ಶಿವಮೊಗ್ಗ : ಡಾ. ಲವ ಜಿ.ಆರ್ ರಚನೆಯ ಜಿಂಬಾವ್ವೆಯಲ್ಲಿ ನಡೆದ ಸತ್ಯ ಘಟನೆ ಆಧಾರಿತ ನಿಸರ್ಗ ಕುರಿತ ಮಕ್ಕಳು ಅಭಿನಯಿಸುವ ‘ಸೆಸೆಲ್ ಸಿಂಹ’ ಎಂಬ ನಾಟಕವನ್ನು ಮೇ ೨೪ಕ್ಕೆ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.

ಮೇ ೬ ರಿಂದ ೨೪ರ ವರೆಗೆ ಸಹ್ಯಾದ್ರಿ ಕಲಾ ತಂಡ, ಶಿವಮೊಗ್ಗ, ಕಡೆ ಕೊಪ್ಪಲ ಪ್ರತಿಷ್ಠಾನ (ರಿ.) ಶಿವಮೊಗ್ಗ ಹಾಗೂ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಶಿವಮೊಗ್ಗ ಇವರ ಸಹಯೋಗದಲ್ಲಿ ಹನ್ನೊಂದನೇ ವರ್ಷದ ‘ಅಜ್ಜಿಯ ಅಂಗಳ ಅಜ್ಜನ ಜಗಲಿ’ ಮಕ್ಕಳ ಬೇಸಿಗೆ ರಂಗ ಶಿಬಿರವನ್ನು ಡಾ.ಲವ ಜಿ.ಆರ್. ಇವರ ನಿರ್ದೇಶನದಲ್ಲಿ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಹೊಸ ವಿದ್ಯಾರ್ಥಿ ನಿಲಯದಲ್ಲಿ ಶಿಬಿರವನ್ನು ಆಯೋಜಿಸಲಾಗಿತ್ತು.

ಶಿಬಿರದ ಸಮಾರೋಪವು ಕುವೆಂಪು ರಂಗಮಂದಿರದಲ್ಲಿ ನಾಟಕ ಪ್ರದರ್ಶನ ಮೂಲಕ ಕೊನೆಗೊಳ್ಳಲಿದೆ. ಜಗದೀಶ್ ಆರ್. ಜಾಣಿ ಎನ್.ಎಸ್.ಡಿ. ಪದವೀಧರರು ದೆಹಲಿ. ರಂಗ ಸಂಗೀತ ನೀಡಿ ನಾಟಕವನ್ನು ನಿರ್ದೇಶಿಸಿದ್ದಾರೆ. ಇದೇ ಮೇ ೨೪ರಂದು ಮಕ್ಕಳು ಕಲಿತ ರಂಗಗೀತೆಗಳು ಮತ್ತು ನಾಟಕವನ್ನು ರಂಗಮಂದಿರದಲ್ಲಿ ಪ್ರದರ್ಶಿಸಲಾಗುತ್ತಿದೆ.

ನಾಟಕಗಳನ್ನು ರೂಪಿಸುವುದೇ ಕಷ್ಟ ಸಾಧ್ಯವಾಗಿರುವ ಕಾಲಘಟ್ಟದಲ್ಲಿ ನೋಡುವ ಪ್ರೇಕ್ಷಕರು ಮುಖ್ಯರಾಗುತ್ತಾರೆ. ಸತ್ಯ ಹುಡುಕುವ, ಆನ್ವಯಿಕ ರಂಗ ಶಿಕ್ಷಣದ ಮೂಲಕ ಸಿಗುವ ವಿಚಾರ ಮಕ್ಕಳಿಗೆ ತಲುಪಿಸುವ ಪ್ರಯತ್ನವಾಗಿ ಶಿಬಿರವನ್ನು ಆಯೋಜಿಸಲಾಗಿತ್ತು. ಟಿಕೆಟ್ ದರ ೫೦ರೂ.ಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಭಾಗವಹಿಸಬೇಕೆಂದು ಶಿಬಿರದ ನಿರ್ದೇಶಕ ಡಾ. ಲವ ಜಿ.ಆರ್ ಕೋರಿದ್ದಾರೆ.