಹಿಂದೂಗಳ ಮೇಲೆ ಮುಸ್ಲಿಂ ಗೂಂಡಾಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ನಾಗರಾಜ್ ಎಂಬ ಯುವಕ ಅವರ ಪತ್ನಿ ರೋಹಿಣಿ ಜೊತೆ ಇರುವಾಗ, ಪೌರಕಾರ್ಮಿಕನಾದ ನಾಗರಾಜ್ ಅವರನ್ನು ಜಾತಿ ನಿಂಧನೆ ಮಾಡಿದ್ದಾರೆ. ಮತ್ತು ಅವರ ಪತ್ನಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.

ಹೀಗೆ ಪದೇ ಪದೇ ಹಿಂದೂಗಳ ಮೇಲೆ ಹಲ್ಲೆ ನಡೆಯುತ್ತಲೇ ಇದೆ. ಗಾಂಧಿಬಜಾರಿನಲ್ಲಿ ಕೂಡ ಹಿಂದೂ ಯುವಕರ ಮೇಲೆ ಹಲ್ಲೆ ನಡೆಸಿದ್ದರು. ಆದ್ದರಿಂದ ಇಂತಹ ಮುಸ್ಲಿಂಗೂಂಡಾಗಳ ಮೇಲೆ ಕಾನೂನುಕ್ರಮ ತೆಗೆದುಕೊಂಡು ಅವರನ್ನು ಗಡಿಪಾರು ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಿದರು.

ಮನವಿ ನೀಡುವ ಸಂದರ್ಭದಲ್ಲಿ ಬಿಜೆಪಿ ನಗರ ಅಧ್ಯಕ್ಷ ಡಿ. ಮೋಹನ್ ರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಕೆ., ಹೆಚ್.ಕೆ. ದೀನದಯಾಳು, ಮಾಜಿ ಸೂಡಾ ಅಧ್ಯಕ್ಷ ಎಸ್. ಜ್ಞಾನೇಶ್ವರ್, ಪಾಲಿಕೆ ಮಾಜಿ ಸದಸ್ಯೆ ಸುರೇಖಾ ಮುರಳೀಧರ್ ಹಾಗೂ ಪ್ರಮುಖರಾದ ಪ್ರವೀಣ್ ಚಟ್ನಹಳ್ಳಿ, ರಂಗೇಶ್, ಪುರುಷೋತ್ತಮ್, ಪ್ರಭಾಕರ್ ಕೋಟೆ, ಯಶೋಧ ಮಂಡ್ಲಿ, ಸುಧಾಮಣಿ, ಕುಮಾರ್ ಗಾಡಿಕೊಪ್ಪ ಸೇರಿದಂತೆ ಹಲವರಿದ್ದರು.