oplus_2
ಶಿವಮೊಗ್ಗ : ಖ್ಯಾತನಟ ಕಮಲಾಹಾಸನ್ ಕನ್ನಡಿಗರ ಕ್ಷಮೆ ಕೇಳಬೇಕೆಂದು ಆಗ್ರಹಿಸಿ ಕರ್ನಾಟಕ ಕನ್ನಡ ಕಾರ್ಮಿಕರ ರಕ್ಷಣಾವೇದಿಕೆಯಿಂದ ಇಂದು ಶಿವಪ್ಪನಾಯಕ ವೃತ್ತದಲ್ಲಿ ಕಮಲಾಹಾಸನ್ ಪ್ರತಿಕೃತಿ ದಹಿಸಿ, ಪ್ರತಿಭಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ವಾಟಾಳ್ ಮಂಜುನಾಥ್ ಕಮಲಾಹಾಸನ್ ಚಿತ್ರಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ನಿನ್ನೆ ಚನ್ನೈನಲ್ಲಿ ನಡೆದ ಕನ್ನಡದ ನಟ ಶಿವರಾಜ್ಕುಮಾರ್ರವರ ಅಭಿನಯದ ತಮಿಳು ಚಿತ್ರದ ಪ್ರಮೋಷನ್ ಸಮಾರಂಭವೊಂದರಲ್ಲಿ ನಟ ಕಮಲಾಹಾಸನ್ ಕನ್ನಡ ಭಾಷೆಯ ಬಗ್ಗೆ ನಿಕೃಷ್ಟವಾಗಿ ಮಾತನಾಡಿ, ತಮಿಳು ಭಾಷೆಯಿಂದಲೇ ಕನ್ನಡ ಹುಟ್ಟಿದ್ದು ಎಂದಿದ್ದಾರೆ. ೨೫೦೦ ಸಾವಿರ ವರ್ಷ ಹಳೆಯ ಭಾಷೆ ಕನ್ನಡವಾಗಿದ್ದು, ಅರಿವಿಲ್ಲದೆ ಮಾತನಾಡಿದ್ದಾರೆ. ಇದರಿಂದ ಕನ್ನಡಿಗರಿಗೆ ಅವಮಾನವಾಗಿದೆ.

ಕೂಡಲೇ ಅವರು ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಮುಂದೆ ಅವರ ಯಾವ ಚಿತ್ರವನ್ನು ಕರ್ನಾಟಕ ಬಿಡುಗಡೆ ಮಾಡಲು ಮತ್ತು ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ. ವೇದಿಕೆ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುತ್ತದೆ ಎಂದ ಅವರು, ಕೂಡಲೇ ಕಮಲಾಹಾಸನ್ ಕನ್ನಡಿಗರ ಕ್ಷಮೆ ಕೇಳುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಅರ್ಚನಾ, ದೀಪ, ರವಿಕುಮಾರ್, ಲೋಕೇಶ್, ಸಂತೋಷ್, ಗಿರೀಶ್ ಮೊದಲಾದವರಿದ್ದರು.