ಸಾಗರ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಪಾರಂಪರಿಕ ಅರಣ್ಯವಾಸಿಗಳ ಸಾಗುವಳಿ ಹಕ್ಕಿಗೆ ಸಂಬAಧಿಸಿದAತೆ ಕಾನೂನು ಬಾಹಿರವಾಗಿ ಪುನರ್ ಪರಿಶೀಲನೆ ಮಾಡಿತ್ತಿರುವುದನ್ನು ಸ್ಥಗಿತಗೊಳಿಸುವುದು ಮತ್ತು ಕಾನೂನುಬಾಹಿರವಾಗಿ ಅರಣ್ಯವಾಸಿಗಳಿಗೆ ಮೂರು ತಲೆಮಾರಿನ ವಯಕ್ತಿಕ ದಾಖೆಲೆಗಳಿಗೆ ಆಗ್ರಹಿಸುವ ಬದಲಾಗಿ, ಕಾನೂನಿನ ೧೩ ನೇ ನಿಯಮದಲ್ಲಿ ನಿರ್ದಿಷ್ಟಪಡಿಸಿದ ಒಂದಕ್ಕಿoತ ಹೆಚ್ಚು ಸಾಂದರ್ಭೀಕ ಸಾಕ್ಷ ಪರಿಗಣಿಸುವಂತೆ ನಿರ್ಧೇಶನ ನೀಡುವಂತೆ ಹಿರಿಯ ಸಾಮಾಜಿಕ ಚಿಂತಕ ಕಾಗೋಡ ತಿಮ್ಮಪ್ಪನವರು ಮುಖ್ಯ ಮಂತ್ರಿ ಸಿದ್ದರಾಮಯ್ಯರವರಿಗೆ ಪತ್ರ ಬರೆದಿದ್ದಾರೆ.

ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಕಾನೂನುಬಾಹಿರ ಮತ್ತು ಕಾನೂನಿಗೆ ವ್ಯತಿರಿಕ್ತವಾಗಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳ ಅರ್ಜಿಗಳನ್ನ ಪುನರ್ ಪರಿಶೀಲನೆ ಆಗುತ್ತಿದೆ ಎಂಬ ಕುರಿತು ನೀಡಿದÀ ಮನವಿಗೆ ಸ್ಪಂದಿಸಿ ಕಾಗೋಡ ತಿಮ್ಮಪ್ಪನವರು ಮೇಲಿನಂತೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿರುವರು.

ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಪಾರಂಪರಿಕ ಅರಣ್ಯವಾಸಿಗಳ ಸಾಗುವಳಿ ಹಕ್ಕಿಗೆ ಸಂಬAಧಿಸಿದAತೆ ಕೇಂದ್ರ ಸರ್ಕಾರದ ಬುಡಕಟ್ಟು ಮಂತ್ರಾಲಯದ ದಿ.೧೨ ಸೆಪ್ಟೇಂಬರ್ ೨೦೧೪ ರ ಆದೇಶ, ಅರಣ್ಯ ಹಕ್ಕು ಕಾಯಿದೆ ೧೨ (ಎ)(೧೧) ರಂತೆ, ಗುಜರಾತ್ ಉಚ್ಛ ನ್ಯಾಯಾಲಯದ ರಿಟ್ ಪೀಟಿಶನ್ ಆದೇಶಗಳಿಗೆ ವಿರುದ್ದ, ಕಾನೂನುಬಾಹಿರವಾಗಿ ಮೂರು ತಲೆಮಾರಿನ (೧೯೩೦ ರ ಪೂರ್ವ) ವಯಕ್ತಿಕ ನಿರ್ದಿಷ್ಟ ದಾಖಲಾತಿಗಾಗಿ ಉಪ ಮತ್ತು ಜಿಲ್ಲಾ ಅರಣ್ಯ ಹಕ್ಕು ಸಮಿತಿಗಳು ಒತ್ತಾಯಿಸುತ್ತಿರುವುದನ್ನು ಹಾಗೂ ನಾಮ ನಿರ್ದೇಶನ ಸದಸ್ಯರ ಅನುಪಸ್ಥಿತಿಯಲ್ಲಿ ಅರ್ಜೀಗಳ ಪುನರ್ ಪರಿಶೀಲಿಸುವ ಕ್ರಮವನ್ನ ಸ್ಥಗಿತಗೋಳಿಸುವಂತೆ ಪತ್ರದಲ್ಲಿ ಕಾಗೋಡ ಅವರು ಉಲ್ಲೇಖಿಸಿದ್ದಾರೆ.

ಮನವಿಯಲ್ಲಿ
ಕಾನೂನಿನ ವ್ಯತಿರಿಕ್ತವಾಗಿ ಅರ್ಜಿ ಪುನರ್ ಪರಿಶೀಲನೆಗೊಳ್ಳುತ್ತಿರುವ ದಾಖಲೆ ಮತ್ತು ಕಾನೂನು ಅಂಶಗಳನ್ನು ಮನವಿ ಜೊತೆಯಲ್ಲಿ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಕಾಗೋಡ ಅವರಿಗೆ ನೀಡಿದರು.