ಶಿವಮೊಗ್ಗ : ಇಡೀ ಜಗತ್ತಿಗೇ ಪ್ರಜಾಪ್ರಭುತ್ವದ ಪರಿಚಯ ಮಾಡಿಕೊಡುವುದರ ಮೂಲಕ ಬಸವಣ್ಣನವರು ಪ್ರಜಾಪ್ರಭುತ್ವದ ಪಿತಾಮಹ ಎನಿಸಿಕೊಕೊಂಡಿದ್ದಾರೆ ಎಂದು ಶ್ರೀ ಬಸವ ಕೇಂದ್ರದ ಡಾ.ಬಸವ ಮರಳುಸಿದ್ದಾರಾಧ್ಯ ಮಹಾಸ್ವಾಮಿಗಳು ಹೇಳಿದರು.
ಅವರು ಕುವೆಂಪು ರಂಗಮಂದಿರದಲ್ಲಿ ಭಾನುವಾರ ವಿದ್ಯುತ್ ಇಲಾಖೆಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘವು ಆಯೋಜಿಸಿದ್ದ ಬಸವ ಜಯಂತಿ ಹಾಗೂ ಸಂಘದ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಬಸವಣ್ಣ ಒಂದು ಚುಂಬಕ ಶಕ್ತಿ. ಬದಲಾಗದೇ ಇರುವ ಮನುಷ್ಯನ ಮೂಲಭೂತ ವಿಚಾರವಾಗಿ ಮಾತನಾಡುವುದನ್ನು ಬಸವಣ್ಣ ಹೇಳಿಕೊಟ್ಟಿದ್ದಾರೆ. ಪ್ರತಿಯೊಬ್ಬರೂ ಗೌರವಯುತವಾಗಿ ಬದುಕುವ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ. ಅಕ್ಷರಗಳ ಪರಿಚಯವೇ ಇಲ್ಲದವ ಜೊತೆ ಅನುಭವ ಮಂಟಪದಲ್ಲಿ ಸಂವಾದ ನಡೆಯುವ ಹಾಗೆ ಮಾಡಿ ಮನುಷ್ಯನಲ್ಲಿದ್ದ ಕೀಳರಿಮೆ ಕಡಿಮೆ ಮಾಡಿದರು ಎಂದು ವಿವರಿಸಿದರು.
ಅನುಭವ ಮಂಟಪದಲ್ಲಿ ಏನೂ ಗೊತ್ತಿಲ್ಲದ ಮಹಿಳೆಯರೂ ಅಭಿವ್ಯಕ್ತಿ ಸ್ವಾತಂತ್ರ್ಯ ಪಡೆದುಕೊಳ್ಳುವಂತೆ ಮಾಡಿದವರು ಬಸವಣ್ಣನವರು. ಬಸವಣ್ಣ ಓರ್ವ ಮಹಾನ್ ಸಂಗೀತಗಾರನೂ ಹೌದು. ಅವರಿಗಿದ್ದ ಸಂಗೀತದಲ್ಲಿನ ಅಪಾರ ಆಸಕ್ತಿಯನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ದಾಸರಿಗಿಂತ ಮೊದಲೇ ಬಸವಾದಿ ಪ್ರಮಥರು ಕರ್ನಾಟಕ ಸಂಗೀತಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ದಾಸರ ಪದಗಳ ಮೇಲೂ ಬಸವಣ್ಣನ ವಚನಗಳ ಪ್ರಭಾವ ಅಪಾರ. ಆದ್ದರಿಂದಲೇ ಇತ್ತೀಚೆಗೆ ಆಯೋಜಿಸಿದ್ದ ಬಸವೋತ್ಸವದ ಲಾಂಚನದಲ್ಲಿ ಬಸವಣ್ಣನವರ ಕೈಯಲ್ಲಿ ಏಕತಾರಿ ವಾದನವನ್ನು ಹಿಡಿಸಿದ್ದು ಎಂದು ಟೀಕಾಕಾರರಿಗೆ ಪ್ರತ್ಯುತ್ತರ ನೀಡಿದರು. ವಿಶ್ವಗುರು ಬಸವಣ್ಣನವರ ಪರಂಪರೆಯನ್ನು ಶಿಕ್ಷಣ, ಸಂಸ್ಕøತಿ, ದಾಸೋಹ ಮತ್ತಿತರ ಎಲ್ಲ ಕ್ಷೇತ್ರಗಳಲ್ಲಿ ಕಾಣಬಹುದಾಗಿದೆ ಎಂದರು.

