ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಆಸ್ತಿಯ ಈ ಸ್ವತ್ತು ಮಾಡಿಸಿಕೊಳ್ಳಲು ಬರುವ ನಾಗರಿಕರಿಗೆ ಪಾಲಿಕೆಯ ಕೆಲ ಅಧಿಕಾರಿಗಳು ಮಾನಸಿಕ ಹಿಂಸೆ ನೀಡುತ್ತಿದ್ದಾರೆ,ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ಸಾರ್ವಜನಿಕರು ಅರೋಪಿಸಿದ್ದಾರೆ.

ಈ ಸ್ವತ್ತು ಅಥವಾ ಈ ಅಸ್ತಿ ಮಾಡಿಕೊಳ್ಳಲು ಜನರು ತರುವ ದಾಖಲೆಗಳು ಬಿಲ್ ಕಲೆಕ್ಟರ್ ಮೂಲಕ ದಾಖಲೆಗಳು ಸರಿಯಾಗಿದ್ದೇಯೇ ಇಲ್ಲವೇ ಎಂದು ಪರಿಶೀಲಿಸಿ ತದನಂತರ ಅದನ್ನು ಡಾಟಾ ಎಂಟ್ರಿಗೆ ಕಳಿಸಿ ಅಲ್ಲಿಂದ ಬರುವ ಅಕ್ಲಾಜ್ಮೆಂಟ್ ಅನ್ನು
ನಾಲ್ಕರಿಂದ ಐದು ಅಧಿಕಾರಿಗಳಿಗೆ ಲಾಗಿನ್ ಅಗಿ ಬರುವ ವೇಳೆಗೆ ಜನ ಸುಸ್ತಾಗಿ ಹೈರಾಣುರಾಗುತ್ತಾರೆ.
ಅದರೆ, ಕೆಲ ವಾರ್ಡ್ ಗಳ ಬಿಲ್ ಕಲೆಕ್ಟರ್ಗಳು ಡಬಲ್ ಗೇಮ್ ಅಟ ಅಡಲು ಶುರುಮಾಡಿದ್ದಾರೆ ಎಂಬ ಅರೋಪವಿದೆ.


ಇಲ್ಲಿ ದಾಖಲೆಗಳು ಸರಿಯಾಗಿದ್ದರೂ ಸಹ ದಾಖಲೆಗಳು ಸರಿ ಅಗಿ ಇಲ್ಲ ನಾಳೆ ಬನ್ನಿ, ದಾಖಲೆ ಕಳೆದಿದೆ ಮತ್ತೋಮ್ಮೆ ತನ್ನಿ, ಸರ್ವರ್ ಬಿಜಿ ಇದೆ ಎಂದು ಜನರ ತಾಳ್ಮೆ ಕೆಡಿಸುವ ಕೆಲಸ ಪಾಲಿಕೆಯ ಕೆಲ ಬಿಲ್ ಕಲೆಕ್ಟರ್ ಗಳು ಮಾಡುತ್ತಿದ್ದಾರೆ. ಎಂದು ಸಾರ್ವಜನಿಕರು ಅರೋಪಿಸಿದ್ದಾರೆ.

ಆದ್ಯಾವ ಕಾರಣಕ್ಕೆ ಹೀಗೆ ಮಾಡುತ್ತಾರೆ ? ಅವರಿಗೆ ಏನಾದರು ಕಾಣಿಕೆ ನೀಡಬೇಕಾ? ಅಥವಾ ನೋಟು ನೀಡಿ ಅವರ ಕೈ ಬಿಸಿ ಮಾಡಬೇಕಾ ? ಯಾಕಿಷ್ಟು ಅಲೆದಾಡಿಸುತ್ತಾರೆ. ಈ ಬಗ್ಗೆ ಪಾಲಿಕೆಯ ಅಯುಕ್ತರು ಮೇಲಾಧಿಕಾರಿಗಳು ಸ್ವಲ್ಪ ಗಮನಹರಿಸಿ ಬಿಲ್ ಕಲೆಕ್ಟರ್ ಗಳಿಗೆ ಸ್ವಲ್ಪ ಕ್ಲಾಸ್ ತಗೆದುಕೊಳ್ಳಿ ಎಂದು ಸಾರ್ವಜನಿಕರು ಅಗ್ರಹಿಸಿದ್ದಾರೆ .