ಶಿವಮೊಗ್ಗ : ಶಿವಮೊಗ್ಗ ನಗರದ ಮಲ್ಲಿಕಾರ್ಜುನ ಚಿತ್ರಮಂದಿರದ ಬಳಿ ಅಪ್ಪು ಅಭಿಮಾನಿಗಳಿಂದ ಅವರ ಕಟೌಟ್ ಗೆ ಬೃಹತ್ ಮಲಾರ್ಪಣೆಯನ್ನು ಮಾಡಲಾಯಿತು.
ಪುನೀತ್ ರಾಜ್ ಕುಮಾರ್ ಅವರ ಬಹು ನಿರೀಕ್ಷಿತ ಚಿತ್ರವಾದ ಯುವರತ್ನ ಏ.02ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಇದರಿಂದ ಸಂತಸಗೊಂಡಿರುವ ಅಭಿಮಾನಿಗಳು ಅವರ ಕಟೌಟ್ ಗೆ ಹಾಲಿನ ಅಭಿಷೇಕದೊಂದಿಗೆ ಅದ್ದೂರಿಯಾಗಿ ಸಂಭ್ರಮಿಸಿದರು.
ಪುನೀತ್ ಅವರ ಘೋಷಣೆಗಳನ್ನು ಕೂಗುತ್ತಾ, ಡ್ಯಾನ್ಸ್ ಮಾಡುತ್ತಾ ಭರ್ಜರಿಯಾಗಿಯೇ ಹವಾ ಎಬ್ಬಿಸಿದರು ಎಂದರೆ ತಪ್ಪಗಲಾರದು.



