ಶಿವಮೊಗ್ಗ : ಎಪ್ರಿಲ್ ೨೯ : : ಕಳೆದ ಕೆಲವು ವರ್ಷಗಳಿಂದ ಮನೆಹಾನಿಗೊಳಗಾದ ಸಂತ್ರಸ್ಥರಿಗೆ ವಿವಿಧ ಕಾರಣಗಳಿಗಾಗಿ ಸರ್ಕಾರದಿಂದ ನಿಯಮಾನುಸಾರ ದೊರೆಯಬೇಕಾದ ಆರ್ಥಿಕ ನೆರವು, ಸೌಲಭ್ಯಗಳು ದೊರೆಯದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಈ ಕುರಿತು ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಶೀಘ್ರವೇ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತ ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಹೇಳಿದರು.

ಅವರು ಇಂದು ಜಿಲ್ಲಾ ಪಂಚಾಯಿತಿಯ ಅಬ್ದುಲ್ನಜೀರ್ಸಾಬ್ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮಳೆಯಿಂದ ಹಾನಿಗೊಳಗಾಗಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಹಾಗೂ ಸಾರ್ವಜನಿಕರಿಂದ ದೂರುಗಳು ಬಾರದಂತೆ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಪಾಲಿಕೆಯ ಜವಾಭ್ದಾರಿಯುತ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.

೨೦೧೫ಕ್ಕಿಂತ ಹಿಂದೆ ಹಾಗೂ ಹಲವು ತಲೆಮಾರುಗಳಿಂದ ಭೂಸಾಗುವಳಿ ಮಾಡಿಕೊಂಡು ಬರುತ್ತಿರುವ ಕೃಷಿಕರಿಗೆ ಅರಣ್ಯಾಧಿಕಾರಿಗಳು ನೋಟೀಸ್ನೀಡಿ ಒಕ್ಕಲೆಬ್ಬಿಸಲು ಯತ್ನಿಸುತ್ತಿರುವುದು ಅಮಾನವೀಯ. ಸರ್ಕಾರದ ಆದೇಶವನ್ನು ಉಲ್ಲಂಘಿಸಿ ನೋಟೀಸ್ನೀಡಿ, ಅಮಾಯಕ ರೈತರನ್ನು ಆತಂಕಕ್ಕೆ ತಳ್ಳಿರುವ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶ್ರೀಮತಿ ಶಾರದಾಪೂರ್ಯನಾಯ್ಕ ಅವರು ಸಭೆಯ ಗಮನಕ್ಕೆ ತಂದರು. ಸಚಿವರು ಸರ್ಕಾರದ ಆಧೇಶವನ್ನು ಮೀರಿ ಕ್ರಮಕ್ಕೆ ಮುಂದಾಗಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ದ್ವಿತೀಯ ಪಿ.ಯು.ಸಿ.ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಉತ್ತೀರ್ಣರಾದ ವಿದ್ಯಾರ್ಥಿನಿ ಕು. ದೀಕ್ಷಿತಾ ಆರ್.ಮತ್ತು ಪೋಷಕರಿಗೆ ಗೌರವಿಸಿದ ನಂತರ ಸಚಿವರು ಮಾತನಾಡಿ, ದ್ವಿತೀಯ ಪಿ.ಯು.ಸಿ.ಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಪೈಕಿ ಸುಮಾರು ೭೯೦೦೦ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಸುಧಾರಣೆಗಾಗಿ ದ್ವಿತೀಯ ಮತ್ತು ತೃತೀಯ ಹಂತದ ಉಚಿತ ಪೂರಕ ಪರೀಕ್ಷೆಗೆ ಹಾಜರಾಗುತ್ತಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ. ಅರ್ಹ ವಿದ್ಯಾರ್ಥಿಗಳು ಈ ಸದವಕಾಶದಲಾಭ ಪಡೆದುಕೊಳ್ಳಬೇಕು. ಈ ಕ್ರಮ ದೇಶದಲ್ಲಿಯೇ ಮೊದಲನೆಯದಾಗಿದ್ದು, ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ ಎಂದರು.
ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಅನ್ವಯಗೊಳ್ಳುವಂತೆ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳನ್ನು ಆರಂಭಿಸಲು ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಈ ತರಗತಿಗಳು ಅಂಗನವಾಡಿ ಕೇಂದ್ರಕ್ಕೆ ಪರ್ಯಾಯವಲ್ಲ. ಅಂಗನವಾಡಿಗಳು ಎಂದಿನಂತೆ ಕಾರ್ಯನಿರ್ವಹಲಿವೆ ಎಂದರು.

ಅಲ್ಲದೇ ಇದೇ ವರ್ಷದಿಂದ ಶಾಲೆಗಳಲ್ಲಿ ಸ್ಕಿಲ್ಅಟ್ಸ್ಕೂಲ್ಯೋಜನೆಯಡಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ, ವಿಜ್ಞಾನ, ಮಾದಕ ವ್ಯಸನದಿಂದುಂಟಾಗುವ ಪರಿಣಾಮಗಳು, ಮತ್ತಿತರ ಮಾಹಿತಿಯುಕ್ತ ತರಗತಿಗಳನ್ನು ಆರಂಬಿಸಲು ಉದ್ದೇಶಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಜೂನ್೩೦ರೊಳಗಾಗಿ ಪಠ್ಯಕ್ರಮ ವಿನ್ಯಾಸಗೊಳ್ಳಲಿದೆ ಎಂದ ಅವರು, ಈ ವಿಷಯಕ್ಕೆ ಸಂಬಂಧಿಸಿದಂತೆ ಹಿರಿಯರ ಅನುಭವ ಹಾಗೂ ತಜ್ಞರ ಸಲಹೆ-ಸೂಚನೆಗಳನ್ನು ಪಡೆದುಕೊಳ್ಳಲಾಗುವುದು ಎಂದರು.
ಗ್ರಾಮೀಣ ಪ್ರದೇಶದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರ ಕೊರತೆ ಇದ್ದು, ಅದರ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ವಿಧಾನ ಪರಿಷತ್ಸದಸ್ಯೆ ಶ್ರೀಮತಿ ಭಾರತಿಶೆಟ್ಟಿ ಅವರು ಸಚಿವರ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಸರ್ಕಾರಿ ಕೋಟಾದಡಿಯಲ್ಲಿ ವೈದ್ಯಕೀಯ ಪದವಿ ಪಡೆದ ವೈದ್ಯರು ಕಡ್ಡಾಯವಾಗಿ ಒಂದು ವರ್ಷ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಸರ್ಕಾರದ ಆದೇಶ ಹೊರಡಿಸುವಂತೆ ವಿಧಾನ ಪರಿಷತ್ಸದಸ್ಯ ಡಾ|| ಧನಂಜಯ ಸರ್ಜಿ ಅವರು ಸಚಿವರಲ್ಲಿ ಮನವಿ ಮಾಡಿದರು.

ಜಲಜೀವನ್ಮಿಷನ್ಯೋಜನೆಯಡಿಯಲ್ಲಿ ನಿಗಧಿಪಡಿಸಿದ ಕಾಲಮಿತಿಯಲ್ಲಿ ನಿರೀಕ್ಷಿತ ಪ್ರಗತಿ ಆಗದಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ. ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವುದು ಸವಾಲಿನ ಕೆಲಸವಾಗಿದೆ. ಈ ಸಂಬಂಧ ಸಂಬಂಧಿತ ಇಲಾಖಾ ಅಧಿಕಾರಿಗಳು ಹೋಬಳಿ ಮಟ್ಟದಲ್ಲಿ ಸಭೆ ನಡೆಸಿ, ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸಚಿವರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮೇ ೧೫ರೊಳಗಾಗಿ ಜಲಜೀವನ್ಮಿಷನ್ಯೋಜನೆಯಡಿ ನೀರು ಒದಗಿಸಲು ವಿದ್ಯುತ್ಸಂಪರ್ಕ ಒದಗಿಸುವಂತೆ ಜಿ.ಪಂ. ಸಿ.ಇ.ಒ ಎನ್.ಹೇಮಂತ್ಅವರು ಮೆಸ್ಕಾಂ ಅಭಿಯಂತರರಿಗೆ ತಾಕೀತು ಮಾಡಿದರು.
ಸಭೆಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ಶ್ರೀಮತಿ ಭಾರತಿ ಶೆಟ್ಟಿ, ಶ್ರೀಮತಿ ಬಲ್ಕಿಶ್ಬಾನು, ಡಾ|| ಧನಂಜಯ ಸರ್ಜಿ, ಚಂದ್ರಭೂಪಾಲ, ಕೆ.ಡಿ.ಪಿ.ಸಭೆಯ ನಾಮನಿರ್ದೇಶಿತ ಸದಸ್ಯರು, ಜಿಲ್ಲಾಧಿಕಾರಿ ಗುರುದತ್ತಹೆಗಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಜಿಲ್ಲಾ ಪೊಲೀಸ್ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ಕುಮಾರ್ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
? ಮುಂಗಾರು ಮಳೆಯಿಂದ ನಗರದ ರಸ್ತೆ, ಚರಂಡಿಗಳು ಜಲಾವೃತಗೊಂಡು ಸಂಭಾವ್ಯ ಹಾನಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯ ಎಲ್ಲಾ ರಸ್ತೆ, ಚರಂಡಿ, ರಾಜಾಕಾಲುವೆಗಳನ್ನು ಸ್ವಚ್ಚವಾಗಿಟ್ಟುಕೊಳ್ಳಲು ಸೂಚಿಸಲಾಗಿದೆ. ನಗರದ ರಸ್ತೆಗಳ ಇಕ್ಕೆಲಗಳಲ್ಲಿ ಒಣಗಿದ ಹಾಗೂ ದುರ್ಬಲವಾಗಿರುವ ಮರಗಳನ್ನು ತೆರವುಗೊಳಿಸಲು ಮಹಾನಗರಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳಬಹುದಾದ ಸಾಧ್ಯತೆ ಇದ್ದು, ಅದರ ನಿಯಂತ್ರಣಕ್ಕಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ೦೪ಭೂಕುಸಿತ ಪ್ರದೇಶಗಳನ್ನು ಗುರುತಿಸಲಾಗಿದ್ದು, ಅದರ ದುರಸ್ತಿ ಹಾಗೂ ಅಭಿವೃದ್ಧಿ ಕಾರ್ಯಗಳಿಗಾಗಿ ೪೫೦ಕೋಟಿ ರೂ.ಗಳು ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತಹೆಗಡೆ ಅವರು ಸಚಿವರ ಗಮನಕ್ಕೆ ತಂದರು.
? ಕಳೆದ ಕೆಲವು ವರ್ಷಗಳಿಂದ ಮನೆಹಾನಿಗೊಳಗಾಗಿರುವ ಸಂತ್ರಸ್ಥ ಕುಟುಂಬಗಳ ಸದಸ್ಯರಿಗೆ ಸರ್ಕಾರದಿಂದ ನಿಯಮಾನುಸಾರವಾಗಿ ನೀಡಬೇಕಾದ ಸೌಲಭ್ಯವನ್ನು ವಿತರಿಸದಿರುವುದು ಕಂಡು ಬಂದಿದೆ. ಸಂಬಂಧಿಸಿದ ಇಲಾಖಾಧಿಕಾರಿಗಳು ಈ ಬಗ್ಗೆ ಕೂಡಲೇ ಗಮನಹರಿಸಿ ಸಂತ್ರಸ್ಥರಿಗೆ ಸೌಲಭ್ಯ ದೊರಕಿಸಿಕೊಡುವಂತೆ ಸೂಚಿಸಿದೆ. _ ಬೇಳೂರು ಗೋಪಾಲಕೃಷ್ಣ, ಶಾಸಕರು.
