
ನೆಗಿಟೀವ್ ಥಿಂಕಿಂಗ್
ವಾರದ ಅಂಕಣ- 44
ಗಜೇಂದ್ರ ಸ್ವಾಮಿ ಎಸ್. ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)
ಇತ್ತೀಚಿನ ದಿನಮಾನಗಳಲ್ಲಿ ಹೆಚ್ಚುತ್ತಿರುವ ಸಂಸ್ಥೆಗಳೆಂದರೆ ಅದು ಆರೋಗ್ಯದ ಆಸ್ಪತ್ರೆಗಳು ಹಾಗೂ ಶಿಕ್ಷಣ ನೀಡುವ ವಿದ್ಯಾಸಂಸ್ಥೆಗಳು ಎಂದರೆ ತಪ್ಪಾಗಲಿಕ್ಕಿಲ್ಲ. ಎಲ್ಲೆಡೆ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳು ಕಂಡುಬರುತ್ತಿವೆ. ಅವು ದಿನೇ ದಿನೇ ಹೆಚ್ಚಾಗುತ್ತಿವೆ. ಆರೋಗ್ಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇರುವುದೆಲ್ಲವ ಕಳೆದುಕೊಳ್ಳುವ, ಮಕ್ಕಳಿಗೆ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಅತಿ ಹೆಚ್ಚು ಶುಲ್ಕ ಕಟ್ಟುವ ನಮ್ಮ ನಡುವಿನ ಜನರ ಫಲಿತಾಪಗಳು ಈಗ ಇಂತಹ ಸಂಸ್ಥೆಗಳು ಹೆಚ್ಚಲು ಕಾರಣವಾಗಿವೆ ಎಂದರೆ ತಪ್ಪಾಗಲಿಕ್ಕಿಲ್ಲ ಅಲ್ಲವೇ?
ಹಿಂದಿ ನೆಗಿಟೀವ್ ಥಿಂಕಿಂಗ್ ಗಳ ನೋಟ








ಹಾದಿ ಬೀದಿಯಲ್ಲಿ ಹೆಚ್ಚುತ್ತಿರುವ ಆಸ್ಪತ್ರೆ ಹಾಗೂ ಶಾಲೆಗಳು ನಿತ್ಯ ನಿರಂತರ ಸಾಕಷ್ಟು ಜನರನ್ನು ಸೇರಿಸಿಕೊಳ್ಳುತ್ತವೆ. ಇವೆರಡು ವಿಭಾಗಗಳು ಸಮಾಜ ಸೇವೆಯ ಹೆಸರಲ್ಲಿ ನಡೆಯುತ್ತಿವೆಯಾದರೂ, ಸಹ ಇಲ್ಲಿ ಹಣದ ಹೊಳೆ ಹೆಚ್ಚಾಗಿ ಹರಿಯುತ್ತದೆ ಎಂಬುದು ಈ ವಾರದ ನೆಗೆಟಿವ್ ಥಿಂಕಿಂಗ್ ಅಂಕಣದ ವಿಷಯ.

ಈಗಲೂ ಒಂದಿಷ್ಟು ಒಳ್ಳೆಯ ವಿದ್ಯಾ ಸಂಸ್ಥೆಗಳು, ಅತ್ಯುತ್ತಮ ಆಸ್ಪತ್ರೆಗಳು ಸಮಾಜ ಸೇವೆಯ ಉದ್ದೇಶವನ್ನಿಟ್ಟುಕೊಂಡು ಬೆಳೆಯುತ್ತಿವೆ. ಸಮಾಜದ ಸರ್ವರ ಹಿತ ಕಾಪಾಡುತ್ತಿವೆ. ಆದರೆ ಇದನ್ನೊಂದು ಉದ್ಯಮವನ್ನಾಗಿ ಮಾಡಿಕೊಂಡ ಕೆಲವರು ಇದರಲ್ಲೇ ಹಣದ ಹೊಳೆ ಹರಿಸಿಕೊಳ್ಳುತ್ತಾರೆ. ಅದರಲ್ಲಿ ಈಜಾಡುತ್ತಾರೆ ಎಂಬುದು ಕಟು ಸತ್ಯ ಅಲ್ಲವೇ?
