







ನೆಗಿಟೀವ್ ಥಿಂಕಿಂಗ್
ವಾರದ ಅಂಕಣ- 46
- ಗಜೇಂದ್ರ ಸ್ವಾಮಿ ಎಸ್. ಕೆ.,ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)
ಒಳ್ಳೆಯವರಾದರೆ ಈ ಜೀವನದಲ್ಲಿ ಬದುಕುವುದು ಕಷ್ಟ. ಒಳ್ಳೆಯದಕ್ಕೆ ಬೆಲೆಯೇ ಇಲ್ಲ. ನಿಮ್ಮ ಒಳ್ಳೆಯದನ್ನು ಕಟ್ಟಿಕೊಂಡು ಯಾರು ಏನು ಮಾಡಬೇಕಾಗಿದೆ. ಅದು ಅವಶ್ಯಕತೆ ಇದ್ದಾಗ ಬಳಕೆಯಾಗುವ ವಸ್ತುವಾಗುತ್ತದೆ ಅಷ್ಟೇ. ಇಂತಹ ವಿಷಯವನ್ನು ಹಿಂದೆಯೇ ನಮ್ಮ ಹಿರಿಯರು ಹೇಳಿದ್ದರು. ಕಾಲ ಬದಲಾಗಿದೆಯೋ? ಅಥವಾ ನಾವು ಬದಲಾಗಿದ್ದೇವೋ ಎಂಬ ಪ್ರಶ್ನೆ ಹಿಡಿದು ಹುಡುಕಿದಾಗ ಕಂಡು ಬಂದ ಹಿಂದಿನ ಮಾತು ಇಂದಿಗೆ ಪ್ರಸ್ತುತವಾಗುತ್ತಿರುವುದು ಬೆಳಕಿಗೆ ಬರುತ್ತದೆ. ಆದರ ಒಂದಿಷ್ಟು ವಿವರಣೆ ನೀಡುವ ವಿಷಯವೇ ಇಂದಿನ ನೆಗೆಟಿವ್ ಥಿಂಕಿಂಗ್ ಅಂಕಣ.
15ನೇ ಶತಮಾನದಲ್ಲಿ ಪುರಂದರದಾಸರು ಬರೆದ ಕೀರ್ತನೆಯೊಂದು ಇಲ್ಲಿ ನೆನಪಾಗುತ್ತದೆ. ಅದರಲ್ಲಿ ಇಂದಿನ ವಾಸ್ತವದ ಮೋಸದ ಬದುಕಿನ ನಯವಂಚಕರು ಬದುಕುವ ಚಿತ್ರಣ ಎಷ್ಟೊಂದು ಅರ್ಥಗರ್ಬಿತವಾಗಿ ಹೇಳಿದ್ದಾರೆ ಎಂದರೆ ನಾವು ಇಂತಹ ಸಮಾಜದಲ್ಲಿ ಇದ್ದೇವೆ ಎಂಬ ನೈಜತೆ ನಮ್ಮಲ್ಲಿ ಕಾಣಿಸಿಕೊಳ್ಳುತ್ತದೆ.
ಅವರ ಕೀರ್ತನೆಯನ್ನು ಒಮ್ಮೆ ಒದಿನೋಡಿ, ಇದೇ ಅಲ್ಲವೇ ಇಂದಿನ ವಾಸ್ತವ, ಆರು ಶತಮಾನಗಳ ಅಂದಿನ ಬರಹ ಇಂದೆಷ್ಟು ಪ್ರಸ್ತುತ ಅಲ್ಲವೇ..?