? ಹರಿಗೆ, ಮಾಚೇನಹಳ್ಳಿ ಮುಂತಾದ ಕೈಗಾರಿಕಾ ವಲಯಗಳಲ್ಲಿ ಕೈಗಾರಿಕೆಗಳ ನಿರ್ಮಾಣ ಉದ್ದೇಶಕ್ಕಾಗಿ ಮಂಜೂರಾತಿ ಮಾಡಿಕೊಂಡ ಪ್ರದೇಶವನ್ನು, ಭೂಪರಿವರ್ತಿಸಿಕೊಂಡು ಕೆಲವರು ಬಡಾವಣೆಗಳನ್ನು ಸೃಜಿಸಲು ಮುಂದಾಗಿರುವುದು ಆಕ್ಷೇಪಾರ್ಹ ಸಂಗತಿ. ಯಾವ ಉದ್ದೇಶಕ್ಕಾಗಿ ಭೂಮಿಯನ್ನು ಮಂಜೂರು ಮಾಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಬಳಕೆಯಾಗಬೇಕು. ದುರ್ಬಳಕೆ ಸಲ್ಲದು. ಅಂತಹ ಕೈಗಾರಿಕೋದ್ಯಮಿಗಳಿಗೆ ನೀಡಿದ ಭೂಮಿಯನ್ನು ಹಿಂಪಡೆದು, ಪರವಾನಿಗೆ ರದ್ದುಗೊಳಿಸಲು ಸಚಿವರು ಗಮನಹರಿಸಬೇಕು. ಶ್ರೀಮತಿ ಬಲ್ಕಿಶ್ಬಾನು, ವಿಧಾನ ಪರಿಷತ್ಸದಸ್ಯರು.
? ಕಳೆದ ವರ್ಷವೊಂದರಲ್ಲಿಯೇ ೨೨೫ಮನೆಗಳು ಮಳೆಹಾನಿಗೊಳಗಾಗಿವೆ. ಪ್ರಸಕ್ತ ಸಾಲಿನಲ್ಲಿ ಸಾಗರ ತಾಲೂಕು ಒಂದರಲ್ಲಿ ೭೪ಮನೆಗಳು ಹಾನಿಗೊಳಗಾಗಿರುವ ಮಾಹಿತಿ ಇದೆ. ಇವುಗಳಿಗೆ ಮುಂದಿನ ಮೂರು-ನಾಲ್ಕು ದಿನಗಳೊಳಗಾಗಿ ಪರಿಹಾರಧನ ವಿತರಣೆಗೆ ಕ್ರಮ ವಹಿಸಲಾಗುವುದು. – ಸಿದ್ಧಲಿಂಗರೆಡ್ಡಿ, ಅಪರ ಜಿಲ್ಲಾಧಿಕಾರಿಗಳು.
? ರೆಡ್ಕ್ರಾಸ್ಸಮಾಜ ಸೇವಾ ಸಂಸ್ಥೆಯು ಜಿಲ್ಲೆಯ ಕಿವುಡ ಫಲಾನುಭವಿಗಳನ್ನು ಗುರುತಿಸಿ, ಉಚಿತವಾಗಿ ಶ್ರವಣಸಾಧನಗಳನ್ನು ವಿತರಿಸುತ್ತಿದೆ. ಶ್ರವಣಸಾಧನ ಬಯಸುವ ಫಲಾನುಭವಿಗಳು ಅಗತ್ಯ ಮಾಹಿತಿಯೊಂದಿಗೆ ಪ್ರಸ್ತಾವನೆ ಸಲ್ಲಿಸಿ, ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಅರ್ಹರಿಗೆ ವೀಲ್ಚೇರ್ಗಳನ್ನು ಸಹ ನೀಡುತ್ತಿದೆ. ಫಲಾನುಭವಿಗಳು ಈ ಸೌಲಭ್ಯದ ಲಾಭ ಪಡೆದುಕೊಂಡು ಹಿಂದಿರುಗಿಸಬಹುದಾಗಿದೆ. ರೆಡ್ಕ್ರಾಸ್ಸ್ವಯಂಸೇವಾ ಸಂಸ್ಥೆಯ ಜನಪರ ಕಾರ್ಯ ಶ್ಲಾಘನೀಯವಾಗಿದೆ. ? ಎಸ್.ಮಧು ಬಂಗಾರಪ್ಪ, ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು.