
ಶಿವಮೊಗ್ಗ, ಮೇ.7:
ಕರ್ನಾಟಕ ಸರ್ಕಾರ ರಾಜ್ಯದ ಹಲವು ಪೊಲೀಸ್ ಠಾಣೆಗಳ ಇನ್ಸ್ಪೆಕ್ಟರ್ ಗಳ ವರ್ಗಾವಣೆ ಮಾಡಿದ್ದು, ಕಳೆದ 10 ದಿನಗಳ ಹಿಂದೆ ನಡೆದಿದ್ದ ವರ್ಗಾವಣೆ ಆದೇಶವನ್ನು ರದ್ದುಪಡಿಸಿ ಹೊಸಬರನ್ನು ಈಗ ಪಿ ಐ ಪೋಸ್ಟ್ ಗೆ ವರ್ಗಾಯಿಸಿರುವುದು ವಿಶೇಷವೇ ಹೌದು.


ಈ ಹಿಂದೆ ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅಮಾನತ್ತಿನ ಹಿನ್ನೆಲೆಯಲ್ಲಿ ಖಾಲಿಯಾಗಿದ್ದ ಹುದ್ದೆಗೆ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯ ಭರತ್ ಕುಮಾರ್ ಅವರನ್ನು ವರ್ಗಾಯಿಸಿತ್ತು. ಆದರೆ ಈಗ ಆ ವರ್ಗಾವಣೆಯನ್ನು ರದ್ದು ಪಡಿಸಿ ಭರತ್ ಅವರನ್ನು ಮತ್ತದೇ ಮಹಿಳಾ ಪೊಲೀಸ್ ಠಾಣೆಗೆ ವಾಪಸ್ ಕಳುಹಿಸಿದ್ದು, ಶಿವಮೊಗ್ಗ ಟ್ರಾಫಿಕ್ ಇನ್ಸ್ಪೆಕ್ಟರ್ ಆಗಿ ವರ್ಗಾವಣೆಗೊಂಡು ಸ್ಥಳ ನಿರೀಕ್ಷೆಯಲ್ಲಿದ್ದ ಸಂತೋಷವನ್ನು ಸಂತೋಷ್ ಕುಮಾರ್ ಅವರನ್ನು ವರ್ಗಾಯಿಸಲಾಗಿದೆ.




ಅಂತೆಯೇ, ಇತ್ತೀಚೆಗಷ್ಟೇ ಶಿವಮೊಗ್ಗ ಆಂತರಿಕ ಭದ್ರತಾ ವಿಭಾಗದ ಇನ್ಸ್ಪೆಕ್ಟರ್ ಆಗಿದ್ದ ಆರ್ ಗಾಯತ್ರಿ ಅವರನ್ನು ಸಂಚಾರಿ ವಿಭಾಗಕ್ಕೆ ವರ್ಗಾಯಿಸಿತ್ತು. ಈಗ ಆ ವರ್ಗಾವಣೆಯನ್ನು ರದ್ದುಪಡಿಸಿದ್ದು ಗಾಯತ್ರಿ ಅವರನ್ನು ಆಂತರಿಕ ಭದ್ರತಾ ವಿಭಾಗಕ್ಕೆ ವಾಪಸ್ ಕಳಿಸಿದೆ. ಶಿವಮೊಗ್ಗ ಸಂಚಾರಿ ವಿಭಾಗಕ್ಕೆ ಇನ್ಸ್ಪೆಕ್ಟರ್ ಆಗಿ ಉಡುಪಿ ಮಣಿಪಾಲ್ ವಿಭಾಗದ ಇನ್ಸ್ಪೆಕ್ಟರ್ ಆಗಿದ್ದ ದೇವರಾಜ್ ಅವರನ್ನು ವರ್ಗಾಯಿಸಲಾಗಿದೆ.


ಒಟ್ಟಾರೆ ಕಳೆದ ಹತ್ತು ದಿನಗಳ ಹಿಂದಿನ ಆದೇಶದಲ್ಲಿನ ಹಲವರ ವರ್ಗಾವಣೆ ರದ್ದಾಗಿದ್ದು, ಹಲವರು ಹಳೆಯ ಸ್ಥಾನದಲ್ಲಿ ಉಳಿದುಕೊಂಡಿದ್ದು ಸಂಚಾರಿ ವಿಭಾಗಕ್ಕೆ ದೇವರಾಜ್ ಹಾಗೂ ವಿನೋಬನಗರ ಠಾಣೆಗೆ ಸಂತೋಷ್ ಅವರನ್ನು ವರ್ಗಾಯಿಸಿದೆ.