ಸತ್ಯವಂತರಿಗಿದು ಕಾಲವಲ್ಲ, ದುಷ್ಟಜನರಿಗೆ ಸುಭಿಕ್ಷಕಾಲ
ಹರಿಸ್ಮರಣೆ ಮಾಡುವಗೆ ಕ್ಷಯವಾಗುವ ಕಾಲ
ಪರಮ ಪಾಪಿಗಳಿಗೆ ಸುಭಿಕ್ಷ ಕಾಲ
ಸ್ಥಿರವಾದ ಪತಿವ್ರತೆಯ ಪರರು ನಿಂದಿಪ ಕಾಲ, ಧರೆಯೊಳು ಜಾರೆಯರ ಕೊಂಡಾಡುವ ಕಾಲ
ಉಪಕಾರ ಮಾಡಿದರೆ ಅಪಕರಿಸುವ ಕಾಲ
ಸಕಲವು ತಿಳಿದವಗೆ ದುರ್ಭಿಕ್ಷ ಕಾಲ, ಸತಿ ಸುತರು ಎಂಬುವರ ನಂಬಲರಿಯದ ಕಾಲ
ಸಟೆಯಲ್ಲವಿದೇ ವಿಪರೀತ ಕಾಲ,
ಧರ್ಮ ಮಾಡುವಗೆ ನಿರ್ಮೂಲವಾಗುವ ಕಾಲ.., ಕರ್ಮಿ ಪಾತಕರಿಗೆ ಬಹು ಸೌಖ್ಯಕಾಲ
ನಿರ್ಮಲಾತ್ಮಕ್ ಸಿರಿ ಪುರಂದರ ವಿಠಲನ
ಮರ್ಮದೊಳು ಭಜಿಸಲರಿಯದ ಕಾಲವಯ್ಯ
ಹೀಗೆ ಪುರಂದರದಾಸರು ಅಂದೇ ಹೇಳಿದ್ದ ಕೀರ್ತನೆಯಂತೆ ಇಂದೂ ಇರುವ ನಮ್ಮ ನಡುವಿನ ಕಿತ್ತೋದ ವ್ಯಕ್ತಿತ್ವದ, ಈಗಲೂ ಬಿಕ್ಷೆಯಂತೆ ಸಾಲ ಪಡೆದವರಲ್ಲಿ ಕೆಲವರು ಹಗಲು ರಾತ್ರಿ ಬದಲಾಗುವ ಮನೋಸ್ಥಿತಿ ಹೊಂದಿರುತ್ತಾರೆ
ಇಂತಹ ಎತ್ತುವಳಿ ಶೂರರು, ಪಡೆದವರಿಗೆ ಹೆದರಿಸುತ್ತಾ, ಎಲ್ಲಿಯೋ ನಯಾಪೈಸೆ ವಾಪಾಸ್ ಕೊಡದೇ ಪಡೆದದ್ದರಲ್ಲಿ ತನ್ನವರಿಗೆ ಕಾಸಿನ ಸರ ಮಾಡಿಸೋ ಕಥೆಯೊಂದು ಇಲ್ಲಿ ಪ್ರಸ್ತುತ ಎನಿಸುತ್ತದೆ. ಅದು ನಮ್ಮ ವಲಯಗಳಲ್ಲಿ ನಾನಾ ಬಗೆಯಾಗಿ ರೂಪುಗೊಂಡಿವೆ ಎನ್ನಲಾಗಿ
ಸಂಬಂಧ ಪಡದವರ ಹತ್ತಿರ ಕಾಡಿಬೇಡಿ, ಅವರನ್ನೇ ಹರಾಜು ಹಾಕಿ ತನ್ನ ಬೇಳೆ ಕಾಳಿಗೋಸ್ಕರ ಅವರ ವಸ್ತುವನ್ನು, ಬಂಗಾರವನ್ನು ಇನ್ನೆಲ್ಲೂ ಅಡ ಇಡಿಸಿ ತನ್ನ ಮನೆಯವರಿಗೆ ಬಂಗಾರ ಮಾಡಿಸಿ ಹಾಕಿದಾಗ ಅದು ಹೇಗೆ ತಾನೇ ನೈಜತೆಯ ನ್ಯಾಯಯುತ ಬದುಕಾಗಲು ಸಾಧ್ಯ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ.

ಇಂತಹ ಕಿರಾತಕ ಮನಸುಗಳು ನಮ್ಮ ನಡುವೆ ಈಗ ಹೆಚ್ಚಾಗುತ್ತಿರುವುದು ಮುಗ್ಧ ಮನಸ್ಸುಗಳನ್ನ ಆಕ್ರೋಶಕ್ಕೆ ತಳ್ಳಿ ತನ್ನನ್ನು ತಾನು ಬೆಳೆಸಿಕೊಳ್ಳಲು, ಉಳಿಸಿಕೊಳ್ಳಲು, ಗಿಟ್ಟಿಸಿಕೊಳ್ಳಲು ಮೋಸ ಮಾಡುವ ಇಂತಹ ನಯವಂಚಕ ಮನಸ್ಸುಗಳನ್ನು ಬದಲಿಸಲು ಸಾಧ್ಯವೇ ಎಂಬ ಪ್ರಶ್ನೆ ಅತ್ಯಂತ ಗಂಭೀರವಾಗಿ ಮೂಡಿ ಬರುತ್ತದೆ.