ಮಾಜಿ ಸಂಸದ ಆಯನೂರು ಮಂಜುನಾಥ ಮಾತನಾಡಿ, ಸರ್ಕಾರ ಬಸವಣ್ಣನವರಿಗೆ ಸಾಂಸ್ಕøತಿಕ ನಾಯಕನ ಬಿರುದು ಕೊಟ್ಟಿದೆ. ಕಾಯಕವೇ ಕೈಲಾಸವೆಂದು ಹೇಳಿದ ಬಸವಣ್ಣನ ಜಯಂತಿಯಂದು ರಜೆ ಘೋಷಿಸುವ ಮೂಲಕ ಬಸವಣ್ಣನ ಸ್ವಭಾವಕ್ಕೆ ಅನರ್ಥ ಕೊಡಲಾಗುತ್ತಿದೆ. ಬಸವ ಜಯಂತಿ ಯಾಂತ್ರಕವಾದರೆ ಏನೂ ಅರ್ಥವಿರುವುದಿಲ್ಲ. ಬಸವಣ್ಣನನ್ನು ಬೇರೆ ತರಹವೇ ಉಪಯೋಗಿಸಲಾಗುತ್ತಿದ್ದು, ವಚನವನ್ನು ಹೇಳುವ ಮೂಲಕ ಪಾಂಡಿತ್ಯ ಪ್ರದರ್ಶನವಾಗುತ್ತಿದೆಯೇ ವಿನ:್ಲವು ನಮ್ಮ ಬದುಕಿನಲ್ಲಿ ಅಳವಡಿಕೆಯಾಗುತ್ತಿಲ್ಲ. ವಚನಗಳ ಪಾವಿತ್ರ್ಯತೆಯನ್ನು ತಿಳಿಸುವ ಅಗತ್ಯತೆ ಇದೆ ಎಂದರು.

ಬಸವಣ್ಣ ರಾಜಕೀಯದ ದಾಳ ಆಗಬಾರದು. ನನ್ನ ಮನೆ, ಮಠ-ಮಂದಿರಗಳಲ್ಲಿ ಬಸವಣ್ಣನ ಯಾವ ವಚನ ಘೋಷವಾಕ್ಯವಾಗಿದೆ ಎಂಬುದನ್ನು ತೋರಿಸಬೇಕು ಎಂದು ಸವಾಲೆಸೆದ ಅವರು ವೀರಶೈವ ಲಿಂಗಾಯತರ ಒಳ ಪಂಗಡಗಳಲ್ಲೇ ಭಿನ್ನಾಭಿಪ್ರಾಯವಿದೆ. ಇವರು 2ಎ ಗೆ ಹೋದರೆ ತಪ್ಪೇನು ಎಂದು ಪ್ರಶ್ನಿಸಿದ ಅವರು ನಾವು ನೈಜ ಬಸವಣ್ಣನ ಪ್ರತಿನಿಧಿಗಳಾಗದೇ ಕೇವಲ ಆರಾಧಕರಾಗಿದ್ದೇವೆ ಎಂದು ಹೇಳಿದರು.
ಬೆಕ್ಕಿನ ಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಡಿ.ಎಸ್.ಅರುಣ್ ಡಾ.ಧನಂಜಯ ಸರ್ಜಿ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಶಂ.ಭು.ಬಳಿಗಾರ, ಎಸ್.ಪಿ.ದಿನೇಶ್, ಎಸ್.ಸಿ.ಶಶಿಧರ್, ರುದ್ರಮುನಿ, ಮಹಾರುದ್ರ, ಇ.ವಿಶ್ವಾಸ, ಜಯದೇವಪ್ಪ, ಎನ್.ವಿ.ಈರೇಶ್, ಎಚ್.ಎಸ್.ಗುರುಮೂರ್ತಿ, ಬೆನಕಪ್ಪ, ಸಂತೋಷ್ ಬಳ್ಳೆಕೆರೆ ಮೊದಲಾದವರಿದ್ದರು.