ಸಮಾಜದ ಬಹಳಷ್ಟು ಸ್ತರಗಳ ಜನರನ್ನು ಭೇಟಿ ಮಾಡಿದಾಗ ಅವರ ಬಾಯಿಂದ ಬಂದ ಪದ ಸತ್ತರೂ ಪರವಾಗಿಲ್ಲ ಸುಖಾ ಸುಮ್ಮನೆ ಯಾವುದೋ ಚೆಕಿಂಗ್ ಎಂದು ಆಸ್ಪತ್ರೆಗೆ ಹೋಗುವುದು ತಪ್ಪು, ಸರ್ಕಾರದ ಆಸ್ಪತ್ರೆ ಒಂದು ಕಡೆ ಖಾಸಗಿ ಆಸ್ಪತ್ರೆಗಳ ಉದ್ದಾರಕ್ಕಾಗಿ ಕಿವೆ ಏನೋ ಎಂಬಂತಹ ವಾತಾವರಣ ಮೂಡುತ್ತಿದೆ. ಇನ್ನೂ ಸರ್ಕಾರಿ ಶಾಲೆಗಳು ಭೌತಿಕವಾಗಿ ಅಭಿವೃದ್ಧಿ ಹೊಂದದ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳ ಬಂಡವಾಳ ಹೂಡಿಕೆಯ ಮನೋಸ್ಥಿತಿ ನಡುವೆ ಒಂದು ಅಥವಾ ಎರಡು ಮಕ್ಕಳನ್ನು ಹೊಂದಿದ ಸಾಕಷ್ಟು ಪೋಷಕರು ಖಾಸಗಿ ಶಾಲೆಗಳತ್ತ ನೋಡುತ್ತಾರೆ. ಸರ್ಕಾರ ಸರ್ಕಾರಿ ಶಾಲಾ ಕಾಲೇಜುಗಳಿಗೆ ಸಾಕಷ್ಟು ಖರ್ಚು ಮಾಡುತ್ತಿದ್ದರೂ ಸಹ ಅದನ್ನು ಬಳಸಿಕೊಳ್ಳುವಲ್ಲಿ ನಮ್ಮ ನಡುವಿನ ಜನ ಸಮುದಾಯ ವಿಫಲವಾಗುತ್ತಿದೆ ಎಂಬ ಸತ್ಯಾಂಶ ಜಗಜ್ಜಾಹೀರಾಗಿದೆ.

ಒಂದಂತೂ ಸತ್ಯ ಎಲ್ಲಿ ಪುಕ್ಕಟೆಯಾಗಿ ಶಿಕ್ಷಣ ಹಾಗೂ ಆರೋಗ್ಯ ಚಿಕಿತ್ಸೆ ಸಿಗುತ್ತದೋ ಅದಕ್ಕೆ ಜನರ ಮಾನ್ಯತೆ ಅತ್ಯಂತ ಕಡಿಮೆ ಆಗಿದ್ದು, ಹಣ ಖರ್ಚು ಮಾಡಿ ಪಡೆದ ಚಿಕಿತ್ಸೆ ಹಾಗೂ ಶಿಕ್ಷಣ ಅತಿ ಮುಖ್ಯ ಹಾಗೂ ಮಹತ್ತರವೆನಿಸುವುದು ಜನರ ತಪ್ಪಿದ್ದರೆ ಉದ್ಯಮಿಗಳ ಅಥವಾ ಇದನೊಂದು ದಂದೆಯನ್ನಾಗಿ ಮಾಡಿಕೊಂಡವರ ತಪ್ಪಲ್ಲ ಎನ್ನಬೇಕಾಗಿರುವುದು ಅನಿವಾರ್ಯವಾಗಿದೆ.
