ಶಿವಮೊಗ್ಗ : ನಗರದ ಎನ್ಇಎಸ್ ಹವ್ಯಾಸಿ ರಂಗತಂಡದ ವತಿಯಿಂದ ಸೊರಬ ತಾಲ್ಲೂಕು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಸಂಯುಕ್ತಾಶ್ರಯದಲ್ಲಿ ಮೇ.18 ರ ಭಾನುವಾರ ಸಂಜೆ 06:30 ಕ್ಕೆ ಸೊರಬಾದ ರಾಜ್ ಕಲಾಮಂದಿರದಲ್ಲಿ ಡಾ.ಹೇಮಪಟ್ಟಣಶೆಟ್ಟಿ ವಿರಚಿತ ‘ಚೆಕಾವ್ ಟು ಶಾಂಪೇನ್’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಎನ್ಇಎಸ್ ಬಿಎಡ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಕೆ.ಚಿದಾನಂದ ನಟಿಸಿ, ನಿರ್ದೇಶಿಸಿ, ರಂಗವಿನ್ಯಾಸ ಮಾಡಿದ್ದು, ಭದ್ರಾವತಿಯ ಲಕ್ಷ್ಮೀ ನಾಟಕದ ಪ್ರಸಾಧನ ಮತ್ತು ವಸ್ತ್ರ ವಿನ್ಯಾಸ ನಿರ್ವಹಿಸಲಿದ್ದಾರೆ. ಹರಿಗೆ ಗೋಪಾಲಸ್ವಾಮಿ ಬೆಳಕಿನ ವಿನ್ಯಾಸ ರೂಪಿಸಿದ್ದಾರೆ.

ತಾಲ್ಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಶಂಕರ್ ಶೇಟ್ ಅಧ್ಯಕ್ಷತೆ ವಹಿಸಲಿದ್ದು, ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಗುತ್ತಿದೆ.

ಎನ್ಇಎಸ್ ಸಂಸ್ಥೆಯ ನೌಕರರು ಹಾಗೂ ವಿದ್ಯಾರ್ಥಿಗಳು ಹವ್ಯಾಸಿ ರಂಗತಂಡದ ಮುಖ್ಯ ರುವಾರಿಗಳಾಗಿದ್ದಾರೆ. ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.