ಶಿವಮೊಗ್ಗ: ಇತ್ತೀಚಿಗೆ ಭಾರತದ ರಕ್ಷಣಾ ಪಡೆಗಳಿಗಳು ನಡೆಸಿದ ಯಶಸ್ವಿ ಕಾರ್ಯಚರಣೆಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ಹಾಗೆಯೇ ನೆರೆಯ ಪಾಕಿಸ್ಥಾನ ದೇಶದ ಭಯೋತ್ಪಾದಕರು ಹಾಗೂ ಸೈನ್ಯ ಕಾರ್ಯಾಚರಣೆ ನಡೆಸಿರುವ ಉಗ್ರರ ದಮನಕ್ಕೆ ನಮ್ಮ ದೇಶದ ಸೈನಿಕರಿಗೆ

, ರಕ್ಷಣಾ ಪಡೆಗಳಿಗೆ ಇನ್ನೂ ಹೆಚ್ಚಿನ ಆರೋಗ್ಯ ಭಾಗ್ಯ, ಶಕ್ತಿ, ಸಾಮರ್ಥ್ಯ ದಯಪಾಲಿಸುವ ಸಲುವಾಗಿ ಶ್ರೀಹರಿ ವಾಯು ಮತ್ತು ಗುರುಗಳನ್ನು

ಪ್ರಾರ್ಥಿಸಲು ಇದೇ 11.05.2025 ರ ಭಾನುವಾರ ಬೆಳಗ್ಗೆ 8ಕ್ಕೆ ದುರ್ಗಿಗುಡಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಟ್ಟದಲ್ಲಿ ವಿಶೇಷ ಪಾರಾಯಣ ಮತ್ತು ಪೂಜೆಯನ್ನು ಏರ್ಪಡಿಸಲಾಗಿದೆ.

ಈ ಸಂದರ್ಭದಲ್ಲಿ ದೇಶ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಶ್ರೀ ರಾಘವೇಂದ್ರ ಸೇವಾ ಸಮಿತಿಯ ಕಾರ್ಯದರ್ಶಿ ಕೋರಿದ್ದಾರೆ.