ಈ ನಮ್ಮ ಜಗತ್ತು ಹೇಗಿದೆ ಎಂದರೆ ಯಾವುದೋ ಆಸ್ಪತ್ರೆ ಮುಂದೆ ವಾರಕ್ಕೊಮ್ಮೆ ಅಥವಾ ಎರಡು ದಿನಕ್ಕೊಮ್ಮೆ ಬಡವರಿಗೆ ನಿರ್ಗತಿಕರಿಗೆ ಅನ್ನದಾನ ಮಾಡಿದರೆ, ಅಲ್ಲಿ ಬರುವವರ ಸಂಖ್ಯೆ ಅತ್ಯಂತ ಕಡಿಮೆ. ಅದೇ ನಿನ್ನೆ ಅನ್ನವನ್ನು ಇಂದು ಬಿಸಿ ಮಾಡಿ ರೊಕ್ಕ ಪಡೆದು ಮಾರುವವನ ಬಳಿ ಜನ ಜಂಗುಳಿಗೆ ಜಂಗುಳಿಯೇ ನೆರೆದಿರುತ್ತದೆ ಎಂದರೆ ಇದು ಯಾರ ಯಾವ ಬಗೆಯ ತಪ್ಪು ಎಂಬುದನ್ನು ನಾವು ಅವಲೋಕಿಸ ಬೇಕಾಗಿರುವುದು ಅನಿವಾರ್ಯವಾಗಿದೆಯಲ್ಲವೇ?

ನಮ್ಮ ನಡುವಿನ ಶಿಕ್ಷಣ ದಿನೇದೇನೇ ಬದಲಾಗುತ್ತಿದೆ. ಹಿಂದಿನ ಕಲಿಕೆ ಈಗ ತನ್ನ ಮಾರ್ಗವನ್ನು ಹೊಸ ಹೊಸ ರೂಪದಲ್ಲಿ ಮುಂದೆ ತರುತ್ತಿದೆ. ಆಧುನಿಕ ಯುಗದ ವೈಜ್ಞಾನಿಕ ಚಿಂತನೆಗಳು ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಿದೆ ಈ ಬದಲಾವಣೆಗಳು ಹೊಸ ತಲೆಮಾರಿನ ಚಿಂತನೆಗಳಿಗೆ ಪೂರಕವಾಗಿದೆ ಆದರೂ ಸಹ ಅಲ್ಲಿ ಸೌಜನ್ಯ ಸಹಕಾರ ಮನೋಭಾವನೆ ಮರೆಯಾಗುತ್ತಿರುವುದು ದುರಂತವೇ ಹೌದು. ಇಂತಹ ದುರಂತಗಳ ನಡುವೆ ಮಕ್ಕಳು ಟಾಕೂಟೀಕು ಎಂದು ಇಂಗ್ಲೀಷಲ್ಲಿ ಮಾತನಾಡಲಿ ಎಂಬ ಕನಸು ಹೊತ್ತ ಪೋಷಕರು ತಾವು ಜೀವನಪೂರ್ತಿ ಖರ್ಚು ಮಾಡದಷ್ಟು ಹಣದ ಬಟ್ಟೆಗಳನ್ನು ಹಾಗೆಯೇ ಶೂಗಳನ್ನು ಮಕ್ಕಳಿಗೆ ಕೊಡಿಸುತ್ತಾರೆ. ದುಬಾರಿ ದರದ ಶುಲ್ಕ ನೀಡಿ ಶಾಲೆಗೆ ಸೇರಿಸುತ್ತಾರೆ ಎಂಬುದು ನಮ್ಮ ನಡುವೆ ಕಾಣುತ್ತಿರುವ ಸತ್ಯ ಅಲ್ಲವೇ?
ಹೊಟ್ಟೆ ನೋವು ಎಂದು ಉನ್ನತ ಮಟ್ಟದ ಆಸ್ಪತ್ರೆಗೆ ಹೋದರೆ ನಿಮ್ಮನ್ನು ಹೊಟ್ಟೆಯಿಂದ ಹೃದಯಕ್ಕೆ, ಕಿಡ್ನಿಗೆ ಇಲ್ಲವೇ ಮೆದುಳಿನ ಸಮಸ್ಯೆ ಎಂದು ಗಾಬರಿ ಹುಟ್ಟಿಸಿರುವ ಸಂಗತಿಗಳನ್ನು ಸಾಕಷ್ಟು ಬಾರಿ ಕೇಳಿದ್ದೇವೆ ನೋಡಿದ್ದೇವೆ ಅನುಭವಿಸಿದ್ದೇವೆ.