ಮತ್ತೆ ಕೆಲವರು ಬೀದಿಯಲಿ ಹರಾಜಾಕಿಸಿ ಕೊಂಡರೂ ಸ್ವಯಂ ಘೋಷಿತ ಪ್ರಭು ವಿನಂತಾಡುವ ಮೋಸದಲ್ಲೇ ಹುಟ್ಟಿ ಬೆಳೆದವರ ಚಿತ್ರಣಗಳು ವಂಚನೆಗಳು ಬಹಳಷ್ಟು ಸುಸಂಸ್ಕೃತ ಹಾಗೂ ಉದಾರಿ ಮನಸ್ಸನ್ನು ಆಕ್ರೋಶಕ್ಕೆ ತಳ್ಳುವುದಲ್ಲದೆ ನಿಜವಾಗಿಯೂ ನೋಂದವರಿಗೆ ನೆರವು ನೀಡುವ ಔದಾರ್ಯವನ್ನೂ ಸಹ ಮರೆಮಾಡುತ್ತದೆ ಅಲ್ಲವೇ?
ಒಳ್ಳೆಯವರಿಗೆ ಹಾಗೂ ಒಳ್ಳೆಯ ವಿಚಾರಕ್ಕೆ ಬೆಲೆ ಇಲ್ಲ. ಸುಳ್ಳು ಮೋಸ ಅತಿ ವೇಗವಾಗಿ ನಮ್ಮನ್ನು ಆವರಿಸಿಬಿಡುತ್ತದೆ. ನಮ್ಮೊಳಗೆ ನಮ್ಮತನವನ್ನು ಮಂಗ ಮಾಡುತ್ತದೆ. ಇಂತಹ ಮೋಸ ಹಾಗೂ ದಗಲ್ಬಾಜಿತನಕ್ಕೆ ಶಿಕ್ಷೆ ಯಾವಾಗ ಎಂಬುದು ಯಾರಿಗೂ ಗೊತ್ತಿಲ್ಲ. ತಪ್ಪು ಮಾಡಿದವನು ಖಂಡಿತ ಶಿಕ್ಷೆ ಅನುಭವಿಸುತ್ತಾನೆ ಎನ್ನುವ ಮಾತು ವಾಡಿಕೆಯಾಗಿದೆ ಅಷ್ಟೆ.

ಪುರಂದರದಾಸರು ಅಂದಿನ ಸ್ಥಿತಿಗತಿಯನ್ನು ಹೇಳುವ, ಸಮಾಜದ ತಿಳುವಳಿಕೆಗೆ ನೀಡುವ ಔಚಿತ್ಯ ಈಗಿನ ವಾಸ್ತವದಲ್ಲಿ ಕಟು ಸತ್ಯವೆನಿಸಿರುವುದು ಸುಳ್ಳೇನಲ್ಲ ಅಲ್ಲವೇ?
ದಾಸ ಸಾಹಿತ್ಯದ ಪರಂಪರೆಯನ್ನು ಗಮನಿಸಿದಾಗ ಇಂದಿನ ವಾಸ್ತವದ ಅರಿವಿನ ಚಿಂತನೆ ಅದರೊಳಗೆ ಎದ್ದು ಕಾಣುತ್ತಿತ್ತು ಎಂಬುದನ್ನು ತಾರ್ಕಿಕವಾಗಿ ಅವಲೋಕಿಸಬಹುದು.
ಕಳ್ಳ ಮೋಸಗಾರ ವಂಚಕನ ಹೆಂಡತಿ…. ಅದು ಎನ್ನುವುದಾದರೂ ಕೆಲವೇ ಕೆಲವು ಮನಗಳಲ್ಲಿ ಹುದುಗಿರುವ ವಂಚಕ ಮನಸು ಇಡೀ ಸಮಾಜಕ್ಕೆ ಕಪ್ಪುಚುಕ್ಕೆ. ಅದರ ಬದಲಾವಣೆ ಕನಸಿನ ಮಾತಾಗಿಯೇ ಉಳಿಯಿತಲ್ಲವೇ?