ಹೊಳೆಹೊನ್ನೂರು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ವಾರ್ಕಿಂಗ್ಗೆ ತೆರಳಿದ ಹೇಮಣ್ಣ ಎಂಬ ವ್ಯಕ್ತಿಯನ್ನು ನಡುರಸ್ತೆಯಲ್ಲಿ ಇತ್ತೀಚೆಗೆ ಭೀಕರ ಕೊಲೆ ಮಾಡಿದ್ದ ಪ್ರಕರಣದಲ್ಲಿ ಅರೋಪಿ ಎಂದು ಗುರುತಿಸಿಕೊಂಡಿದ್ದ

ಚಳಿ ಮಂಜನನ್ನು ಬಂಧಿಸಲು ಹೋದಾಗ ಮಂಜುನಾಥ್ ಅರೋಪಿ ಪೋಲಿಸ್ ಪಿಸಿ ಪ್ರಕಾಶ ಎಂಬ ಸಿಬ್ಬಂಧಿ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ತಮ್ಮ ಅತ್ಮರಕ್ಷಣೆಗೆ ಪೋಲಿಸ್ ಇನ್ಸ್ ಪೆಕ್ಟರ್ ಲಕ್ಷೀಪತಿ ಅತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಪೋಲಿಸರಿಗೆ ಇಂತಹ ಅರೋಪಿಗಳು ಪದೇ ಪದೇ ಹಲ್ಲೆ ನಡೆಸಲು ಯತ್ನಿಸುವವರಿಗೆ ಪೋಲಿಸರು ಗುಂಡು ಹಾರಿಸಿ ಸರಿಯಾದ ಪಾಠ ಕಲಿಸುತ್ತಿದ್ದಾರೆ.