ವೈದ್ಯರು ದೇವರಿದ್ದಂತೆ ಎಂಬ ನಮ್ಮ ಮನದ ಭಾವನೆ ಏಕೆ ತಪ್ಪಾಗುತ್ತಿದೆಯೋ? ಏಕೆ ನಮಗೆ ಭ್ರಮೆ ಬರುತ್ತದೆಯೋ, ಬರುವಂತೆ ಮಾಡುತ್ತದೆಯೋ ಗೊತ್ತಿಲ್ಲ. ಆದರೆ ಕಾಲು ನೋವು ಹೋಗಿ ತಲೆಯ ನೋವಿನ ಸಮಸ್ಯೆಗೆ ಸಿಲುಕುದು ಅತ್ಯಂತ ವಿಶೇಷವೇ ಹೌದು.
ಇತ್ತೀಚಿನ ಒಂದು ಘಟನೆಯನ್ನು ನಿಮಗೆ ಹೇಳಲೇಬೇಕು. ಕುತ್ತಿಗೆಯ ಬಳಿ ಆಗಿದ್ದ ಚರ್ಮದ ಗಾಯದ ಸ್ವರೂಪಕ್ಕೆ ಚರ್ಮರೋಗ ತಜ್ಞನ ಬಳಿ ಹೋದಾಗ ಆತ ಚರ್ಮದ ಸಮಸ್ಯೆ ಬದಿಗಿಟ್ಟು, ನೀವು ದಪ್ಪಗಿದ್ದೀರಿ ನಿಮ್ಮ ರಕ್ತ ಪರೀಕ್ಷಿಸಿಕೊಳ್ಳಿ ಎಂದು ಊಟಕ್ಕೆ ಮೊದಲು ಹಾಗೂ ಊಟದ ನಂತರ ಹತ್ತಾರು ಚೆಕಪ್ ಗಳನ್ನು ಇಂತಹದೇ ಕಡೆ ಹೋಗಿ ಎಂದು ಬರೆದುಕೊಟ್ಟ ಪುಣ್ಯಾತ್ಮನ ಬಗ್ಗೆ ಕೊನೆಗೆ ತಿಳಿದಿದ್ದೇನೆ. ಅಲ್ಲಿ ಚೆಕ್ ಅಪ್ ಮಾಡಿಸಿಕೊಂಡರೆ ಆತನಿಗೆ ಶೇಕಡ 40ರಷ್ಟು ಹಣ ಹೋಗುತ್ತದೆಯಂತೆ. ದುಡ್ಡು ಮಾಡಲು ಇಂತಹ ತಂದೆ ನಡೆಸುವ ಕೆಲವೇ ಕೆಲವು ವೈದ್ಯರ ನಡುವೆ ಇಡೀ ವೈದ್ಯ ಸಮುದಾಯ ತಲೆತಗ್ಗಿಸಬೇಕಾಗಿರುವುದು ದುರಂತವೇ ಹೌದು.
ಚಂದದ ಶಾಲೆ ಮಾಡಿ ಮಕ್ಕಳ ಮನದಲ್ಲಿ ಆಧ್ಯಾತ್ಮದ ಮೂಲಕ ವೈಜ್ಞಾನಿಕ ಶಿಕ್ಷಣ ನೀಡುವ ಅದೆಷ್ಟೋ ಶಿಕ್ಷಣ ಸಂಸ್ಥೆಗಳು ಈ ನಡುವಿನ ಕೆಲವು ಹಣ ಬಕಾಸುರ ವಂಶದ ಉದ್ಯಮಿಗಳ ಶಿಕ್ಷಣ ಸಂಸ್ಥೆಗಳ ನಡುವೆ ತಲೆತಗ್ಗಿಸಬೇಕಾಗಿರುವುದು ದುರಂತವೇ ಹೌದು ಅಲ್ಲವೇ?