ಶಿವಮೊಗ್ಗ: ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇಂದು ಬೆಳಗ್ಗೆ ನಗರದ ಕರ್ನಾಟಕ ಸಂಘದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿವಮೊಗ್ಗದ ತುಂಗಾ ತರಂಗ ಪತ್ರಿಕೆಯ ಸಂಪಾದಕ ಹಾಗೂ ನೊಂದವರಿಗೆ ಬೆಳಕಾಗುವ ಎಸ್.ಕೆ.ಗಜೇಂದ್ರ ಸ್ವಾಮಿ ಅವರಿಗೆ ಕನ್ನಡ ಸೇವಾ ರತ್ನ ಪ್ರಶಸ್ತಿ ವಿತರಿಸಲಾಯಿತು.
ಸಂಘದ ಅಧ್ಯಕ್ಷ ಹಾಗೂ ಅನಿಕೇತನ ಕನ್ನಡ ಬಳಗದ ಮಾಯಣ್ಣ ಅವರು ಅಧ್ಯಕ್ಷತೆಯನ್ನು ವಹಿಸಿ ಪ್ರಶಸ್ತಿ ಪ್ರಧಾನ ವಿತರಿಸಿದರು. ಕಾರ್ಯಕ್ರಮವನ್ನು ವಕೀಲರ ಸಂಘದ ಅಧ್ಯಕ್ಷ ಎನ್.ದೇವೇಂದ್ರಪ್ಪ ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಡಾ.ಎಂ.ಅರವಿಂದ್, ಗಾಯತ್ರಿ, ಡಾ.ಆರ್.ಉಮಾಪತಿ ಗಂಗಾರಾಜ್, ವಿನೋದಿನಿ ಆನಂದ, ಡಾ.ನೂರ್‌ಸಮರ್ ಅಬ್ಬಲಗೆರೆ, ಡಾ.ಅಶೋಕ್ ಜಿ.ಎಸ್., ಡಾ.ಹೆಚ್.ಶಿವಲಿಂಗಪ್ಪ, ಡಾ.ರಾಜೇಂದ್ರ ಬುರುಡಿಕಟ್ಟಿ, ಕುಂಸಿ ಉಮೇಶ್, ಪ್ರೊ. ಸತ್ಯನಾರಾಯಣ, ತಿರುಮಲ ಮಾವಿನಕುಳಿ, ಜೆ.ಬಿ.ನಾಗರತ್ನಮ್ಮ, ಡಾ.ಎನ್.ಆರ್.ಮಂಜುಳಾ, ರಾಮು ಎನ್.ರಾಥೋಡ್, ವಿಣಾ ಎ.ಜೆ., ಕೋಟೋಜಿರಾವ್, ಶಶಿಕಲಾ, ಕೆ.ಜೆ.ಸರೋಜ, ಮಂಜಪ್ಪ ಸೇರಿದಂತೆ ಹಲವರಿಗೆ ಪ್ರಶಸ್ತಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವಕೀಲರ ಸಂಘದ ನಿರ್ದೇಶಕ ಭವಾನಿರಾವ್, ವಿಶ್ವ ಕನ್ನಡ
ಮತ್ತು ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ವಿ.ರವೀಶ್, ಅಧ್ಯಕ್ಷ ರವಿಕುಮಾರ್ ಎಂ.ಹೆಚ್.ಸುಕವಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.