ಶಿವಮೊಗ್ಗ : ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದವತಿಯಿಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ೬೫ನೇ ವರ್ಷದ ಹುಟ್ಟುಹಬ್ಬದ ಸಂಭ್ರಮಾಚರಣೆಯ ಅಂಗವಾಗಿ ಭಾರತೀಯ ಯೋಧರಿಗೆ ಗೌರವ ಸಮರ್ಪಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮೇ ೧೫ರಂದು ಬೆಳಿಗ್ಗೆ ೧೧ಗಂಟೆಗೆ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಆರ್. ಮೋಹನ್ ಹೇಳಿದರು.

ಅವರು ಇಂದು ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮವನ್ನು ಸಚಿವ ಮಧುಬಂಗಾರಪ್ಪ ಉದ್ಘಾಟಿಸುವರು. ಕುಣಿಗಲ್ ಶಾಸಕ ಡಾ|| ರಂಗನಾಥ್ ಮುಖ್ಯ ಅತಿಥಿಯಾಗಿ ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಉಮಾಶ್ರೀ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರು, ಗಣ್ಯರು, ನಿಗಮ ಮಂಡಳಿಗಳ ಅಧ್ಯಕ್ಷರುಗಳು, ಭಾಗವಹಿಸುವರು ಎಂದರು.

ನಮ್ಮ ಯೋಧರು ನಮ್ಮ ಹೆಮ್ಮೆ. ಯೋಧರಿಗೆ ಗೌರವ ಸಮರ್ಪಣೆ ಮಾಡುವುದು ನಮ್ಮ ಕರ್ತವ್ಯ ಕೂಡ. ಡಿ.ಕೆ. ಶಿವಕುಮಾರ್ರವರ ಹುಟ್ಟುಹಬ್ಬದ ಅಂಗವಾಗಿ ಭಾರತೀಯ ಯೋಧರಿಗೆ ಗೌರವ ಸಮರ್ಪಣೆ ಮಾಡುತ್ತೇವೆ. ಈ ಸಮಾರಂಭದಲ್ಲಿ ಕರ್ನಲ್ ಮಾಣಿಕ್ಯ ಪಥಾನಿಯ, ಲೆ. ಕರ್ನಲ್ ಆರ್. ವಿಷ್ಣುಶಂಕರ್, ಮೇಜರ್ ಮೊಹಮದ್ ಇಕ್ಬಾಲ್, ಸುದರ್ಶನ್ ಸಿಂಗ್, ಪರಮ್ಜಿತ್ ಸಿಂಗ್, ಅಫ್ಜಲ್ಖಾನ್, ಜಗ್ಜಿತ್ ರಾಜ್, ಸ್ಕಾಲ್ಝಂಗ್ ರಂಗಧೋಳ್, ಟಿಕಾ ರಾಮ್ರಾಯ್, ಕಾಶೀನಾಥ್ ಕೆ. ಚಿರಂಜೀವಿ, ಸುದೀಪ್ ಜಾದವ್, ಸಜೇಶ್ ಸಸಿ, ಸತ್ನಾಮ್ ಸಿಂಗ್, ಆನಂದ್ ಬಡಕುಂದ್ರಿ, ಕಾಳಗೌಡ ಹಾಲಪ್ಪ ಘಂಟಿ, ಈರಪ್ಪ ನಿರ್ವಾಣಿ ಪಾಟೀಲ್, ಮಕರಂದ್ ಉತ್ತಮ್ ಕೇಸರ್ಕರ್, ರಮೇಶ್ ಎಸ್.ಕೆ., ನಾಯಕ್ ಮಹೇಂದ್ರ ಸಿಂಗ್ ನೇಗಿ ಅವರನ್ನು ಸನ್ಮಾನಿಸಲಾಗುವುದು ಎಂದರು.

ಹೆಮ್ಮೆಯ ಯೋಧರಿಗೆ ಯಕ್ಷಗಾನ ಕಲಾವಿದ ಹಾಗೂ ಉಪನ್ಯಾಸಕ ವಿ. ದತ್ತಮೂರ್ತಿ ಭಟ್ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಗಿರೀಶ್ ಮತ್ತು ವೃಂದದವರಿಂದ ದೇಶಭಕ್ತಿಗೀತೆಗಳನ್ನು ಆಯೋಜಿಸಲಾಗಿದೆ ಎಂದರು.
ಹಾಗೆಯೇ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪತ್ರಕರ್ತರಾದ ಗೋಪಾಲ್ ಯಡಗೆರೆ, ಎಸ್. ಚಂದ್ರಕಾಂತ್, ಕೆ. ತಿಮ್ಮಪ್ಪ, ಎನ್. ಮಂಜುನಾಥ್, ಸೂರ್ಯನಾರಾಯಣ್, ಸೇರಿದಂತೆ ಹಲವು ಪತ್ರಕರ್ತರು ಹಾಗೂ ಗಣ್ಯರನ್ನು ಸನ್ಮಾನಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪ್ರಕಾಶ್, ರಾಮಚಂದ್ರಪ್ಪ, ಹನುಮೇಶ್, ತಂಗರಾಜ್, ಮಂಜುನಾಥ್, ಸಿದ್ದಪ್ಪ, ಗಣೇಶಪ್ಪ ಮುಂತಾದವರಿದ್ದರು.