ಶಿವಮೊಗ್ಗ, ಮೇ.06:
ಶಿವಮೊಗ್ಗ ಹೊಸಮನೆ ನಾಲ್ಕನೇ ತಿರುವಿನ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವ ಹಾಗೂ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ಜಯಂತೋತ್ಸವ ಸಮಾರಂಭ ಮೇ 11ರ ಭಾನುವಾರದಂದು ನಡೆಯಲಿದೆ ಎಂದು ಪ್ರಧಾನ ಅರ್ಚಕರಾದ ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ 9:00ಗಂಟೆಗೆ ಶ್ರೀ ಸುಮುಖಭಟ್ಟ ಅವರ ನೇತೃತ್ವದಲ್ಲಿ ಗುರು ಪ್ರಾರ್ಥನೆ, ಪೂಜೆ ನಡೆಯಲಿದ್ದು ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವರ ಸಾಮೂಹಿಕ ಹೋಮ ನಡೆಯಲಿದೆ. ಮಧ್ಯಾಹ್ನ 12:30ಕ್ಕೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗವಿರುತ್ತದೆ ಎಂದಿದ್ದಾರೆ.

ಸಂಜೆ 6ರಿಂದ ಶಿವಮೊಗ್ಗದ ಸಪ್ತ ಸ್ವರ ಟ್ರಸ್ಟ್ ತಂಡದಿಂದ ಭಕ್ತಿಗೀತೆಗಳ ಕಾರ್ಯಕ್ರಮ ಹಾಗೂ ದಾವಣಗೆರೆ ನಮನ ಅಕಾಡೆಮಿಯ ಕುಮಾರಿ ಹಂಸಿಕ ಅವರಿಂದ ಶ್ರೀ ನರಸಿಂಹ ಸ್ವಾಮಿ ದೇವರ ನವರೂಪದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.

ಈ ದಿನದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ಉಪಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ, ಸಂಸದ ಬಿ. ವೈ. ರಾಘವೇಂದ್ರ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮಾಜಿ ಶಾಸಕರಾಧ ಕೆ ಬಿ ಪ್ರಸನ್ನ ಕುಮಾರ್, ಎಸ್ ರುದ್ರೇಗೌಡ, ಎಂ ಎ ಡಿ ಬಿ ಅಧ್ಯಕ್ಷ ಮಂಜುನಾಥಗೌಡ, ಶಾಸಕರಾದ ಚನ್ನಬಸಪ್ಪ, ಡಿಎಸ್ ಅರುಣ್, ಧನಂಜಯ ಸರ್ಜಿ, ಪ್ರಮುಖರಾದ ಆರ್. ಪ್ರಸನ್ನ ಕುಮಾರ್, ಪಿಐ ರವಿ ಪಾಟೀಲ್, ರೇಖಾ

ರಂಗನಾಥ್ ಹಾಗೂ ಇತರರು ಆಗಮಿಸಲಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಲು ಕೋರಿದ್ದಾರೆ.
ವಿನಂತಿ: ದೇವಸ್ಥಾನದ ವಿಸ್ತರಣೆಗಾಗಿ ಪಕ್ಕದ ನಿವೇಶನವನ್ನು ಖರೀದಿಸಿದ್ದು, ಹಣಕಾಸಿನ ಅವಶ್ಯಕತೆ ಇರುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆರ್ಥಿಕ ನೆರವು ನೀಡುವ ಮೂಲಕ ದೇವಸ್ಥಾನವನ್ನು ವಿಸ್ತರಿಸಲು ಸಹಕರಿಸುವಂತೆ ದೇವಸ್ಥಾನದ ಆಡಳಿತಮಂಡಳಿ ಕೋರಿದೆ.